Site icon Vistara News

Gautam Gambhir | ಇನ್ನು ಮುಂದೆ ಟಿ20 ವಿಶ್ವ ಕಪ್​ನಲ್ಲಿ ಕೆ.ಎಲ್​. ರಾಹುಲ್​ ಅವರದ್ದೇ ಆಟ; ಗಂಭೀರ್​ ವಿಶ್ವಾಸ

kl

ನವದೆಹಲಿ: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಆರಂಭಿಕ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಒಳಗಾಗಿದ್ದರು. ಆದರೆ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅದ್ಭುತ ಅರ್ಧ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದ ಸೂಚನೆ ನೀಡಿದ್ದಾರೆ. ಇದೀಗ ರಾಹುಲ್​ ಪ್ರದರ್ಶನದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಗೌತಮ್​ ಗಂಭೀರ್(Gautam Gambhir)​, ಮುಂದಿನ ಪಂದ್ಯದಲ್ಲಿ ರಾಹುಲ್​ ಆಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್​​, “ಒಂದು ಕೆಟ್ಟ ಇನಿಂಗ್ಸ್​ನಿಂದ​ ರಾಹುಲ್​ ಅವರನ್ನು ಕಳಪೆ ಆಟಗಾರ ಎನ್ನಲು ಸಾಧ್ಯವಿಲ್ಲ, ರಾಹುಲ್ ಯಾವಾಗಲೂ ಫಾರ್ಮ್‌ನಲ್ಲೇ ಇರುತ್ತಾರೆ. ಅಭ್ಯಾಸ ಪಂದ್ಯದಲ್ಲಿ ರಾಹುಲ್ ಅರ್ಧ ಶತಕ ಬಾರಿಸಿದಾಗ ಎಲ್ಲರೂ ಸಂಭ್ರಮಿಸಿದ್ದರು. ಆದರೆ ಬಳಿಕ ಒಂದೆರಡು ಪಂದ್ಯದಲ್ಲಿ ಆಡಿಲ್ಲ ಎಂದು ಅವರನ್ನು ಟೀಕಿಸುವುದು ಸರಿಯಲ್ಲ. ಮುಂದಿನ ಪಂದ್ಯದಿಂದ ಅವರ ನೈಜ ಆಟ ಏನೆಂಬುದು ಎಲ್ಲರಿಗೂ ತಿಳಿಯಲಿದೆ” ಎಂದು ಗಂಭೀರ್​ ಹೇಳಿದ್ದಾರೆ.

ರಾಹುಲ್‌ಗೆ ಗಂಭೀರ್ ಬೆಂಬಲ

ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಕೆಲಸ ಮಾಡುವ ವೇಳೆ ರಾಹುಲ್​ ಸಾಮರ್ಥ್ಯ ಏನೆಂದು ನನಗೆ ಅರ್ಥವಾಗಿದೆ. ಏರಿಳಿತಗಳು ಕ್ರೀಡೆಯಲ್ಲಿ ಸಾಮಾನ್ಯ. ಇದೀಗ ರಾಹುಲ್​ ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡಿರುವುದು ಸಂತಸ ತಂದಿದೆ ಮುಂದಿನ ಪಂದ್ಯಗಳಲ್ಲಿಯೂ ಅವರ ಈ ಆಟ ಮುಂದುವರಿಯಲಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಿಳಿಸಿದ್ದಾರೆ.

ಇದನ್ನೂ ಓದಿ |T20 World Cup | ನಾಯಕನ ಸ್ಥಾನಕ್ಕೆ ವಿದಾಯ ಹೇಳಿದ ಅಫಘಾನಿಸ್ತಾನದ ಮೊಹಮ್ಮದ್ ನಬಿ

Exit mobile version