ದುಬೈ: ಎಫ್-1 ಗ್ರ್ಯಾನ್ ಪ್ರಿ(Grand Prix) ರೇಸ್ನ ದ್ವಿತೀಯ ಸುತ್ತಿನ ರೇಸ್ ಭಾನುವಾರ ಸೌದಿ ಅರೇಬಿಯಾದಲ್ಲಿ ಆರಂಭವಾಗಲಿದೆ. ಮೊದಲ ಸುತ್ತಿನ ಪೈಪೋಟಿ ಬಹ್ರೈನ್‌ನಲ್ಲಿ ನಡೆದಿತ್ತು. ಒಟ್ಟು 23 ದೇಶಗಳಲ್ಲಿ ಈ ರೇಸ್ ನಡೆಯಲಿದೆ. ಅಂತಿಮವಾಗಿ ಯಾರು ಅಧಿಕ ರೇಸ್ಗಳನ್ನು ಗೆದ್ದು ಅತ್ಯಧಿಕ ಅಂಕ ಗಳಿಸುತ್ತಾರೋ ಅವರಿಗೆ ಚಾಂಪಿಯನ್ ಪಟ್ಟ ಒಲಿಯಲಿದೆ.
ಕಳೆದ ಬಾರಿಯ ರೇಸ್ನಲ್ಲಿ ಮರ್ಸೀಡೀಸ್ ತಂಡದ ಲೆವಿಸ್ ಹ್ಯಾಮಿಲ್ಟನ್ (Lewis Hamilton) ಹಾಗೂ ರೆಡ್ ಬುಲ್ ರೇಸಿಂಗ್ ಹೊಂಡಾ (Red Bull Racing Honda) ತಂಡದ ಮ್ಯಾಕ್ಸ್ ವೆಸ್ಟಾರ್ಪೆನ್(Max Verstappen) ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮ ಸುತ್ತಿನ ಈ ರೇಸ್ ಅಬುಧಾಬಿಯಲ್ಲಿ ನಡೆದಿತ್ತು. ಇಲ್ಲಿ ಯಾರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು.
ಉಭಯ ರೇಸರ್ಗಳ ಅಂಕವೂ 369.5 ಆಗಿತ್ತು. ಹೀಗಾಗಿ ಈ ರೇಸ್ 71 ವರ್ಷಗಳ ಫಾರ್ಮುಲಾ ಒನ್ ಇತಿಹಾಸದಲ್ಲಿ ಮಹತ್ವದ ರೇಸ್ ಆಗಿತ್ತು. ಆದರೆ ತನ್ನ ಚೊಚ್ಚಲ ಪ್ರಯತ್ನದಲ್ಲೇ 25 ವರ್ಷದ ಮ್ಯಾಕ್ಸ್ ವೆಸ್ಟಾರ್ಪೆನ್ ವಿಶ್ವ ಶ್ರೇಷ್ಠ ರೇಸರ್ಗೆ ನೀರು ಕುಡಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಇದಕ್ಕೂ ಮುನ್ನ 1974ರ ವಿಶ್ವ ಚಾಂಪಿಯನ್ಶಿಪ್ ಹೋರಾಟದಲ್ಲಿ ಬ್ರೆಜಿಲ್ನ ಎಮರ್ಸನ್ ಫಿಟಿಫಾಲ್ಡಿ (Emerson Fittipaldi) ಹಾಗೂ ಸ್ವಿಜರ್ಲೆಂಡ್ನ ಕ್ಲೇ ರೆಗ್ಗಜೋನಿ (Clay Regazzoni) ನಡುವೆ ಇಂಥದ್ದೊಂದು ಪೈಪೋಟಿ ನಡೆದಿತ್ತು.
ಈ ರೇಸ್ನಲ್ಲಿ ಫಿಟಿಫಾಲ್ಡಿ 55 ಅಂಕದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು. 52 ಅಂಕ ಸಂಪಾದಿಸಿದ ರೆಗ್ಗಜೋನಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಆದರೆ ಅಧುನಿಕ ಯುಗದ ಎಫ್-1 ರೇಸ್ನ ಅಂತಿಮ ರೇಸ್ ವೇಳೆಗೆ ಅಗ್ರ ಇಬ್ಬರು ಚಾಲಕರ ಚಾಂಪಿಯನ್ಶಿಪ್ ಅಂಕ ಟೈ ಆದ ಉದಾಹರಣೆ ಇದುವರೆಗೂ ಕಂಡುಬಂದಿಲ್ಲ.
ಇದನ್ನೂ ಓದಿ IND VS AUS: ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದ ಪಿಚ್ ರಿಪೋರ್ಟ್ ಹೇಗಿದೆ?
ಈಗಾಗಲೇ ಸೌದಿ ಅರೇಬಿಯಾದಲ್ಲಿ ಭಾನುವಾರ ಆರಂಭವಾಗುವ ಈ ರೇಸ್ಗೆ ಎಲ್ಲ ರೇಸರ್ಗಳು ಭರ್ಜರಿ ಅಭ್ಯಾಸ ನಡೆಸಿದ್ದಾರೆ. ಈ ಬಾರಿಯೂ ಮ್ಯಾಕ್ಸ್ ವೆಸ್ಟಾರ್ಪೆನ್ ಮತ್ತು ಲೆವಿಸ್ ಹ್ಯಾಮಿಲ್ಟನ್ ಮಧ್ಯೆ ಮತ್ತೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಫೈನಲ್ ರೇಸ್ ನವೆಂಬರ್ 19ಕ್ಕೆ ಅಬುಧಾಬಿಯಲ್ಲಿ ನಡೆಯಲಿದೆ.
ರೇಸರ್ಗಳ ಸುರಕ್ಷತೆಗೆ ‘ಹಾಲೋ’ ವ್ಯವಸ್ಥೆ
ಇದು ಅತ್ಯಂತ ಅಪಾಯಕಾರಿ ರೇಸ್ ಆಗಿರುವ ಕಾರಣ ಇಲ್ಲಿ ‘‘ಹಾಲೋ’ ವ್ಯವಸ್ಥೆಯನ್ನು ಎಫ್-1 ಕಾರಿನಲ್ಲಿ ಚಾಲಕನ ಸುರಕ್ಷತೆಗೆ ಬಳಸಲಾಗುತ್ತದೆ. ಕಾಕ್‌ಪಿಟ್ ಮೇಲೆ ಟೈಟಾನಿಯಂನಿಂದ ತಯಾರಿಸಿದ 3 ಪಟ್ಟಿಗಳನ್ನು ಅವಳಡಿಸಲಾಗಿರುತ್ತದೆ. ಇವು ಒಂದು ಕಾರು ಮತ್ತೊಂದು ಕಾರಿನ ಮೇಲೆ ಬಿದ್ದಾಗ, ಅಥವಾ ಯಾವುದಾದರೂ ವಸ್ತುಗಳು ಕಾರಿನ ಮೇಲೆ ಬಿದ್ದಾಗ ಕಾಕ್‌ಪಿಟ್‌ನೊಳಗಿರುವ ಚಾಲಕನ ತಲೆಗೆ ತಗಲುವ ಏಟನ್ನು ಇದು ತಡೆಯುತ್ತವೆ. ‘ಹಾಲೋ’ ಪಟ್ಟಿಗಳು ಸುಮಾರು 12 ಸಾವಿರ ಕೆ.ಜಿ. ತೂಕವನ್ನು ತೆಡೆಯುವ ಸಾಮರ್ಥ್ಯವನ್ನು ಹೋಂದಿದೆ. 2018ರಿಂದ ಈ ‘ಹಾಲೋ’ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಪ್ರಾಣಾಪಾಯದಿಂದ ಪಾರಾಗಿದ್ದ ಹ್ಯಾಮಿಲ್ಟನ್
ಕಳೆದ ಬಾರಿ ಇಟಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ 1 ರೇಸ್ ವೇಳೆ ಭಾರಿ ಅಪಘಾತ ನಡೆದಿದ್ದು, ‘ಹಾಲೋ’ ಸುರಕ್ಷತೆ ವ್ಯವಸ್ಥೆಯಿಂದಾಗಿ 7 ಬಾರಿಯ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಪ್ರಾಣಾಪಾಯದಿಂದ ಪಾರಾಗಿದ್ದರು.
ರೆಡ್‌ಬುಲ್ ರೇಸಿಂಗ್ ತಂಡದ ಚಾಲಕ ಮ್ಯಾಕ್ಸ್ ವೆಸ್ಟಾರ್ಪೆನ್ ಅವರ ಅಪಾಯಕಾರಿಯಾರಿ ಚಾಲನೆಯಿಂದ ತಿರುವೊಂದರಲ್ಲಿ ಅವರ ಕಾರು ಹ್ಯಾಮಿಲ್ಟನ್‌ರ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ರಭಸಕ್ಕೆ ಕಾರು ಹ್ಯಾಮಿಲ್ಟನ್ ಅವರ ಮೇಲೆ ಬಿದ್ದಿತ್ತು. ‘ಹಾಲೋ’ ವ್ಯವಸ್ಥೆ ಇಲ್ಲದಿದ್ದರೆ ವೆಸ್ಟಾರ್ಪೆನ್ ಅವರ ಕಾರಿನ ಚಕ್ರ ಹ್ಯಾಮಿಲ್ಟನ್ ತಲೆ ಮೇಲೆ ಹರಿದು ದೊಡ್ಡ ಅವಘಡವೊಂದು ಸಂಭವಿಸುತ್ತಿತ್ತು. ‘ಹಾಲೋ’ ವ್ಯವಸ್ಥೆ ಇದ್ದ ಕಾರಣದಿಂದ ಹ್ಯಾಮಿಲ್ಟನ್ ಬದುಕುಳಿದರು.
ಈ ಅವಘಡ ಸಂಭವಿಸಿದ ಬಳಿಕ ಮಾತನಾಡಿದ್ದ ಹ್ಯಾಮಿಲ್ಟನ್ ‘ಹಾಲೋ’ ವ್ಯವಸ್ಥೆ ಇಲ್ಲವಾಗಿದ್ದರೆ ನಾನು ಬದುಕುಳಿಯುತ್ತಿರಲಿಲ್ಲ. ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಇಂತಹ ವ್ಯವಸ್ಥೆ ಇದ್ದಾಗ ಹಲವು ರೇಸರ್ಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳುವ ಮನಸ್ಸು ಮಾಡುತ್ತಾರೆ. ಇದನ್ನು ಕಂಡು ಹಿಡಿದವರಿಗೆ ನಿಜವಾಗಿಯೂ ಧನ್ಯವಾದ ಹೇಳಲೇ ಬೇಕು ಎಂದು ಹೇಳಿದ್ದರು.