Site icon Vistara News

Pervez Musharraf : ಧೋನಿಯ ಹೇರ್​ಸ್ಟೈಲ್​ ಹೊಗಳಿದ್ದ ಪಾಕ್​ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​

Dhoni

#image_title

ನವ ದಹೆಲಿ: ಫೆಬ್ರವರಿ 5ಂದು ನಿಧನ ಹೊಂದಿದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್ (Pervez Musharraf)​ , ಭಾರತ ತಂಡದ ಮಾಜಿ ನಾಯಕ ಪರ್ವೇಜ್​ ಮುಷರಫ್​ ಅವರನ್ನೂ ಹೊಗಳಿದ್ದರು. ಭಾರತ ತಂಡ ಪಾಕಿಸ್ತಾನಕ್ಕೆ ಕೊನೇ ಬಾರಿ ಪ್ರವಾಸ ಮಾಡಿದ್ದ ವೇಳೆ ಈ ಘಟನೆ ನಡೆದಿತ್ತು. ಆ ಸರಣಿಯಲ್ಲಿ ಮುಕ್ತಾಯದ ಬಳಿಕ ಭಾರತ ತಂಡವನ್ನು ಅಭಿನಂದಿಸಿದ್ದ ಪರ್ವೇಜ್​ ಅವರು ಧೋನಿಯನ್ನು ವಿಶೇಷವಾಗಿ ಹೊಗಳಿದ್ದರು.

2006ರಲ್ಲಿ ಭಾರತ ತಂಡ ಕೊನೇ ಬಾರಿ ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡಿತ್ತು. ಆ ಸರಣಿಯ ಕೊನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ ಕೇವಲ 46 ಎಸೆತಗಳಲ್ಲಿ 72 ರನ್​ ಬಾರಿಸಿದ್ದರು. ಪಂದ್ಯ ಮುಗಿದ ಬಳಿಕ ಭಾರತ ತಂಡವನ್ನು ಅಭಿನಂದಿಸುವ ವೇಳೆ ಧೋನಿಯ ಹೇರ್​ಸ್ಟೈಲ್​ ಹೊಗಳಿದ್ದರು. ಉದ್ದನೆಯ ಕೂದಲನ್ನು ಯಾವ ಕಾರಣಕ್ಕೂ ಕಟ್​ ಮಾಡಬಾರದು ಎಂದು ಅವರು ಸಲಹೆ ಕೊಟ್ಟಿದ್ದರು.

ಮಹೇಂದ್ರ ಸಿಂಗ್ ಧೋನಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ವೇಳೆ ಉದ್ದನೆಯ ಕೂದಲು ಬಿಟ್ಟಿದ್ದರು. ಆ ವೇಳೆ ಧೋನಿ ಹೇರ್​ಸ್ಟೈಲ್​ ಟ್ರೆಂಡ್ ಕೂಡ ಆಗಿತ್ತು. ಅಂತೆಯೇ ಪರ್ವೇಜ್​ ಮುಷರಫ್​ ಕೂಡ ಆ ಸ್ಟೈಲ್​ ಮೆಚ್ಚಿ ಮಾತನಾಡಿದ್ದರು.

ಇದನ್ನೂ ಓದಿ : Kohli VS Babar | ಬಾಬರ್ ಅಜಮ್‌ಗಿಂತ ವಿರಾಟ್‌ ಹೇಗೆ ಶ್ರೇಷ್ಠ ಬ್ಯಾಟರ್‌? ಪಾಕ್‌ ಲೆಜೆಂಡ್‌ಗಳು ವಿವರಿಸಿದ್ದಾರೆ

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇರುವ ಹೊರತಾಗಿಯೂ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಆದಾಗ್ಯೂ ಎರಡೂ ದೇಶಗಳ ಕ್ರಿಕೆಟರ್​​ಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

Exit mobile version