Site icon Vistara News

Nagpur Pitch : ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಭಾರತದಲ್ಲಿ ಅವಮಾನವಾಗಿದೆ ಎಂದ ಮಾಜಿ ಕ್ರಿಕೆಟಿಗ; ಏನಾಯ್ತ ಅವರಿಗೆ?

Nagpur pitch

#image_title

ನಾಗ್ಪುರ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್​- ಗವಾಸ್ಕರ್​ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 132 ರನ್​ಗಳ ಅಮೋಘ ವಿಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್​ಗಳ ದಾಳಿಗೆ ಎದುರಾಳಿ ತಂಡದ ಆಟಗಾರರು ಪೇಚಾಡಿದ್ದರು. ಈ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯಗೊಂಡಿತು ಕೂಡ. ಇದೇ ತಕ್ಕ ಸಂದರ್ಭ ಎಂದುಕೊಂಡ ಪ್ರವಾಸಿ ತಂಡದ ಆಟಗಾರರು ಮುಂದಿನ ಪಂದ್ಯಕ್ಕೆ ಸಜ್ಜಾಗುವುದಕ್ಕಾಗಿ ನಾಗ್ಪುರದ ಪಿಚ್​ನಲ್ಲಿಯೇ ಅಭ್ಯಾಸ ಮಾಡಲು ಮುಂದಾಗಿದ್ದಾರೆ. ಅದರೆ, ಪಿಚ್​ ಕ್ಯುರೇಟರ್​ ಪಂದ್ಯ ಮುಗಿಯಿತು ಅದಕ್ಕೆ ನೀರು ಹಾಕಿದ್ದಾರೆ. ಇದು ನಮ್ಮ ತಂಡಕ್ಕೆ ಅದ ಅವಮಾನ ಎಂಬುದಾಗಿ ಆಸ್ಟ್ರೇಲಿಯಾ ತಂಡದ ಮಾಜಿ ವಿಕೆಟ್​ಕೀಪರ್ ಇಯಾನ್​ ಹೀಲಿ ಹೇಳಿದ್ದಾರೆ.

ಪಂದ್ಯವೊಂದು ಮುಗಿದ ಬಳಿಕ ಪಿಚ್​ಗೆ ನೀರು ಹಾಕಿ ಅದನ್ನು ಮಟ್ಟಸಗೊಳಿಸಬೇಕಾಗುತ್ತದೆ. ಅದರಂತೆ ವಿದರ್ಭ ಕ್ರಿಕೆಟ್ ಅಸೋಸಿಯೇಷನ್​ ಕ್ಯುರೇಟರ್​ ಕೂಡ ಪಿಚ್​ಗೆ ನೀರು ಸುರಿದಿದ್ದಾರೆ. ಈ ಮೂಲಕ ಸ್ಪಿನ್​ ಪಿಚ್​ನಲ್ಲೇ ಅಭ್ಯಾಸ ನಡೆಸಿ ಮುಂದಿನ ಪಂದ್ಯಕ್ಕೆ ಸಜ್ಜಾಗಲು ಉಂಟಾಗಿದ್ದ ಆಸೀಸ್ ಬಳಗಕ್ಕೆ ನಿರಾಸೆಯಾಗಿದೆ. ಇದನ್ನೇ ಅಲ್ಲಿನ ಮಾಜಿ ಆಟಗಾರರು ದೊಡ್ಡದಾಗಿಸುತ್ತಿದ್ದಾರೆ.

ಇದು ಅತ್ಯಂತ ಗಂಭೀರ ವಿಚಾರ. ಉದ್ದೇಶಪೂರ್ವಕವಾಗಿ ಪಿಚ್​ ಮೇಲೆ ನೀರು ಸುರಿಯಲಾಗಿದೆ. ನಮ್ಮ ತಂಡಕ್ಕೆ ಸರಿಯಾಗಿ ಅಭ್ಯಾಸ ಮಾಡಲು ಬಿಡದೆ ಇರುವುದೇ ಅವರ ಉದ್ದೇಶವಾಗಿದೆ ಎಂಬುದು ಇಯಾನ್​ ಹೀಲಿ ಅವರ ಅಭಿಪ್ರಾಯವಾಗಿದೆ. ಇದು ಉತ್ತಮ ನಡೆಯಲ್ಲ. ಕ್ರಿಕೆಟ್​ಗೂ ಅನುಕೂಲಕರವಾಗಿರುವ ಘಟನೆಯಲ್ಲ. ಅಭ್ಯಾಸ ಮಾಡಲು ಪಿಚ್ ಬೇಕು ಎಂದು ಮನವಿ ಮಾಡಿದ ಹೊರತಾಗಿಯೂ ನೀರು ಹಾಕಿರುವುದು ಸರಿಯಾದ ನಡತೆಯಲ್ಲ. ಈ ಬಗ್ಗೆ ಐಸಿಸಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಹೀಲಿ ಹೇಳಿದ್ದಾರೆ.

ಇದನ್ನೂ ಓದಿ : INDvsAUS : ನಾಗ್ಪುರ ಪಿಚ್​ ನಮ್ಮ ನಿರೀಕ್ಷೆಯಂತೆ ಕಷ್ಟಕರವಾಗಿದೆ ಎಂದ ಆಸ್ಟ್ರೇಲಿಯಾ ಬ್ಯಾಟರ್​

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟೆಸ್ಟ್​ ಪಂದ್ಯ ಫೆಬ್ರವರಿ 17ರಿಂದ ನವ ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಭಾರತ ತಂಡದ ಮೊದಲ ಪಂದ್ಯದ ಗೆಲುವಿನ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

Exit mobile version