Site icon Vistara News

Franz Beckenbauer: ಫುಟ್‌ಬಾಲ್ ದಿಗ್ಗಜ ಫ್ರಾಂಜ್ ಬೆಕನ್ಬೌರ್ ಇನ್ನಿಲ್ಲ

Franz Beckenbauer

ಜರ್ಮನಿ: ಜರ್ಮನಿಯ ಫುಟ್ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕನ್ಬೌರ್ (78) ನಿಧನರಾಗಿದ್ದಾರೆ. ಅವರ ಸಾವಿನ ಸುದ್ದಿಯನ್ನು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಪ್ರಕಟಿಸಿದೆ. “ಫ್ರಾಂಜ್ ಬೆಕನ್ಬೌರ್ ಅಗಲಿಕೆಯ(Franz Beckenbauer) ವಿಚಾರವನ್ನು ತೀವ್ರ ದುಃಖದಿಂದ ಘೋಷಿಸುತ್ತೇವೆ” ಎಂದು ಅವರ ಕುಟುಂಬವು ಜರ್ಮನ್ ಸುದ್ದಿ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ.

1974ರಲ್ಲಿ ಜರ್ಮನಿ ತಂಡದ ನಾಯಕರಾಗಿದ್ದಾಗ ಬೆಕನ್ಬೌರ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದರು. ನಿವೃತ್ತಿ ಬಳಿಕ ಅವರು ತಂಡದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡ 1990ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆದ್ದಿತ್ತು. ಬೆಕನ್ಬೌರ್ ನಾಲ್ಕು ಬಾರಿ ಬುಂಡೆಸ್ಲಿಗಾ ಮತ್ತು ನಾಲ್ಕು ಬಾರಿ ಜರ್ಮನ್ ಕಪ್ ಗೆದ್ದಿದ್ದಾರೆ.

ಬೆಕನ್ಬೌರ್ 1974 ರಿಂದ 1976 ರವರೆಗೆ ಸತತ ಮೂರು ಯುರೋಪಿಯನ್ ಕಪ್ ವಿಜೇಯತ ತಂಡವನ್ನು ಮುನ್ನಡೆಸಿದ್ದರು. ಜರ್ಮನಿ ತಂಡದ ತರಬೇತುದಾರರಾಗಿದ್ದಾಗ, ಅವರ ತರಬೇತಿಯಲ್ಲಿ ಜರ್ಮನ್ ತಂಡವು 1986 ರ ವಿಶ್ವಕಪ್​ನಲ್ಲಿ ಫೈನಲ್ ತಲುಪಿತ್ತು. ಆದರೆ, ಫೈನಲ್​ ಪಂದ್ಯದಲ್ಲಿ ಅರ್ಜೆಂಟೀನಾ ಎದುರು ಸೋಲು ಕಂಡಿತ್ತು. ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು ಬೆಕನ್ಬೌರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಈ ಆಟದ ಮೇಲೆ ಅವರ ಪ್ರಭಾವ ಅಸಾಧಾರಣವಾದುದು ಎಂದು ಬಣ್ಣಿಸಿದ್ದಾರೆ. ಜತೆಗೆ ಜರ್ಮನಿ ಫುಟ್​ಬಾಲ್​ ಸಂಸ್ಥೆಯೂ ಸಂತಾಪ ಸೂಚಿಸಿದೆ.

ಇದನ್ನೂ ಓದಿ Neymar: ಫುಟ್ಬಾಲ್​ ಆಟಗಾರ ನೇಯ್ಮರ್‌ ಗೆಳತಿ, ಮಗುವನ್ನು ಅಪಹರಿಸಲು ಯತ್ನ

ಮೂರು ದಿನಗಳ ಹಿಂದೆ ಸಾವನ್ನಪ್ಪಿದ್ದ ಮಾರಿಯೊ ಝಗಾಲೊ

ಬ್ರೆಜಿಲ್ ತಂಡದ ದಿಗ್ಗಜ ಫುಟ್ಬಾಲ್​ ಆಟಗಾರ ಮಾರಿಯೊ ಝಗಾಲೊ ಮೂರು ದಿನಗಳ(ಜ.6) ಹಿಂದೆ ನಿಧನ ಹೊಂದಿದ್ದರು. ಆಟಗಾರ ಮತ್ತು ನಂತರ ಕೋಚ್‌ ಆಗಿ ಅವರು ಒಟ್ಟು ನಾಲ್ಕು ಸಲ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿ ಗೆದ್ದ ಸಾಧನೆ ಮಾಡಿದ್ದರು. ಅವರಿಗೆ 92 ವರ್ಷವಾಗಿತ್ತು. 1958ರಲ್ಲಿ ಬ್ರೆಜಿಲ್‌ ತಂಡ ಮೊದಲ ಬಾರಿ ವಿಶ್ವಕಪ್ ಗೆದ್ದಾಗ ಅವರು ಆಡಿದ್ದರು. 1970 ರಲ್ಲಿ ಅವರು ತಂಡದ ತರಬೇತುದಾರನಾಗಿದ್ದರು. ಆಟಗಾರ ಮತ್ತು ಮ್ಯಾನೇಜರ್ ಆಗಿ ವಿಶ್ವಕಪ್ ಗೆದ್ದ ಮೊದಲ ಆಟಗಾರನೆಂಬ ಶ್ರೇಯ ಮಾರಿಯೊ ಅವರದಾಗಿದೆ.

1994 ರ ಅಟ್ಲಾಂಟಾ (ಅಮೆರಿಕ) ವಿಶ್ವಕಪ್‌ನಲ್ಲಿ ಬ್ರೆಜಿಲ್ ತಂಡ ನಾಲ್ಕನೇ ಬಾರಿ ಚಾಂಪಿಯನ್ ಆದಾಗ ಅವರು ಸಹಾಯಕ ಕೋಚ್‌ ಆಗಿದ್ದರು. ‘ಓಲ್ಡ್‌ ವೂಲ್ಫ್’ (ಹಿರಿ ತೋಳ) ಎಂಬ ಅಡ್ಡಹೆಸರು ಅವರಿಗಿತ್ತು. 2006ರಲ್ಲಿ ಫುಟ್‌ಬಾಲ್‌ ಕ್ಷೇತ್ರಕ್ಕೆ ನಿವೃತ್ತಿ ಹೇಳಿದ್ದರು.

Exit mobile version