ಪ್ಯಾರಿಸ್: ಇಲ್ಲಿ ನಡೆದ ಫ್ರೆಂಚ್ ಓಪನ್(French Open Final) ಮಹಿಳಾ ಸಿಂಗಲ್ಸ್ ಫೈನಲ್ಸ್ನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್(Iga Swiatek) ಅವರು ತಮ್ಮ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಕ್ಸೋವಾ(Karolína Muchova) ಅವರನ್ನು 6-2, 5-7, 6-4 ಅಂತರದಿಂದ ಮಣಿಸಿ ಮೂರನೇ ಬಾರಿಗೆ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಸಾಧನೆ ಮಾಡಿದರು.
ಅತ್ಯಂತ ರೋಚಕವಾಗಿ ಸಾಗಿದ ಮೂರು ಸಟೆ್ಗಳ ಮ್ಯಾರಥಾನ್ ಸ್ಪರ್ಧೆಯಲ್ಲಿ ಮೊದಲ ಸುಲಭದಲ್ಲಿ ವಶಪಡಿಸಿಕೊಂಡ ಸ್ವಿಯಾಟೆಕ್, ದ್ವಿತೀಯ ಸೆಟ್‌ನಲ್ಲಿ ಎಡವಿದರು. ನಿರ್ಣಾಯಕ ಸೆಟ್‌ನ ಒಂದು ಹಂತದಲ್ಲಿ ಹಿನ್ನಡೆಯಲ್ಲಿದ್ದ ಅವರು ಪಿನಿಕ್ಸ್ನಂತೆ ಎದ್ದು ನಿಂತು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಗೆಲುವು ಸಾಧಿಸಿದರು. ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಮುಕ್ಸೋವಾ ಸೋತು ನಿರಾಸೆ ಅನುಭವಿಸಿದರು.
ಇದನ್ನೂ ಓದಿ French Open Final: ದಾಖಲೆಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವರೇ ಜೊಕೋವಿಕ್?
ದಾಖಲೆ ಸರಿಗಟ್ಟಿದ ಸ್ವಿಯಾಟೆಕ್
22 ವರ್ಷದ ಇಗಾ ಸ್ವಿಯಾಟೆಕ್ 2005-07ರ ಬಳಿಕ ಇಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದು ಜಸ್ಟಿನ್ ಹೆನಿನ್ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿದ್ದರು. ಹಾಗೆಯೇ ತಮ್ಮ ಮೊದಲ ನಾಲ್ಕೂ ಗ್ರ್ಯಾನ್‌ಸ್ಲಾಮ್ ಫೈನಲ್‌ಗಳನ್ನು ಗೆದ್ದ 3ನೇ ಆಟಗಾರ್ತಿ ಎನಿಸಿದರು. ಉಳಿದಿಬ್ಬರೆಂದರೆ ಮೋನಿಕಾ ಸೆಲೆಸ್ ಮತ್ತು ನವೋಮಿ ಒಸಾಕಾ.
First to defend the women’s singles title since Henin in 2007 💪#RolandGarros pic.twitter.com/lCPUHZgtqT
— Roland-Garros (@rolandgarros) June 10, 2023
ಬಹುಮಾನ: ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ವಿಯಾಟೆಕ್‌ಗೆ 20.5 ಕೋಟಿ ರೂ. ಬಹುಮಾನ ಮೊತ್ತ ದೊರೆಯಿತು.
ರನ್ನರ್ ಅಪ್ ಆದ ಮುಕೋವಾ 10.2 ಕೋಟಿ ರೂ. ಬಹುಮಾನ ಮೊತ್ತ ಪಡೆದರು.