Site icon Vistara News

Team India : ಡಬ್ಲ್ಯುಟಿಸಿ ಫೈನಲ್​ಗೆ ಉಮೇಶ್​ ಯಾದವ್​ ಸೂಕ್ತ ಎಂದ ಮಾಜಿ ಕ್ರಿಕೆಟಿಗ!

Former cricketer says Umesh Yadav is suitable for WTC final!

ಮುಂಬಯಿ : ಭಾರತ ತಂಡದ (Team India) ವೇಗದ ಬೌಲರ್​ ಜಸ್​ಪ್ರಿತ್​ ಬುಮ್ರಾ ಅವರ ಲಭ್ಯತೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಭಾರತ ತಂಡದ ಪ್ರಧಾನ ಬೌಲರ್ ಎನಿಸಿಕೊಂಡಿರುವ ಅವರು ಬೆನ್ನಿನ ಒತ್ತಡ ಗಾಯದಿಂದ ಬಳಲುತ್ತಿದ್ದು, ಪುನಶ್ಚೇತನಕ್ಕೆ ಒಳಪಟ್ಟರೂ ಸುಧಾರಣೆ ಕಂಡಿಲ್ಲ. ಹೀಗಾಗಿ ಅವರು ನ್ಯೂಜಿಲ್ಯಾಂಡ್​ಗೆ ತೆರಳ ಸರ್ಜರಿಗೆ ಒಳಪಡಲಿದ್ದಾರೆ. ಅದು ಮುಗಿದು ಪುನಶ್ಚೇತನಕ್ಕೆ ಒಳಪಟ್ಟ ಬಳಿಕ ತಂಡಕ್ಕೆ ಯಾವಾಗ ಮರಳಬಹುದು ಎಂದು ಹೇಳುವುದು ಸಾಧ್ಯ. ಆದರೆ, ಅಲ್ಲಿಯ ತನಕ ಯಾರು ವೇಗದ ಬೌಲಿಂಗ್​ ವಿಭಾಗದ ಹೊಣೆಗಾರಿಕೆ ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಭಾರತ ತಂಡದ ಮಾಜಿ ಆಟಗಾರ ಮದನ್​ ಲಾಲ್​ ಸೂಕ್ತ ಉತ್ತರ ಕೊಟ್ಟಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಟೆಸ್ಟ್​ ಸರಣಿ ನಡೆಯುತ್ತಿದ್ದು , ಕೊನೇ ಪಂದ್ಯ ಮುಕ್ತಾಯಗೊಂಡ ಬಳಿಕ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ಗೆ ಯಾವ ತಂಡ ತೇರ್ಗಡೆಯಾಗಬಹುದು ಎಂದು ನಿರ್ಧಾರವಾಗುತ್ತದೆ. ಆಸ್ಟ್ರೇಲಿಯಾ ತಂಡ ಈಗಾಗಲೇ ಫೈನಲ್​ಗೆ ಪ್ರವೇಶ ಪಡೆದಿದ್ದು, ಭಾರತ ತಂಡ ಫೈನಲ್​ಗೆ ಪ್ರವೇಶ ಪಡೆಯಲಿರುವ ಸಂಭಾವ್ಯ ತಂಡವಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಮದನ್​ಲಾಲ್​, ಬುಮ್ರಾ ಅವರ ಲಭ್ಯತೆ ಕನಸನ್ನು ಮರೆತುಬಿಡಿ. ಉಮೇಶ್​ಯಾದವ್ ಅವರನ್ನು ಫೈನಲ್​ ಪಂದ್ಯಕ್ಕೆ ಸಜ್ಜುಗೊಳಿಸಿ ಎಂದು ಸಲಹೆ ಕೊಟ್ಟಿದ್ದಾರೆ.

ಭಾರತ ತಂಡ ಫೈನಲ್​ಗೆ ಪ್ರವೇಶ ಪಡೆಯುವುದು ಖಚಿತ. ಅಲ್ಲಿ ಒಬ್ಬ ಸ್ಪಿನ್ನರ್​ ಹಾಗೂ ಮೂರು ವೇಗದ ಬೌಲರ್​ ಬೇಕಾಗುತ್ತದೆ. ಮೊಹಮ್ಮದ್​ ಸಿರಾಜ್​ ಹಾಗೂ ಮೊಹಮ್ಮದ್​ ಶಮಿ ಆಡುವುದಕ್ಕೆ ಸಜ್ಜಾಗಿದ್ದಾರೆ. ಹೀಗಾಗಿ ಬುಮ್ರಾ ಲಭ್ಯತೆ ಮೇಲೆ ಮೂರನೇ ಬೌಲರ್​ ಯಾರೆಂಬುದನ್ನು ನಿರ್ಧರಿಸುವುದು ಬೇಡ. ಬುಮ್ರಾ ಅವರ ಸೇವೆಯನ್ನು ಮರೆತುಬಿಡಿ. ಉಮೇಶ್​ ಯಾದವ್ ಅವರು ಫೈನಲ್​ ಪಂದ್ಯದಲ್ಲಿ ಆಡುವಂತೆ ನೋಡಿಕೊಳ್ಳಿ ಎಂದು ಸ್ಪೋರ್ಟ್ಸ್​ ಟಾಕ್​ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಇದನ್ನೂ ಓದಿ : Umesh Yadav: ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದ ಉಮೇಶ್​ ಯಾದವ್​ಗೆ ಪತ್ರ ಬರೆದು ಧೈರ್ಯ ತುಂಬಿದ ಪ್ರಧಾನಿ ಮೋದಿ

ಗಾಯದ ಸಮಸ್ಯೆಯಿಂದ ಸುಧಾರಿಸಿಕೊಳ್ಳುವುದಕ್ಕೆ ಒಬ್ಬ ಆಟಗಾರನಿಗೆ ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಹಾಗೆಯೇ ಬುಮ್ರಾಗೂ ಆರು ತಿಂಗಳ ಅವಧಿ ಸರ್ಜರಿ ಬಳಿಕದ ಸುಧಾರಣೆಗೆ ಬೇಕು. ಅಲ್ಲದೆ ಕಳೆದ ಸೆಪ್ಟೆಂಬರ್​ನಿಂದ ಬುಮ್ರಾ ಗ್ರೌಂಡ್​ಗೆ ಇಳಿದೇ ಇಲ್ಲ. ಹೀಗಿರುವಾಗ ತಕ್ಷಣಕ್ಕೆ ಬಂದು ಬೌಲಿಂಗ್ ಮಾಡುತ್ತಾರೆ ಎಂದು ನಿರೀಕ್ಷೆ ಮಾಡುವುದು ಸರಿಯಲ್ಲ ಎಂದು ಮದನ್​ ಲಾಲ್ ಹೇಳಿದ್ದಾರೆ.

Exit mobile version