ನವದೆಹಲಿ: ಟೀಮ್ ಇಂಡಿಯಾ ಕ್ರಿಕೆಟಿಗರು ಹೆಚ್ಚಾಗಿ ಐಪಿಎಲ್ ಆಡುವುದನ್ನು ನಿಲ್ಲಿಸಿ ವಿಶ್ವ ಕಪ್ ಟೂರ್ನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಮಾಜಿ ಆಟಗಾರ ಗೌತಮ್ ಗಂಭೀರ್(Gautam Gambhir) ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಶೋ “ರೋಡ್ ಟು ವರ್ಲ್ಡ್ ಕಪ್ ಗ್ಲೋರಿ”ಯಲ್ಲಿ ಮಾತನಾಡಿದ ಗಂಭೀರ್, ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವ ಕಪ್ ಟೂರ್ನಿಯಲ್ಲಿ ನಾಯಕ ರೋಹಿತ್ ಶರ್ಮಾ,ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರು ಬೃಹತ್ ಪಾತ್ರ ವಹಿಸಬೇಕು ಈ ನಿಟ್ಟಿನಲ್ಲಿ ಐಪಿಎಲ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬಾರದು ಎಂದು ಅವರು ಹೇಳಿದ್ದಾರೆ.
“ಭಾರತವು ನಿರ್ಭೀತ ಆಟಗಾರರನ್ನು ಗುರುತಿಸಬೇಕು ಮತ್ತು 50 ಓವರ್‌ಗಳ ಸ್ವರೂಪದಲ್ಲಿ ಕ್ರಿಕೆಟಿಗರ ಮಿಶ್ರಣವನ್ನು ಹೊಂದಿರಬೇಕು. ಹೊಸ ಆಟಗಾರರು, ಟಿ20 ಅಥವಾ ಐಪಿಎಲ್‌ನಿಂದ ವಿರಾಮ ತೆಗೆದುಕೊಳ್ಳಲು ಬಯಸುತ್ತಾರೆಯೇ ಇಲ್ಲವೇ ಎಂಬುದನ್ನು ಲೆಕ್ಕಿಸದೆ 50 ಓವರ್‌ಗಳ ವಿಶ್ವ ಕಪ್‌ಗಾಗಿ ಸಾಕಷ್ಟು ವೈಟ್-ಬಾಲ್ ಕ್ರಿಕೆಟ್ ಆಡಬೇಕು. ಟಿ20 ಸ್ವರೂಪದ ಆಟಗಳಿಗೆ ವಿರಾಮ ಬೇಕು, 50 ಓವರ್‌ಗಳ ಆಟಗಳಿಗಲ್ಲ” ಎಂದು ಗಂಭೀರ್ ಹೇಳಿದ್ದಾರೆ.
ಐಪಿಎಲ್‌ನಿಂದ ದೂರವಿರಿ
ಆಟಗಾರರು ಮೊದಲ ಆದ್ಯತೆ ಭಾರತೀಯ ಕ್ರಿಕೆಟ್ಗೆ ನೀಡಬೇಕು. ಐಪಿಎಲ್ಗೆ ಅಲ್ಲ. ಐಪಿಎಲ್ ಕೇವಲ ಸರಕು ಮಾತ್ರ. ವಿಶ್ವ ಕಪ್ ಗೆದ್ದರೆ ಅದು ದೊಡ್ಡ ಗೌರವ ಎಂದು ಗಂಭೀರ್, ಬಿಸಿಸಿಐ ಮತ್ತು ಟೀಮ್ ಇಂಡಿಯಾದ ಆಟಗಾರರಿಗೆ ಗಂಭೀರವಾದ ಸಲಹೆಯನ್ನು ನೀಡಿದ್ದಾರೆ. “ಒಬ್ಬ ಪ್ರಮುಖ ಆಟಗಾರ ಐಪಿಎಲ್ ಪಂದ್ಯಗಳನ್ನು ತಪ್ಪಿಸಿಕೊಂಡರೆ ಪರವಾಗಿಲ್ಲ. ಏಕೆಂದರೆ ಐಪಿಎಲ್ ಪ್ರತಿ ವರ್ಷ ನಡೆಯುತ್ತದೆ. ಆದರೆ ವಿಶ್ವ ಕಪ್ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ನಡೆಯುತ್ತದೆ. ಹಾಗಾಗಿ, ವಿಶ್ವಕಪ್ ಗೆಲ್ಲುವುದು ಮುಖ್ಯ” ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ | ODI World Cup | ಏಕದಿನ ವಿಶ್ವಕಪ್ನಲ್ಲಿ ಈ ಬಾರಿ ಏಷ್ಯಾದ ಯಾವುದೇ ತಂಡಗಳು ಮೇಲುಗೈ ಸಾಧಿಸುವುದಿಲ್ಲ; ಸಂಗಕ್ಕರ ಅಚ್ಚರಿಕೆಯ ಹೇಳಿಕೆ!