Site icon Vistara News

Team India : ಸಹ ಆಟಗಾರರನ್ನೇ ಬಿಟ್ಟು ಪಾಕಿಸ್ತಾನದ ಮಾಜಿ ಆಟಗಾರ ಬೆಸ್ಟ್​ ಎಂದ ವೀರೇಂದ್ರ ಸೆಹ್ವಾಗ್​!

Virendra Sehwag

#image_title

ನವ ದೆಹಲಿ: ಭಾರತ ತಂಡದ (Team India) ಮಾಜಿ ಸ್ಫೋಟಕ ಬ್ಯಾಟರ್​ ವೀರೇಂದ್ರ ಸೆಹ್ವಾಗ್ (Virender Sehwag) ಏಷ್ಯಾದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮನ್​ ಯಾರು ಎಂಬುದನ್ನು ಹೇಳಿದ್ದಾರೆ. ಅಚ್ಚರಿಯೆಂದರೆ ಅವರು ತಮ್ಮ ಮಾಜಿ ಸಹ ಆಟಗಾರ ಹಾಗೂ ಭಾರತದ ಮಾಜಿ ಆರಂಭಿಕ ಬ್ಯಾಟರ್​​ ರಾಹುಲ್ ದ್ರಾವಿಡ್, ದಿಗ್ಗಜರಾದ ವಿವಿಎಸ್ ಲಕ್ಷ್ಮಣ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನೇ ಕೈಬಿಟ್ಟು ಪಾಕಿಸ್ತಾನದ ಆಟಗಾರನೇ ಉತ್ತಮ ಎಂದಿದ್ದಾರೆ.

ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾ ಪರ ಭರ್ಜರಿ ಜತೆಯಾಟವಾಡಿದವರು. ಈ ಜೋಡಿ 2011ರ ಏಕದಿನ ವಿಶ್ವ ಕಪ್​ನಲ್ಲಿ ಭಾರತ ತಂಡದ ಪರ ಆರಂಭಿಕರಾಗಿ ಆಡುತ್ತಿದ್ದವರು. ಅದೇ ರೀತಿ ವೀರೇಂದ್ರ ಸೆಹ್ವಾಗ್ ಅನೇಕ ಸಂದರ್ಭಗಳಲ್ಲಿ ಸಚಿನ್ ಅವರನ್ನು ‘ಕ್ರಿಕೆಟ್ ದೇವರು’ ಎಂದೂ ಕರೆದಿದ್ದರು. ಆದರೆ, ಏಷ್ಯಾದ ಉತ್ತಮ ಆಟಗಾರ ಎಂಬ ಸ್ಥಾನ ಕೊಟ್ಟಿಲ್ಲ ಎಂಬುದೇ ಆಶ್ಚರ್ಯ.

ಸೆಹ್ವಾಗ್ 2015 ರಲ್ಲಿ ಕ್ರಿಕೆಟ್​​ನಲ್ಲಿ ನಿವೃತ್ತಿ ಪಡಿದ್ದರು. ಅಲ್ಲಿಂದ ಅವರು ಕಾಮೆಂಟರಿ ಸೇರಿದಂತೆ ನಾನಾ ವೃತ್ತಿಗಳನ್ನು ಮಾಡುತ್ತಿದ್ದಾರೆ. ಇದೀಗ ಅವರು ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಎಂಬ ಶೋ ಒಂದರಲ್ಲಿ ಗೌರವ್ ಕಪೂರ್ ಅವರೊಂದಿಗೆ ಮಾತನಾಡುವ ವೇಳೆ, ಎಲ್ಲರೂ ಸಚಿನ್ ತೆಂಡೂಲ್ಕರ್ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಇಂಜಮಾಮ್-ಉಲ್-ಹಕ್ ಏಷ್ಯಾದ ಅತಿ ಸಮರ್ಥ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್​ ಎಂದಿದ್ದಾರೆ. ತೆಂಡೂಲ್ಕರ್ ಎಲ್ಲ ಹೋಲಿಕೆಗಳಿಗೆ ಅತೀತರಾದ ಆಟಗಾರ. ಹೀಗಾಗಿ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಭಾರತ, ಶ್ರೀಲಂಕಾ, ಪಾಕಿಸ್ತಾನದಾದ್ಯಂತ ಅತ್ಯಂತ ಶ್ರೇಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಯಾರು ಎಂದು ಕೇಳಿದರೆ ಇಂಜಮಾನ್ ಅವರನ್ನೇ ಹೇಳುವೆ. ಅವರಂಥ ಉತ್ತಮ ಆಟಗಾರನನ್ನು ನೋಡಿಲ್ಲ ಎಂದರು.

2003-04ರ ಅವಧಿಯಲ್ಲಿ ಸಾಮಾನ್ಯವಾಗಿ ಓವರ್​​ಗೆ 8ರನ್ ಗಳಿಸುವುದೇ ದೊಡ್ಡ ಸಂಗತಿಯಾಗಿತ್ತು. ಆದರೆ ಇಂಜಾಮಾಮ್ ಉಲ್​ ಹಕ್​ ಓವರ್​​ಗೆ ಇದು ಸಲೀಸಾಗಿತ್ತು. 10 ಓವರ್​​ಗಳಲ್ಲಿ 80 ರನ್ ಚಿಂತೆಯಿಲ್ಲದೇ ಕಲೆ ಹಾಕುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ : IPL 2023 : ವೀರೇಂದ್ರ ಸೆಹ್ವಾಗ್ ಪುತ್ರರ ಜೊತೆ ಪೋಸ್ ನೀಡಿದ ವಿರಾಟ್ ಕೊಹ್ಲಿ!

1991ರಿಂದ 2007 ರವರೆಗೆ ಪಾಕಿಸ್ತಾನ ಪರ 378 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಇಂಜಮಾಮ್​ ಉಲ್​ ಹಕ್​. ಅವರು 39.53 ಸರಾಸರಿಯಲ್ಲಿ 11,739 ರನ್ ಗಳಿಸಿದ್ದರು 74.24 ಸ್ಟ್ರೈಕ್​ರೇಟ್​ನಂತೆ 10 ಶತಕಗಳು ಮತ್ತು 83 ಅರ್ಧಶತಕಗಳನ್ನು ಗಳಿಸಿದ್ದಾರೆ.

ಸೆಹ್ವಾಗ್​​ಗೆ ಮುರಳೀಧರನ್​ ಭಯ

ವೀರೇಂದ್ರ ಸೆಹ್ವಾಗ್ ಆಗಾಗ್ಗೆ ತಮ್ಮ ವಿಸ್ಫೋಟಕ ಬ್ಯಾಟಿಂಗ್​ಗೆ ಖ್ಯಾತಿ ಪಡೆದವರು. ವಿಶೇಷವಾಗಿ ಸ್ಪಿನ್ ಬೌಲರ್​ಗಳಿಗೆ ದುಸ್ವಪ್ನವಾಗಿದ್ದರು. ಆದಾಗ್ಯೂ, ಸೆಹ್ವಾಗ್ ಅವರಿಗೆ ಲಂಕಾದ ಈ ಬೌಲರ್​ ಎಂದರೆ ಸಿಕ್ಕಾಪಟ್ಟೆ ಭಯವಿತ್ತು. ಸಂದರ್ಶನದಲ್ಲಿ ಅವರು ಈ ವಿಷಯವನ್ನು ಹೇಳಿಕೊಂಡಿದ್ದಾರೆ.

ಶ್ರೀಲಂಕಾದ ಅನುಭವಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ವಿರುದ್ಧ ಬ್ಯಾಟಿಂಗ್ ಮಾಡಲು ತಾನು ಯಾವಾಗಲೂ ಹೆದರುತ್ತಿದ್ದೆ ಎಂದು ಸೆಹ್ವಾಗ್ ಬಹಿರಂಗಪಡಿಸಿದ್ದಾರೆ. ಗೌರವ್ ಕಪೂರ್ ಅವರೊಂದಿಗೆ ಮಾತನಾಡಿದ ಭಾರತದ ಮಾಜಿ ಬ್ಯಾಟ್ಸ್​ಮನ್​​ ಮುರಳೀಧರನ್ ಬೌಲಿಂಗ್ ಮಾಡಲು ಬಂದಾಗ ತನ್ನ ವಿಕೆಟ್​ ಕಾಪಾಡಿಕೊಳ್ಳುವುದಕ್ಕೆ ಹೆದರುತ್ತಿದ್ದೆ. ಏಕೆಂದರೆ ಅವರ ದೂಸ್ರಾಗಳನ್ನು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

Exit mobile version