Site icon Vistara News

Team India | ರಾಹುಲ್ ಅಲ್ಲ, ಪಾಂಡ್ಯ ಕೂಡ ಅಲ್ಲ, ಇವರೇ ಆಗಲಿ ಕ್ಯಾಪ್ಟನ್‌ ಎಂದ ಮಾಜಿ ಕ್ರಿಕೆಟಿಗ ಮಣಿಂದರ್‌ ಸಿಂಗ್‌

Shreyas Iyer

ನವ ದೆಹಲಿ : ರೋಹಿತ್‌ ಶರ್ಮ ಇನ್ನು ಹೆಚ್ಚು ದಿನ ಟೀಮ್‌ ಇಂಡಿಯಾದ (Team India) ಕ್ಯಾಪ್ಟನ್‌ ಆಗಿರುವುದಿಲ್ಲ. ಹಾರ್ದಿಕ್‌ ಪಾಂಡ್ಯಗೆ ತಂಡದ ಹೊಣೆಗಾರಿಕೆಯನ್ನು ಬಿಸಿಸಿಐ ನೀಡಬಹುದು ಎಂಬುದಾಗಿ ಎಲ್ಲ ಕಡೆಯೂ ಚರ್ಚೆಗಳು ನಡೆಯುತ್ತಿವೆ. ಅಂತೆಯೇ ಇನ್ನೂ ಕೆಲವರು ಉಪನಾಯಕ ಕೆ. ಎಲ್‌ ರಾಹುಲ್‌ಗೆ ಭಾರತ ತಂಡದ ನಾಯಕತ್ವ ನೀಡಬೇಕು ಎಂಬುದಾಗಿ ಹೇಳುತ್ತಿದ್ದಾರೆ. ಇವೆಲ್ಲದರ ನಡುವೆ ಮಾಜಿ ಕ್ರಿಕೆಟಿಗ ಮಣಿಂದರ್ ಸಿಂಗ್‌ ಅವರು ಹೊಸ ಹೆಸರೊಂದನ್ನು ಸೂಚಿಸಿದ್ದಾರೆ.

ಅವರೇ ಟೀಮ್‌ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌. ಹಿಂದೂಸ್ತಾನ್‌ ಟೈಮ್ಸ್‌ ಜತೆ ಮಾತನಾಡಿದ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್‌ ಮಣಿಂದರ್ ಸಿಂಗ್‌ “ರೋಹಿತ್‌ ಶರ್ಮಾ ಅವರ ಸ್ಥಾನವನ್ನು ತುಂಬಲು ಶ್ರೇಯಸ್‌ ಅಯ್ಯರ್‌ ಸೂಕ್ತ ಆಯ್ಕೆ. ಭಾರತ ತಂಡದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ ನಿಸಿಕೊಂಡಿರುವ ಅವರು ತಂಡದ ಪರವಾಗಿ ಉತ್ತಮವಾಗಿ ಬ್ಯಾಟ್‌ ಮಾಡುವ ಜತೆಗೆ ನಾಯಕತ್ವದಲ್ಲೂ ಯಶಸ್ಸು ಕಾಣಬಲ್ಲರು,” ಎಂದು ಹೇಳಿದ್ದಾರೆ.

“ಕಳೆದ ಮೂರು ನಾಲ್ಕು ವರ್ಷಗಳಿಂದ ನೋಡುವುದಾದರೆ ಶ್ರೇಯಸ್‌ ಅಯ್ಯರ್‌ ನನ್ನ ಫೇವರಿಟ್‌ ಕ್ರಿಕೆಟಿಗ. ಅವರು ಭಾರತ ತಂಡದ ನಾಯಕರಾಗಲಿ ಎಂಬುದೇ ನನ್ನ ಅಭಿಲಾಷೆ. ಅವರು ಐಪಿಎಲ್‌ನಲ್ಲಿ ಡೆಲ್ಲಿ ತಂಡದ ನಾಯಕರಾಗಿದ್ದರು. ಆ ವೇಳೆಯೂ ಒಳ್ಳೆಯ ಚಿಂತಕನ ರೀತಿ ಕಾಣುತ್ತಿದ್ದರು. ಬ್ಯಾಟಿಂಗ್‌ಗೆ ಬರುವ ವೇಳೆಯೂ ಅವರು ದೃಢವಾಗಿರುತ್ತಾರೆ ಹಾಗೂ ರನ್‌ ಗಳಿಸಲು ಯೋಜನೆ ಹಾಕಿರುತ್ತಾರೆ. ಒಂದು ಓವರ್‌ನಲ್ಲಿ ಫೋರ್‌ ರನ್‌ ಬರದೇ ಹೋದರೆ ಮುಂದಿನ ಓವರ್‌ನಲ್ಲಿ ಸ್ಟ್ರೈಕ್‌ ಬದಲಿಸುವ ಮೂಲಕ ರನ್‌ ಕೂಡಿಕೆಗೆ ಪ್ರಯತ್ನಿಸುತ್ತಾರೆ. ಒಂದು ಮತ್ತು ಎರಡು ರನ್‌ಗಳನ್ನು ಕದಿಯಲು ಯತ್ನಿಸುತ್ತಾರೆ,” ಎಂಬುದಾಗಿ ಮಣಿಂದರ್‌ ಹೊಗಳಿದ್ದಾರೆ.

ಇದನ್ನೂ ಓದಿ | INDvsBAN | ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ, ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 1 ವಿಕೆಟ್‌ ವೀರೋಚಿತ ಸೋಲು

Exit mobile version