ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಅವರು ಸದಾ ಒಂದಲ್ಲ ಒಂದು ವಿವಾದದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಾರಿ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡ ಭಾರತ ಕ್ರಿಕೆಟ್ ತಂಡದ ಆಟಗಾರರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಇತ್ತೀಚೆಗೆ ಪ್ರಸಾರಗೊಂಡ ಪಾನ್ ಮಸಾಲ ಜಾಹಿರಾತಿನಲ್ಲಿ ಸುನೀಲ್ ಗವಾಸ್ಕರ್(sunil gavaskar), ಕಪಿಲ್ ದೇವ್(kapil dev), ವೀರೇಂದ್ರ ಸೆಹವಾಗ್(Virender Sehwag) ಕಾಣಿಸಿಕೊಂಡಿದ್ದರು. “ಇದು ಬಾಯಿಯನ್ನು ತಾಜಾ ಆಗಿಡುವ ಒಂದು ಉತ್ಪನ್ನ” ಎಂದು ಹೇಳುವ ಮೂಲಕ ಪಾನ್ ಮಸಾಲ ಕಂಪನಿಗೆ ಪ್ರೋತ್ಸಾಹ ನೀಡಿರುವುದು ಗಂಭೀರ್ ಅವರ ಆಕ್ರೋಶಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
“ಕ್ರಿಕೆಟಿಗ ಅಥವಾ ಕ್ರೀಡಾಪಟು ಪಾನ್ ಮಸಾಲ ಜಾಹೀರಾತಿನಲ್ಲಿ ಪಾಲ್ಗೊಂಡಿರುವುದನ್ನು ನಾನೆಂದೂ ನೋಡಿರಲಿಲ್ಲ. ಇದು ಅತ್ಯಂತ ದುರದೃಷ್ಟಕರ ಸಂಗತಿ. ಸಮಾಜಕ್ಕೆ ಮಾದರಿ ವ್ಯಕ್ತಿಗಳಾದ ನೀವು ಈ ರೀತಿ ಹಣದ ಏಸೆಗೆ ಬಿದ್ದು ಸಮಾಜದ ದಾರಿ ತಪ್ಪಿಸುವ ಕೆಲ ಎಂದಿಗೂ ಮಾಡಬಾರು. ಇದೇ ಕಾರಣಕ್ಕೆ ನಾನು ಮಾದರಿ ವ್ಯಕ್ತಿಯನ್ನು ಸರಿಯಾಗಿ ಆಯ್ದುಕೊಳ್ಳಿ ಎಂದು ಹೇಳುತ್ತಿರುವುದು” ಎಂದು ಗಂಭೀರ್ ಹೇಳಿದ್ದಾರೆ.
“ಯಾವುದೇ ಒಬ್ಬ ವ್ಯಕ್ತಿಯನ್ನು ಅವನ ಹೆಸರಿನಿಂದ ಗುರುತಿಸುವುದಿಲ್ಲ, ಬದಲಾಗಿ ಆತ ಮಾಡುವ ಕೆಲಸದಿಂದ ಗುರುತಿಸುತ್ತಾರೆ. ಕ್ರಿಕೆಟ್ಗೆ ನೀವು ನೀಡಿದ ಸಾಧನೆ ಅಪಾರ, ಅದರಲ್ಲಿ ಒಂದು ಮಾತಿಲ್ಲ. ನಿಮ್ಮನ್ನು ಕೋಟ್ಯಂತರ ಮಕ್ಕಳು ನೋಡುತ್ತಿದ್ದಾರೆ. ನಿಮ್ಮಂತೆ ಆಗಲು ಅವರು ಕೂಡ ಬಯಸುತ್ತಾರೆ, ಆದರೆ ನೀವು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಅವರು ಕೂಡ ನಿಮ್ಮ ದಾರಿಯನ್ನು ಅನುಸರಿಸಿದರೆ ಕಷ್ಟ. ನೀವು ಈ ಪದಾರ್ಥವನ್ನು ತಿನ್ನುವಂತೆ ನಟಿಸಿದರೂ, ಮಕ್ಕಳಿಗೆ ಇದು ತಿಳಿದಿಲ್ಲ. ಹೀಗಾಗಿ ದಯವಿಟ್ಟು ಹಣಕೋಸ್ಕರ ಈ ಮಟ್ಟಕ್ಕೆ ಇಳಿಯುವುದು ನಾಚಿಕೆಗೇಡು, ಹಣ ಮಾಡುವುದಕ್ಕೆ ಬೇಕಾದಷ್ಟು ಇತರೆ ದಾರಿಗಳೂ ಇವೆ” ಎಂದು ಹೇಳುವ ಮೂಲಕ ಈ ಜಾಹಿರಾತಿನಲ್ಲಿ ನಟಿಸಿದ ಕ್ರಿಕೆಟಿಗರಿಗೆ ಪರೋಕ್ಷವಾಗಿ ಜಾಡಿಸಿದ್ದಾರೆ.
ಸಚಿನ್ ಮಾದರಿ ವ್ಯಕ್ತಿ
2018ರಲ್ಲಿ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ತೊರೆದಾಗ ನನಗೂ ಪಾನ್ ಮಸಾಲ ಕಂಪನಿಯ ಜಾಹೀರಾತಿನಲ್ಲಿ ಪಾಲ್ಗೊಳ್ಳಲು 3 ಕೋಟಿ ರೂ. ಆಫರ್ ಬಂದಿತ್ತು. ಆದರೆ ನಾನು ಇದನ್ನು ತಿರಸ್ಕರಿಸಿದ್ದೆ. ಸಚಿನ್ ತೆಂಡೂಲ್ಕರ್‌ಗೂ 20, 30 ಕೋಟಿ ರೂ. ಆಮಿಷಗಳು ಬಂದಿದ್ದವು. ಆದರೆ ಅವರು ಅದನ್ನು ತಿರಸ್ಕರಿಸಿದ್ದರು. ಅದಕ್ಕೆ ಸಚಿನ್ ಅವರು ಎಲ್ಲರಿಗೂ ಮಾದರಿ ವ್ಯಕ್ತಿ ಎಂದು ಗಂಭೀರ್ ಹೇಳಿದ್ದಾರೆ.