French Open 2022: ಈ ಬಾರಿಯೂ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಇಗಾ ಸ್ವಿಯಾಟೆಕ್ ಎರಡನೇ ಬಾರಿ ಚಾಂಪಿಯನ್ ಆಗಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕೊಕೊ ಗಾಫ್ ವಿರುದ್ಧ ಇಗಾ ಜಯ ಸಾಧಿಸಿ ಚಾಂಪಿಯನ್ ಆಗಿದ್ದಾರೆ. ಇಗಾ ಎರಡನೇ ಬಾರಿ ಚಾಂಪಿಯನ್ ಆದ ಸಂಭ್ರಮದಲ್ಲಿದ್ದಾರೆ.
ಫೈನಲ್ನಲ್ಲಿ ಇಗಾ ಆರಂಭದಿಂದಲೇ ಪರ್ಫೆಕ್ಟ್ ಆಟವನ್ನಾಡಿದರು. ಒಂದೊಂದು ಶಾಟ್ ಕೂಡ ಬಹಳ ಆಕ್ರಮಣಕಾರಿ ಆಗಿತ್ತು. ಕೊಕೊ ವಿರುದ್ಧ ನೇರ ದಾಳಿ ನಡೆಸುವಂತಿತ್ತು. ಈ ಫೈನಲ್ ಪಂದ್ಯವು ತುಂಬಾ ಹೊತ್ತು ನಡೆಯಲು ಇಗಾ ಅವಕಾಶ ಮಾಡಿಕೊಡಲಿಲ್ಲ. ವೇಗದ ಆಟವನ್ನಾಡಿ ಮೊದಲ ಸೆಟ್ನಲ್ಲಿ 6-1 ಅಂತರದ ಲೀಡ್ ಹಾಗೂ ಎರಡನೇ ಸೆಟ್ನಲ್ಲಿ 6-3 ಅಂತರದ ಲೀಡ್ ಪಡೆದರು. ಈ ಮೂಲಕ ಅವರು ಸತತ 35 ಪಂದ್ಯಗಳನ್ನು ಗೆದ್ದಿದ್ದಾರೆ.
2020ರಲ್ಲಿ ಇಗಾ ಫ್ರೆಂಚ್ ಓಪನ್ ಗೆದ್ದಿದ್ದರು.
ಮ್ಯಾಚ್ನ ಹೈಲೈಟ್ಸ್ ಏನು?
ಸೆಟ್ 1: ಗಾಫ್ನ ಸರ್ವ್ನಿಂದ ಮ್ಯಾಚ್ ಆರಂಭ. ಆದರೆ, ಮೊದಲು ಬ್ರೇಕ್ ಮಾಡಿದ್ದು ವಿಶ್ವ ಚಾಂಪಿಯನ್ ಇಗಾ. ಸುಲಭವಾಗಿ ಅಂಕವನ್ನು ಗಳಿಸುತ್ತಾ ಇಗಾ ಕೇವಲ 32 ನಿಮಿಷದಲ್ಲಿ ಪಂದ್ಯವನ್ನು ಮುಗಿಸಿದರು. 6-1 ಲೀಡ್ನಲ್ಲಿ ಸೆಟ್ ಗೆದ್ದರು.
ಸೆಟ್ 2: ಎರಡನೇ ಸಟ್ನಲ್ಲಿಯೂ ಇಗಾ ಸುಲಭವಾಗಿ ಸ್ಕೋರ್ ಮಾಡುತ್ತಿದ್ದರು. ಕೊಕೊ ಕಂಬ್ಯಾಕ್ ಮಾಡಲು ಪರದಾಡುತ್ತಿದ್ದರು. ಆದರೆ ಇಗಾ ಮಾತ್ರ ಅದಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಇಗಾ 6-3 ಅಂತರದಲ್ಲಿ ಲೀಡ್ ಪಡೆದು, ಕಪ್ ತಮ್ಮದಾಗಿಸಿಕೊಂಡರು.
ಪುರುಷರ ಪಂದ್ಯದ ಫಲಿತಾಂಶ ಏನಾಗುತ್ತದೆ ಎಂಬ ಕುತೂಹಲ ಇದೆ.