ಲಂಡನ್ : ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಸ್ಫೋಟಕ ಬ್ಯಾಟರ್ ಇಯಾನ್ ಮಾರ್ಗನ್ ಎಲ್ಲ ಮಾದರಿಯ ಕ್ರಿಕೆಟ್ನಿಂದ ಸೋಮವಾರ (ಫೆ. 13ರಂದು) ನಿವೃತ್ತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ಬೈ ಹೇಳಿದ್ದರು. ಇದೀಗ ಲೀಗ್ ಸಮೇತ ಎಲ್ಲ ಮಾದಿಯ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಮುಕ್ತಿ ಪಡೆದುಕೊಂಡಿದ್ದಾರೆ.
36 ವರ್ಷದ ಆಟಗಾರ ಕಳೆದ ಆವೃತ್ತಿಯ ದಿ ಹಂಡ್ರಡ್ ಕ್ರಿಕೆಟ್ ಲೀಗ್ನಲ್ಲಿ ಲಂಡನ್ ಸ್ಪಿರಿಟ್ ತಂಡದ ಪರವಾಗಿ ಆಡಿದ್ದರು. ಅದೇ ರೀತಿ ಅಬಿಧಾಬಿ ಟಿ10 ಲೀಗ್ನಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ ತಂಡದ ಭಾಗವಾಗಿದ್ದರು. ಅದೇ ರೀತಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್ನಲ್ಲಿ ಪಾರ್ಲ್ ರಾಯಲ್ ತಂಡದ ಸದಸ್ಯರಾಗಿದ್ದರು.
ಎಲ್ಲ ಮಾದರಿಯ ಕ್ರಿಕೆಟ್ನಿಂದ ವಿಮುಖನಾಗಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಮಾರ್ಗನ್ ನಿವೃತ್ತಿ ಕುರಿತು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಕ್ರಿಕೆಟ್ ನನಗೆ ಸಾಕಷ್ಟು ಕೊಟ್ಟಿದೆ. ಇದೀಗ ಅದರಿಂದ ನಿವೃತ್ತಿ ಪಡೆಯಲು ಸೂಕ್ತ ಸಮಯ ಎಂದು ಭಾವಿಸಿದ್ದೇನೆ ಎಂಬದಾಗಿಯೂ ಅವರು ಬರೆದುಕೊಂಡಿದ್ದಾರೆ.
ಮಾರ್ಗನ್ 2005ರಲ್ಲಿ ಮಿಡ್ಲ್ಸೆಕ್ಸ್ ತಂಡದ ಮೂಲಕ ಮೊದಲ ಬಾರಿ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪಾರ್ಲ್ ರಾಯಲ್ಸ್ ತಂಡದ ಪರವಾಗಿ ಕೊನೇ ಪಂದ್ಯವನ್ನು ಆಡಿದ್ದಾರೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ವಿದಾಯ ಹೇಳಿದ ಇಯಾನ್ ಮಾರ್ಗನ್
ಇಯಾನ್ ಮಾರ್ಗನ್ ಇಂಗ್ಲೆಂಡ್ ತಂಡದ ಪರವಾಗಿ ಆಡಿ ಒಟ್ಟು 10 ಸಾವಿರಕ್ಕಿಂತಲೂ ಅಧಿಕ ಅಂತಾರಾಷ್ಟ್ರೀಯ ರನ್ಗಳನ್ನು ಬಾರಿಸಿದ್ದಾರೆ. ಅದೇ ರೀತಿ 2019ರ ವಿಶ್ವ ಕಪ್ನಲ್ಲಿ ತಂಡಕ್ಕೆ ಟ್ರೋಫಿ ಜಯಿಸಿಕೊಟ್ಟಿದ್ದರು.