ನವದೆಹಲಿ: ದೇಶದ 77ನೇ ಸ್ವಾತಂತ್ರ್ಯೋತ್ಸವದ (Independence Day 2023) ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ದೇಶದ ಜನತೆಗೆ ಶುಭ ಹಾರೈಸಿದ್ದಾರೆ(happy independence day). ಜತೆಗೆ ಸ್ಫೂರ್ತಿದಾಯಕ ಸಂದೇಶವನ್ನು ನೀಡಿದ್ದಾರೆ. ಟ್ವಿಟರ್ನಲ್ಲಿ ನೀಡಿರುವ ಎಲ್ಲ ಸಂದೇಶಗಳು ಇಂತಿವೆ.
ಸಚಿನ್ ತೆಂಡೂಲ್ಕರ್ ಟ್ವೀಟ್
ಟೀಮ್ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಟ್ವೀಟ್ ಮೂಲಕ 77ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ಟ್ವೀಟ್ನಲ್ಲಿ ಅವರು “ಐ ಲವ್ ಮೈ ಇಂಡಿಯಾ, ಪ್ರಪಂಚದಾದ್ಯಂತ ಇರುವ ನನ್ನ ಎಲ್ಲ ಸಹ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್” ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿಯ ಟ್ವೀಟ್
“ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಜೈ ಹಿಂದ್” ಎಂದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ಟ್ವೀಟ್ ಮೂಲಕ ಹಾರೈಸಿದ್ದಾರೆ. ಸದ್ಯ ಕೊಹ್ಲಿ ಏಷ್ಯಾಕಪ್ ಕ್ರಿಕೆಟ್ಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ರಾಬಿನ್ ಉತ್ತಪ್ಪ ಟ್ವೀಟ್
ಟೀಮ್ ಇಂಡಿಯಾದ ಮಾಜಿ ಆಟಗಾರ ರಾಬಿನ್ ಉತ್ತಪ್ಪ(Robin Uthappa) ಅವರು ವಿಡಿಯೊ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ.”ಈ ದೇಶದಲ್ಲಿ ಕುಟ್ಟಿರುವುದಕ್ಕೆ ಹೆಮ್ಮೆ ಇದೆ. ಪ್ರೀತಿ, ಶಾಂತಿಯಿಂದ ನೆಲೆಸಿರುವ ಭವ್ಯ ಭಾರತ ಶ್ರೇಷ್ಠ” ಎಂದು ಹೇಳಿದ್ದಾರೆ.
ಸುರೇಶ್ ರೈನಾ ಟ್ವೀಟ್
“ನನ್ನ ಸಹ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು! ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸೋಣ ಮತ್ತು ವಿವಿಧತೆಯಲ್ಲಿ ಏಕತೆಯ ಮನೋಭಾವವನ್ನು ಪಾಲಿಸೋಣ. ವೈವಿಧ್ಯತೆಯಲ್ಲಿ ಏಕತೆಯನ್ನು ಸಂಕೇತಿಸುವ ತ್ರಿವರ್ಣ ಧ್ವಜ ಯಾವಾಗಲೂ ಎತ್ತರಕ್ಕೆ ಹಾರಲಿ. ಜೈಹಿಂದ್” ಎಂದು ಸುರೇಶ್ ರೈನಾ(Suresh Raina) ಟ್ವೀಟ್ ಮಾಡಿದ್ದಾರೆ.
ಜೆಮಿಮಾ ರೋಡ್ರಿಗಸ್
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್(Jemimah Rodrigues) ಅವರು ತಾವು ತಂಡಕ್ಕೆ ಸ್ಮರಣೀಯ ಗೆಲುವು ದಾಖಲಿಸಿಕೊಟ್ಟ ಮತ್ತು ರಾಷ್ಟ್ರ ಗೀತೆಯನ್ನು ಹಾಡುವ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ, ಈ ದೇಶಕ್ಕಾಗಿ ಆಡುತ್ತಿರುವುದಕ್ಕೆ ಆಭಾರಿಯಾಗಿದ್ದೇನೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Independence Day 2023: ಮಣಿಪುರ ಶಾಂತಿಯಿಂದ ಡಿಜಿಟಲ್ ಕ್ರಾಂತಿವರೆಗೆ; ಮೋದಿ ಕೆಂಪು ಕೋಟಿ ಭಾಷಣದ ಮೋಡಿ
ಹೀಗೆ ಇರ್ಫಾನ್ ಪಠಾಣ್, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆ ಸೇರಿ ಅನೇಕ ಕ್ರಿಕೆಟಿಗರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.