Site icon Vistara News

ICC World Cup 2023 : ಪಾಕ್​ ವಿರುದ್ಧ ಅಫಘಾನಿಸ್ತಾನದ ಗೆಲುವಿನಲ್ಲಿ ಭಾರತದ ಮಾಜಿ ಕ್ರಿಕೆಟಿಗನ ಕೈವಾಡ

Ajay Jadeja

ನವದೆಹಲಿ: ಅಕ್ಟೋಬರ್ 23 ರಂದು ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ (ICC World Cup 2023) ಅಫ್ಘಾನಿಸ್ತಾನವು ಪಾಕಿಸ್ತಾನವನ್ನು ಹೀನಾಯವಾಗಿ ನಂತರ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರು ಅಫಘಾನಿಸ್ತಾನ ತಂಡದ ಮೆಂಟರ್​​ ಅಜಯ್ ಜಡೇಜಾ ಅವರನ್ನು ಶ್ಲಾಘಿಸಿದ್ದಾರೆ.

ಜಡೇಜಾ ಪ್ರಸ್ತುತ ನಡೆಯುತ್ತಿರುವ ವಿಶ್ವ ಕಪ್​ 2023ರಲ್ಲಿ ಅಫ್ಘಾನಿಸ್ತಾನ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕೆಲವು ಯೋಚನೆಗಳು ಆ ತಂಡಕ್ಕೆ ಅದ್ಭುತವಾಗಿ ಕೆಲಸ ಮಾಡಿದೆ. ಏಕೆಂದರೆ ಆ ತಂಡ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ 2023ರಲ್ಲಿ ವಿಶ್ವ ಚಾಂಪಿಯನ್ ತಂಡಗಳಾದ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಸ್ಮರಣೀಯ ಗೆಲುವುಗಳನ್ನು ದಾಖಲಿಸಿದೆ.

ಪ್ರಸ್ತುತ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನದ ಸ್ಮರಣೀಯ ಪ್ರದರ್ಶನದ ಹಿಂದಿನ ಮಾಸ್ಟರ್ ಮೈಂಡ್ ಭಾರತದ ಮಾಜಿ ಕ್ರಿಕೆಟಿಗ ಎಂದು ತೆಂಡೂಲ್ಕರ್ ಮತ್ತು ಮಲಿಕ್ ಅಭಿಪ್ರಾಯಪಟ್ಟಿದ್ದಾರೆ. ಚೆನ್ನೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಪಾಕಿಸ್ತಾನವನ್ನು 8 ವಿಕೆಟ್ ಗಳಿಂದ ಮಣಿಸಿತು. ಈ ಮೂಲಕ ಪಾಕ್​ ತಂಡಕ್ಕೆ ಈ ಹಿಂದೆ ಎಂದೂ ಕಂಡಿರದ ಅವಮಾನಕರ ಸೋಲುಣಿಸಿದೆ.

ಸಚಿನ್ ತೆಂಡೂಲ್ಕರ್ ಎಕ್ಸ್​ನಲ್ಲಿ ಹೀಗೆ ಬರೆದಿದ್ದಾರೆ. “ಈ ವಿಶ್ವಕಪ್​​ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವು ಅತ್ಯುತ್ತಮವಾಗಿದೆ. ಬ್ಯಾಟಿಂಗ್​ನಲ್ಲಿ ಅವರ ಶಿಸ್ತು, ಅವರು ತೋರಿಸಿದ ಮನೋಧರ್ಮ ಮತ್ತು ವಿಕೆಟ್​ಗಳ ನಡುವೆ ಆಕ್ರಮಣಕಾರಿ ಓಟವು ಅವರ ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ. ಇದು ಅಜಯ್ ಜಡೇಜಾ ಅವರ ಪ್ರಭಾವದಿಂದಾಗಿರಬಹುದು. ಅಸಾಧಾರಣ ಬೌಲಿಂಗ್ ಲೈನ್ಅಪ್ನೊಂದಿಗೆ, ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳ ವಿರುದ್ಧ ಗೆಲುವುಗಳು ಹೊಸ ಅಫ್ಘಾನಿಸ್ತಾನ ತಂಡದ ತಂಡದ ಉದಯವನ್ನು ಸೂಚಿಸುತ್ತವೆ. ಕ್ರಿಕೆಟ್ ಜಗತ್ತು ಇದನ್ನು ಗಮನಿಸುತ್ತಿದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ : ಅಫಘಾನಿಸ್ತಾನ​ ವಿರುದ್ಧ ಸೋತು ಸುಣ್ಣವಾದ ಪಾಕ್ ತಂಡಕ್ಕೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅಫ್ಘಾನಿಸ್ತಾನವು ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಆಡುವಲ್ಲಿ ಜಡೇಜಾ ಅವರ ತೀಕ್ಷ್ಣ ಮನಸ್ಸು ಪ್ರಮುಖ ಪಾತ್ರ ವಹಿಸಿದೆ ಎಂದು ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಮಲಿಕ್ ಹೇಳಿದ್ದಾರೆ.

‘ಎ ಸ್ಪೋರ್ಟ್ಸ್’ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ಮಲಿಕ್ “ಅಜಯ್ ಜಡೇಜಾ ಅವರ ಡಗ್​ಔಟ್​​ನಲ್ಲಿ ಕುಳಿತಿರುವುದನ್ನು ನಾನು ನೋಡಿದ್ದೇನೆ. 2015 ರ ವಿಶ್ವಕಪ್ ಸಮಯದಲ್ಲಿ ನಾನು ಅವರೊಂದಿಗೆ ಭಾರತದ ಚಾನೆಲ್ ಒಂದರಲ್ಲಿ ಕೆಲಸ ಮಾಡಿದ್ದೇನೆ. ಅವರದ್ದು ಶ್ರೇಷ್ಠ ಕ್ರಿಕೆಟ್ ಮನಸ್ಸು. ಆಟಗಾರದ ಸುತ್ತಲೂ ಅಥವಾ ತಂಡದ ಸುತ್ತಲೂ ಸೂಕ್ತ ವ್ಯಕ್ತಿಯನ್ನು ಹೊಂದಿರುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ವಿಶೇಷವೆಂದರೆ, ಬೆಂಗಳೂರಿನಲ್ಲಿ ನಡೆದ 1996 ರ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಐತಿಹಾಸಿಕ ಗೆಲುವಿನಲ್ಲಿ ಜಡೇಜಾ ತಂಡದ ಭಾಗವಾಗಿದ್ದರು. ಆ ಪಂದ್ಯದಲ್ಲಿ ಜಡೇಜಾ 45 ರನ್ ಗಳಿಸಿದ್ದರು.

Exit mobile version