ಬೆಂಗಳೂರು : ಭಾರತ ತಂಡದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwari) ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಅವರ ತಮ್ಮ 18 ವರ್ಷಗಳ ವೃತ್ತಿ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ತಿವಾರಿ ಹಿಂದೊಮ್ಮೆ ನಿವೃತ್ತಿ ಪಡೆದುಕೊಂಡು ಬಳಿಕ ತಮ್ಮ ನಿರ್ಧಾರ ಬದಲಿಸಿದ್ದರು. ಅನುಭವಿ ಬ್ಯಾಟ್ಸ್ಮನ್ ಈಗ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ಬಂಗಾಳ ಮತ್ತು ಬಿಹಾರ ನಡುವಿನ ರಣಜಿ ಟ್ರೋಫಿ ಪಂದ್ಯದ ನಂತರ ರೆಡ್-ಬಾಲ್ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.
Hi all,
— MANOJ TIWARY (@tiwarymanoj) February 17, 2024
So… It's time for the one last dance! Possibly one last time for a long walk towards my beloved 22 yards. I will miss every bit of it! 🏏
Thanks for cheering and loving me all these years. Would be loving it if you all come down to my favourite #EdenGardens today and… pic.twitter.com/uRsVS1Zsnp
ಬಂಗಾಳ ತಂಡದ ಯಶಸ್ವಿ ನಾಯಕ ತಿವಾರಿ ಸಾಮಾಜಿಕ ಜಾಲತಾಣಗಳಲ್ಲಿ ವಿದಾಯದ ಹೃದಯಸ್ಪರ್ಶಿ ಘೋಷಣೆ ಮಾಡಿದದ್ದಾರೆ. ತಮ್ಮ ಕ್ರಿಕೆಟ್ ಕನಸಿನ ತೊಟ್ಟಿಲು ಈಡನ್ ಗಾರ್ಡನೊಂದಿಗಿನ ತಮ್ಮ ಆಳವಾದ ಸಂಬಂಧವನ್ನು ಅವರು ವ್ಯಕ್ತಪಡಿಸಿದ್ದಾರೆ. ತಮ್ಮ ಭಾವನಾತ್ಮಕ ವಿದಾಯದ ಸಂದೇಶದಲ್ಲಿ ಅವರು ತಮ್ಮ ಅಂತಿಮ ಪ್ರದರ್ಶನಕ್ಕೆ ಸಾಕ್ಷಿಯಾಗಲು ಅವರು ತಮ್ಮ ಅಭಿಮಾನಿಗಳನ್ನು ಆಹ್ವಾನಿಸಿದರು.
ಇದನ್ನೂ ಓದಿ : Yashasvi Jaiswal : ಶತಕ ಬಾರಿಸಿದ ಬಳಿಕ ಜೈಸ್ವಾಲ್ ನಿವೃತ್ತಿ ಪಡೆದಿದ್ದು ಯಾಕೆ?
“ಇದು ಕೊನೆಯ ಆಟದ ಸಮಯ. ಬಹುಶಃ ಕೊನೆಯ ಬಾರಿಗೆ 22 ಗಜಗಳ ಪಿಚ್ಗಳ ನಡುವಿನ ದೀರ್ಘ ನಡಿಗೆ ಮಾಡಲಿದ್ದೇನೆ.. ನಾನು ಕ್ರಿಕೆಟ್ ಪ್ರೀತಿಯ ಪ್ರತಿಯೊಂದು ಅಂಶವನ್ನು ಕಳೆದುಕೊಳ್ಳುತ್ತೇನೆ. ಇಷ್ಟು ವರ್ಷಗಳ ಕಾಲ ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ಮತ್ತು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು. ಬಂಗಾಳವನ್ನು ಹುರಿದುಂಬಿಸಲು ನೀವೆಲ್ಲರೂ ನಾಳೆ ಮತ್ತು ಮರುದಿನ ನನ್ನ ನೆಚ್ಚಿನ ಈಡನ್ಗಾರ್ಡನ್ಸ್ಗೆ ಬನ್ನಿ. ಕ್ರಿಕೆಟ್ನ ನಿಷ್ಠಾವಂತ ಸೇವಕ ನಿಮ್ಮ ಮನೋಜ್ ತಿವಾರಿ, “ಎಂದು ಅವರು ‘ಎಕ್ಸ್’ ನಲ್ಲಿ ಬರೆದಿದ್ದಾರೆ.
2006 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ತಿವಾರಿ, ಶೀಘ್ರದಲ್ಲೇ ಪ್ರತಿಭೆಗಳ ಆಗರವಾದರು. 2008 ರ ವೇಳೆಗೆ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಸಂಕ್ಷಿಪ್ತವಾಗಿದ್ದರೂ, 12 ಏಕದಿನ ಮತ್ತು 3 ಟಿ 20 ಪಂದ್ಯಗಳನ್ನು ಒಳಗೊಂಡಿವೆ. ಆದರೆ ಅವರ ದೇಶೀಯ ಟೂರ್ನಿಗಳ ಪರಾಕ್ರಮವು ಎಂದಿಗೂ ಕಡಿಮೆಯಾಗಲಿಲ್ಲ. 12 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ತಿವಾರಿ 26.09ರ ಸರಾಸರಿಯಲ್ಲಿ 287 ರನ್ ಗಳಿಸಿದ್ದಾರೆ. 3ಟಿ 20 ಪಂದ್ಯಗಳಲ್ಲಿ ಅವರು ಆಡಿದ ಏಕೈಕ ಇನ್ನಿಂಗ್ಸ್ನಲ್ಲಿ ಕೇವಲ 15 ರನ್ ಗಳಿಸಲು ಸಾಧ್ಯವಾಗಿದೆ.
ದೇಶೀಯವಾಘಿ ಅವರು 30 ಶತಕಗಳು ಮತ್ತು 45 ಅರ್ಧಶತಕಗಳೊಂದಿಗೆ 10,000 ಪ್ರಥಮ ದರ್ಜೆ ರನ್ಗಳನ್ನು ದಾಟುವ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದರು. ಅವರ ಗರಿಷ್ಠ ಸ್ಕೋರ್ 303*.
ಬಂಗಾಳ ಮೂಲದ ಕ್ರಿಕೆಟಿಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ , ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೇರಿದಂತೆ ವಿವಿಧ ತಂಡಗಳಿಗಾಗಿ ಆಡಿದ್ದಾರೆ. 2012ರ ಐಪಿಎಲ್ ವಿಜೇತ ಕೋಲ್ಕತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು.