Site icon Vistara News

Team India | ಟಿ20 ವಿಶ್ವ ಕಪ್‌ ತಂಡಕ್ಕೆ ದೀಪಕ್‌ ಚಾಹರ್‌ ಆಯ್ಕೆಯಾದರೆ ಲಾಭ ಎಂದ ಮಾಜಿ ಕ್ರಿಕೆಟಿಗ

Team India

ಮುಂಬಯಿ : ದೀಪಕ್ ಚಾಹರ್ ಅವರನ್ನು ಟಿ೨೦ ವಿಶ್ವ ಕಪ್‌ಗೆ ತೆರಳುವ ಭಾರತ ತಂಡಕ್ಕೆ (Team India) ಆಯ್ಕೆ ಮಾಡಿದರೆ ಅನುಕೂಲಕ ಎಂದು ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ. ಚಾಹರ್‌ ಏಷ್ಯಾ ಕಪ್‌ನಲ್ಲಿ ಅಫಘಾನಿಸ್ತಾನ ವಿರುದ್ಧದ ಕೊನೇ ಪಂದ್ಯದಲ್ಲಿ ಮಾತ್ರ ಭಾರತ ತಂಡದ ಪರ ಆಡಿದ್ದರು. ಆದರೆ, ೨೮ ರನ್‌ ನೀಡಿ ವಿಕೆಟ್‌ ಕಬಳಿಸಿರಲಿಲ್ಲ. ಆದಾಗ್ಯೂ ಆಸ್ಟ್ರೇಲಿಯಾದ ಪಿಚ್‌ನಲ್ಲಿ ದೀಪಕ್‌ ಅವರನ್ನು ಆಡಿಸುವುದರಿಂದ ಹೆಚ್ಚು ಲಾಭ ಎಂಬುದಾಗಿ ಗವಾಸ್ಕರ್‌ ನುಡಿದಿದ್ದಾರೆ.

“ಆಸ್ಡ್ರೇಲಿಯಾದಲ್ಲಿ ನಡೆಯುವ ಟಿ೨೦ ವಿಶ್ವ ಕಪ್‌ಗೆ ಪ್ರಯಾಣ ಮಾಡಲಿರುವ ಭಾರತ ತಂಡದಲ್ಲಿ ದೀಪಕ್‌ ಚಾಹರ್‌ ಇರುವುದನ್ನು ನಾನು ಬಯಸುತ್ತೇನೆ. ಯಾಕೆಂದರೆ, ಅಲ್ಲಿನ ಪಿಚ್‌ಗಳು ಹೆಚ್ಚುವರಿ ಬೌನ್ಸ್‌ಗೆ ನೆರವಾಗುವ ಕಾರಣ, ಚಾಹರ್‌ಗೆ ಅದರ ಅನುಕೂಲ ಪಡೆಯಲು ಸಾಧ್ಯವಿದೆ,” ಎಂದು ಗವಾಸ್ಕರ್‌ ನುಡಿದಿದ್ದಾರೆ.

“”ದಕ್ಷಿಣ ಆಫ್ರಿಕಾ ಅಥವಾ ಆಸ್ಟ್ರೇಲಿಯಾ ನೆಲದಲ್ಲಿ ಆಡಲು ತಂಡ ಕಳುಹಿಸುವಾಗ ೪ ಅಥವಾ ೫ ಬೌಲರ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ಅದರಲ್ಲೂ ಕ್ಷಿಪ್ರಗತಿಯಲ್ಲಿ ಸಾಗುವ ಟಿ೨೦ ಮಾದರಿಯ ಪಂದ್ಯಗಳಿಗೆ ದೀಪಕ್ ಚಾಹರ್‌ ಅವರಂಥ ಬೌಲರ್‌ಗಳಿಂದ ಹೆಚ್ಚು ಅನುಕೂಲಗಳಾಗಲಿವೆ,” ಎಂದು ಗವಾಸ್ಕರ್‌ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕನ್ನಡಿಗ ಹಾಗೂ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸದಸ್ಯ ರಾಬಿನ್‌ ಉತ್ತಪ್ಪ ಕೂಡ ಗವಾಸ್ಕರ್‌ ಅವರಂತೆಯೇ ದೀಪಕ್‌ ಚಾಹರ್‌ ಅವರ ಆಯ್ಕೆಯನ್ನು ಬೆಂಬಲಿಸಿದ್ದಾರೆ. ದೀಪರ್‌ ಚಾಹರ್‌ ಹಾಗೂ ಎಡಗೈ ವೇಗಿ ಅರ್ಶ್‌ದೀಪ್‌ ಸಿಂಗ್‌ ಅವರನ್ನು ಜಸ್‌ಪ್ರಿತ್‌ ಬುಮ್ರಾ, ಹರ್ಷಲ್‌ ಪಟೇಲ್‌ ಹಾಗೂ ಭುವನೇಶ್ವರ್‌ ಕುಮಾರ್‌ ಜತೆ ಟೀಮ್‌ ಇಂಡಿಯಾಗೆ ಆಯ್ಕೆ ಮಾಡಬೇಕಾಗಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ | Team India | ಹರ್ಷಲ್‌ ಪಟೇಲ್‌, ಜಸ್‌ಪ್ರಿತ್‌ ಬುಮ್ರಾ ಫಿಟ್ನೆಸ್‌ ಟೆಸ್ಟ್‌ ಪಾಸ್‌, ಟಿ20 ವಿಶ್ವ ಕಪ್‌ಗೆ ಲಭ್ಯ

Exit mobile version