ರೋಮ್ : ತನ್ನ ತಂಡದ ಆಟಗಾರರು ಚೆನ್ನಾಗಿ ಆಡಲಿ ಎಂದು ಫುಟ್ಬಾಲ್ ಕ್ಲಬ್ ಮಾಲೀಕರು ನಾನಾ ಬಗೆಯ ಆಫರ್ಗಳನ್ನು ನೀಡುವುದಾಗಿ ಭರವಸೆ ನೀಡುವುದು ಮಾಮೂಲಿ ಸಂಗತಿ. ಆದರೆ, ಇಟಲಿಯ ಕ್ಲಬ್ ಒಂದರ ಮಾಲೀಕರಾಗಿರುವ ಅಲ್ಲಿನ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೊನಿ ಅವರು, ಬಲಿಷ್ಠ ತಂಡದ ವಿರುದ್ಧ ಒಂದು ಪಂದ್ಯ ಗೆದ್ದರೆ ಡ್ರೆಸಿಂಗ್ ರೂಮ್ಗೆ ಒಂದು ಬಸ್ನಷ್ಟು ವೇಶ್ಯೆಯರನ್ನು ಕಳುಹಿಸುವೆ ಎಂದಿದ್ದಾರೆ. ಟೂರ್ನಿಗೆ ಪೂರ್ವದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ಬಿಲೇನಿಯರ್ ಆಗಿರುವ 86 ವರ್ಷದ ಸಿಲ್ವಿಯೊ ಅವರು ಮೊನ್ಜಾ ಫುಟ್ಬಾಲ್ ಕ್ಲಬ್ನ ಮಾಲೀಕರು. 2018ರಲ್ಲಿ ಅದನ್ನವರು ಖರೀದಿಸಿದ್ದರು. ಬಲಿಷ್ಠ ಫುಟ್ಬಾಲ್ ಕ್ಲಬ್ ಎಸಿ ಮಿಲಾನ್ ಕೂಡ ಅವರ ಒಡೆತನದಲ್ಲಿದೆ. ಅವರು ಕ್ರಿಸ್ಮಸ್ ಹಿನ್ನೆಲೆಯಲ್ಲಿ ಮೊನ್ಜಾ ಕ್ಲಬ್ ಆಟಗಾರರಿಗೆ ಔತಣ ಕೂಟ ಏರ್ಪಡಿಸಿದ್ದರು. ಅದಕ್ಕೆ ಮೊದಲು ಮಾತನಾಡಿದ ಸಿಲ್ವಿಯೊ ನೀವು ಜುವೆಂಟಾಸ್, ಎಸಿ ಮಿಲಾನ್ನಂಥ ಬಲಿಷ್ಠ ಕ್ಲಬ್ಗಳ ಜತೆ ಆಡಲಿದ್ದೀರಿ. ಒಂದು ವೇಳೆ ನೀವು ಬಲಿಷ್ಠವಾಗಿರುವ ಒಂದು ತಂಡವನ್ನು ಸೋಲಿಸಿದರೆ ನಿಮ್ಮ ಡ್ರೆಸಿಂಗ್ ರೂಮ್ಗೆ ಒಂದು ಬಸ್ನಷ್ಟು ವೇಶ್ಯೆಯರನ್ನು ಕಳುಹಿಸುವೆ ಎಂದಿದ್ದಾರೆ. ತಕ್ಷಣ ಅಲ್ಲಿದ್ದವರೆಲ್ಲರೂ ಜೋರಾಗಿ ನಕ್ಕಿದ್ದಾರೆ.
ಸಿಲ್ವಿಯೊ ಅವರ ಮಾತಿಗೆ ಇಟಲಿಯಲ್ಲಿ ಟೀಕೆಗಳು ವ್ಯಕ್ತಗೊಂಡಿವೆ. ಇದೊಂದು ಕಳಪೆ ಮಟ್ಟದ ಜೋಕ್ ಎಂಬುದಾಗಿ ಸಾಕಷ್ಟು ಹೇಳಿಕೆ ನೀಡಿದ್ದಾರೆ.
ಸಿಲ್ವಿಯೊ ಬೆರ್ಲುಸ್ಕೊನಿ ಅವರು 2011ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಲೈಂಗಿಕತೆ ನಡೆಸಿ ಸಿಕ್ಕಿಬಿದ್ದಿದ್ದರು. ನ್ಯಾಯಾಲಯದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಎಂಬುದನ್ನು ಸಾಬೀತು ಮಾಡಲು ಸಾಧ್ಯವಾಗದ ಕಾರಣ 2015 ಸಿಲ್ವಿಯೊ ಅರೋಪ ಮುಕ್ತರಾಗಿದ್ದರು.
ಇದನ್ನೂ ಓದಿ | Fifa World Cup | ಭಾನುವಾರ ನಡೆಯಲಿರುವ ಫಿಫಾ ವಿಶ್ವ ಕಪ್ ಫೈನಲ್ ನನ್ನ ಅಂತಿಮ ಪಂದ್ಯ; ಮೆಸ್ಸಿ ಮಾತು