Site icon Vistara News

Pakistan Cricket Board | ತಮಗೆ ಪ್ರಾಣ ಬೆದರಿಕೆ ಬಂದಿತ್ತು ಎಂದು ಆರೋಪಿಸಿದ ಮಾಜಿ ಅಧ್ಯಕ್ಷ ರಮೀಜ್​ ರಾಜಾ

INDvsPAK

ಇಸ್ಲಾಮಾಬಾದ್ : ಪಾಕಿಸ್ತಾನ ಕ್ರಿಕೆಟ್​ ಮಂಡಳಿಯಲ್ಲಿ (Pakistan Cricket Board) ಎಲ್ಲವೂ, ಯಾವಾಗಲೂ ಸರಿ ಇರುವುದಿಲ್ಲ. ವಿವಾದ ಅಥವಾ ಗೊಂದಲಗಳು ಮಾಮೂಲಿ. ಆ ಪಟ್ಟಿಗೆ ಹೊಸ ಸೇರ್ಪಡೆ ಇತ್ತೀಚಿನ ಬದಲಾವಣೆಗಳು. ಪಿಸಿಬಿಯ ಅಧ್ಯಕ್ಷರಾಗಿದ್ದ ರಮೀಜ್​​ ರಾಜಾ ಅವರನ್ನು ಏಕಾಏಕಿ ಪದಚ್ಯುತಗೊಳಿಸಿ ನಜೀಮ್​ ಸೇಥಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಜ್​ ಶರೀಫ್​ ಕೈವಾಡವೂ ಇದೆ. ಮೊದಲೇ ಅಪರಿಮಿತ ಮಾತುಗಾರನಾಗಿರುವ ರಮೀಜ್ ಅವರು ಈ ಬಗ್ಗೆ ಪ್ರಶ್ನೆ ಕೇಳಿದರೆ ಚಿತ್ರ ವಿಚಿತ್ರ ಉತ್ತರಗಳನ್ನು ಕೊಡುತ್ತಿದ್ದಾರೆ. ಅಂತೆಯೇ ಅವರ ತಮಗೆ ಪ್ರಾಣ ಬೆದರಿಕೆಯೂ ಇತ್ತು ಎಂಬುದಾಗಿ ಹೇಳಿಕೊಂಡಿದ್ದಾರೆ.

ಸಮಾ ಟಿವಿಯ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾ ತಂಡ ಪಾಕಿಸ್ತಾನಕ್ಕೆ ಪ್ರವಾಸ ಬರುತ್ತದೆ ಎಂಬ ನಿರ್ಧಾರ ಪ್ರಕಟಗೊಂಡಾಗ ನನಗೆ ಪ್ರಾಣ ಬೆದರಿಕೆಯನ್ನು ಒಡ್ಡಲಾಗಿತ್ತು. ಆದರೆ ಆ ಕುರಿತು ನಾನು ಯಾವುದೇ ಮಾಹಿತಿಯನ್ನು ನೀಡಲಾರೆ ಎಂಬುದಾಗಿ ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡದ ಪ್ರವಾಸ ನಿಗದಿಯಾದ ಬಳಿಕ ಪ್ರಾಣ ಬೆದರಿಕೆ ಬಂತು. ಪೊಲೀಸ್​ ಹಿರಿಯ ಅಧಿಕಾರಿಯೊಬ್ಬರು ನನ್ನ ಮನೆಗೆ ಬಂದು ಚರ್ಚೆ ನಡೆಸಿ ಸುರಕ್ಷಿತವಾಗಿ ಇರುವಂತೆ ಸಲಹೆ ಕೊಟ್ಟರು. ಬಳಿಕ ನಾನು 1.5 ಕೋಟಿ ರೂಪಾಯಿ ಬೆಲೆಯ ಬುಲೆಟ್​ ಪ್ರೂಫ್​ ಕಾರನ್ನು ಬಳಸಲು ಆರಂಭಿಸಿದೆ. ಅದನ್ನೇ ವಿವಾದ ಮಾಡಲಾಯಿತು. ಆದರೆ, ನಾನು ಅದನ್ನು ನನ್ನ ಸ್ವಂತ ದುಡ್ಡಿನಿಂದ ಖರೀದಿ ಮಾಡಲಿಲ್ಲ. ಪಿಸಿಬಿ ಅನುದಾನದಿಂದ ಖರೀದಿ ಮಾಡಿದ್ದೇನೆ. ಹೀಗಾಗಿ ಅದು ಕ್ರಿಕೆಟ್​ ಮಂಡಳಿಯ ಸೊತ್ತು. ಅಧಿಕಾರ ತ್ಯಜಿಸಿದ ಬಳಿಕ ಅಲ್ಲಿಯೇ ಬಿಟ್ಟು ಬಂದಿದ್ದೇನೆ. ನನ್ನ ಉತ್ತರಾಧಿಕಾರಿಗಳು ಅದನ್ನು ಬಳಸಬಹುದು ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ | Autobiography | ರಮೀಜ್‌ ರಾಜಾ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು, ಯಾಕೆಂದರೆ ಅವರಪ್ಪ ಪೊಲೀಸ್‌ ಕಮಿಷನರ್‌!

Exit mobile version