ರಾವಲ್ಪಿಂಡಿ : ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿರುವ ರಾವಲ್ಪಿಂಡಿ ಪಿಚ್ ಬಗ್ಗೆ ಜಾಗತಿಕ ಕ್ರಿಕೆಟ್ ಕಾರಿಡಾರ್‌ನಲ್ಲಿ ಭರ್ಜರಿ ವಿಶ್ಲೇಷಣೆಗಳು ನಡೆಯುತ್ತಿವೆ. ರನ್ ಶಿಖರ ನಿರ್ಮಾಣವಾಗುತ್ತಿರುವ ಈ ಪಿಚ್ ಟೆಸ್ಟ್ ಪಂದ್ಯಕ್ಕೆ ಪೂರಕವಲ್ಲ ಹಾಗೂ ಸ್ಪರ್ಧಾತ್ಮಕವಾಗಿಲ್ಲ ಎಂಬುದೇ ವಿಮರ್ಶಕರ ಅಂಬೋಣ. ಅಂತೆಯೇ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಶಾಹಿದ್ ಅಫ್ರಿದಿಯೂ ಈ ಪಿಚ್‌ನ ವರ್ತನೆಯನ್ನು ಟೀಕೆ ಮಾಡಲು ಮರೆತಿಲ್ಲ. ಅವರು, “ರಾವಲ್ಪಿಂಡಿಯಲ್ಲಿ ಬ್ಯಾಟಿಂಗ್ ಗೊತ್ತಿಲ್ಲದ ಬೌಲರ್‌ಗಳು ಬೇಕಾದರೂ ಅರ್ಧ ಶತಕ ಬಾರಿಸಬಲ್ಲರು,” ಎಂಬುದಾಗಿ ಹೇಳಿಕೆ ನೀಡಿದ್ದಾರೆ.
ಪಂದ್ಯದ ಮೂರನೇ ದಿನ ಮುಕ್ತಾಯದ ವೇಳೆಗೆ ಒಟ್ಟಾರೆ ಆರು ಶತಕಗಳ ಮೂಡಿ ಬಂದಿವೆ. ಇಂಗ್ಲೆಂಡ್ ಪರ ಜಾಕ್ ಕ್ರಾವ್ಲಿ (೧೨೨), ಬೆನ್ ಡಕೆಟ್ (೧೦೭), ಒಲಿ ಪೋಪ್ (೧೦೮) ಶತಕ ಬಾರಿಸಿದರೆ, ಪಾಕ್ ಪರ ಅಬ್ದುಲ್ಲಾ ಶಫಿಕ್ (೧೧೪), ಇಮಾಮ್ ಉಲ್ ಹಕ್ (೧೨೧) ಹಾಗೂ ಬಾಬರ್ ಅಜಮ್ (೧೩೬) ಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ೬೫೭ ರನ್ ಬಾರಿಸಿದ್ದು, ಪ್ರತಿಯಾಗಿ ಪಾಕ್ ತಂಡ ೭ ವಿಕೆಟ್‌ಗೆ ೪೯೯ ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಇದನ್ನು ಉಲ್ಲೇಖಿಸಿ ಮಾತನಾಡಿದ ಬಾಬರ್ “ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪಾಕ್ ತಂಡವು ಸ್ಪರ್ಧಾತ್ಮಕ ಪಿಚ್‌ನಲ್ಲಿ ಪಂದ್ಯವನ್ನು ಆಯೋಜಿಸಬೇಕಾಗುತ್ತದೆ. ವೇಗದ ಎಸೆತಗಳಿಗೆ ಪೂರಕವಾಗಿರುವ ಪಿಚ್‌ನಲ್ಲಿ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಾಗುತ್ತದೆ. ರಾವಲ್ಪಿಂಡಿಯಂಥ ಸಪಾಟು ಪಿಚ್‌ಗಳಲ್ಲಿ ಅಲ್ಲ. ಇಲ್ಲಿ ಬೌಲರ್ ನಾಸಿಮ್ ಶಾ ಬೇಕಾದರೆ ೭೦ರಿಂದ ೮೦ ರನ್ ಬಾರಿಸಬಲ್ಲರು,” ಎಂಬುದಾಗಿ ಹೇಳಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ | ENGvsPAK | ಬಾಬರ್ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ಹೊಗಳಿದ ವಾನ್‌ಗೆ ನೆಟ್ಟಿಗರಿಂದ ಕಿಡಿ ನುಡಿ