ತಿರುವನಂತಪುರ : ವರ್ಷಾರಂಭದಲ್ಲಿ ಎರಡು ಏಕ ದಿನ ಶತಕಗಳನ್ನು ಬಾರಿಸಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಎಲ್ಲರ ಹೊಗಳಿಕೆಗೆ ಪಾತ್ರರಾಗುತ್ತಿದ್ದಾರೆ. ಅವರು 110 ಎಸೆತಗಳಲ್ಲಿ ಬಾರಿಸಿರುವ 166 ರನ್ಗಳು ಭಾರತಕ್ಕೆ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯಲ್ಲಿ 317 ರನ್ಗಳ ಬೃಹತ್ ಅಂತರದ ಜಯ ತಂದುಕೊಟ್ಟಿತ್ತು. ಹೀಗಾಗಿ ಕೊಹ್ಲಿಯ ಯುಗ ಮತ್ತೆ ಆರಂಭವಾಗಿದೆ ಎಂದು ಹೊಗಳಲಾಗುತ್ತಿದೆ. ಏತನ್ಮಧ್ಯೆ, ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ವಿರಾಟ್ ಕೊಹ್ಲಿಯಲ್ಲಿ ಗೋಲ್ ಮಷಿನ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಹೋಲಿಕೆ ಮಾಡಿದ್ದಾರೆ.
ನನ್ನ ಪ್ರಕಾರ ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಿದ್ದಾರೆ. ಅವರಿನ್ನೂ ತಮ್ಮ ನೈಜ ಪ್ರದರ್ಶನ ಮುಂದುವರಿಸಬಹುದು. ಅವರು ಸತತವಾಗಿ ಶತಕಗಳನ್ನು ಬಾರಿಸಲಿದ್ದಾರೆ ಹಾಗೂ ದೊಡ್ಡ ಮೊತ್ತದ ಸ್ಕೋರ್ ಮಾಡಲಿದ್ದಾರೆ. ವಿರಾಟ್ ಒಡಿಐ ಮಾದರಿಯ ನಿಜವಾದ ಆಟಗಾರ. ನಿಧಾನವಾಗಿ ಆರಂಭಿಸಿ ರನ್ ಗಳಿಸುತ್ತಲೇ ಸಾಗುವುದೇ ಅವರ ಆಟದ ವೈಖರಿ. ಇಂಥ ಬ್ಯಾಟಿಂಗ್ ತಂತ್ರ ವಿರಾಟ್ ಕೊಹ್ಲಿಗೆ ಚೆನ್ನಾಗಿ ಗೊತ್ತಿದೆ ಎಂಬುದಾಗಿ ಅವರು ಹೇಳಿದರು.
ವಿರಾಟ್ ಕೊಹ್ಲಿ ಹಾಗೂ ರೊನಾಲ್ಡೊ ತಮ್ಮ ಆಟದ ವಿಚಾರದಲ್ಲಿ ಸಮಾನ ರೀತಿಯ ಯೋಚನೆ ಹೊಂದಿರುವವರು. ಅವರಿಬ್ಬರು ಫಿಟ್ನೆಸ್ ಬಗ್ಗೆಯೂ ಸಾಕಷ್ಟು ಆಸಕ್ತಿ ಹೊಂದಿದ್ದಾರೆ, ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.
ಇದನ್ನೂ ಇದೆ | Virat Kohli | ವಿರಾಟ್ ಕೊಹ್ಲಿ 100 ಶತಕ ಬಾರಿಸುವುದು ಖಾತರಿ ಎಂದು ಭರವಸೆ ವ್ಯಕ್ತಪಡಿಸಿದ ಹಿರಿಯ ಆಟಗಾರ