Site icon Vistara News

Lacknow Supre Giants : ಗೌತಮ್ ಗಂಭೀರ್​ಗೆ ಲಕ್ನೊ ತಂಡದಲ್ಲಿ ದೊಡ್ಡ ಜವಾಬ್ದಾರಿ ಕೊಟ್ಟ ಮಾಲೀಕರು

gautam gambhir

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ (IPL 2024) ಮುಂಬರುವ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lacknow Supre Giants) ತಂಡದ ‘ಗ್ಲೋಬಲ್ ಮೆಂಟರ್’ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಶನಿವಾರ, ಕೆ.ಎಲ್ ರಾಹುಲ್ ನೇತೃತ್ವದ ತಂಡ ಎಲ್​ಎಸ್​ಜಿ ತಂಡ ಸಂಪೂರ್ಣ ಕೋಚಿಂಗ್ ಸಿಬ್ಬಂದಿ ವಿಭಾಗವನ್ನು ಘೋಷಿಸಿತು. ಈ ಹಿಂದೆ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಕೆಲಸ ಮಾಡಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಸ್ಪಿನ್ ಕೋಚ್ ಸಲಹೆಗಾರ ಶ್ರೀಧರನ್ ಶ್ರೀರಾಮ್ ಅವರು ಐಪಿಎಲ್ 2024 ಗಾಗಿ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಗೆ ಸಹಾಯಕ ಕೋಚ್ ಆಗಿ ಸೇರಿಕೊಂಡಿದ್ದಾರೆ.

ಶ್ರೀರಾಮ್ ಸೇರ್ಪಡೆಯೊಂದಿಗೆ, ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಜಾಗತಿಕ ಮಾರ್ಗದರ್ಶಕ ಗೌತಮ್ ಗಂಭೀರ್, ಸಹಾಯಕ ಕೋಚ್ ವಿಜಯ್ ದಹಿಯಾ, ಪ್ರವೀಣ್ ತಾಂಬೆ ಮತ್ತು ದಕ್ಷಿಣ ಆಫ್ರಿಕಾದ ಮಾರ್ನೆ ಮಾರ್ಕೆಲ್ ಮತ್ತು ಜಾಂಟಿ ರೋಡ್ಸ್ ಅವರನ್ನೊಳಗೊಂಡ ಅತ್ಯುತ್ತಮ ಕೋಚಿಂಗ್ ವಿಭಾಗವನ್ನು ಹೊಂದಿದಂತಾಗಿದೆ.

ಶ್ರೀಧರನ್ ಶ್ರೀರಾಮ್ ತಮ್ಮೊಂದಿಗೆ ಅಪಾರ ಕೋಚಿಂಗ್​ ಜ್ಞಾನದ ಸಂಪತ್ತು ಹೊಂದಿದ್ದಾರೆ. ಅವರು ಬಾಂಗ್ಲಾದೇಶದ ಪುರುಷರ ರಾಷ್ಟ್ರೀಯ ಟಿ -20 ತಂಡವನ್ನು ಟಿ-20 ವಿಶ್ವಕಪ್​ನ ಸೂಪರ್-12ನಲ್ಲಿ ಎರಡು ಅತ್ಯುತ್ತಮ ವಿಜಯಗಳಿಗೆ ಯಶಸ್ವಿಯಾಗಿ ಮುನ್ನಡೆಸಿದ್ದವರು.

ಲಕ್ನೋ ಸೂಪರ್ ಜೈಂಟ್ಸ್​​ ಕೋಚಿಂಗ್

2021-22ರ ಋತುವಿನಲ್ಲಿ ಟಿ20 ವಿಶ್ವಕಪ್ ಮತ್ತು ಆಶಸ್​ನಲ್ಲಿ ಆಸ್ಟ್ರೇಲಿಯಾ ಪುರುಷರ ತಂಡದ ಗೆಲುವಿನಲ್ಲಿ ಶ್ರೀಧರನ್ ಶ್ರೀರಾಮ್ ಅವರ ಕೊಡುಗೆಯಿದೆ. ಐಪಿಎಲ್​​ನಲ್ಲಿ ಅನುಭವ ಹೊಂದಿರುವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. 2008ರಲ್ಲಿ, ಶ್ರೀರಾಮ್ ಇಸಿಬಿ ಲೆವೆಲ್​ 3ರಲ್ಲಿ ಮುಖ್ಯ ಕೋಚ್” ಎಂಬ ಖ್ಯಾತಿ ಪಡೆದುಕೊಂಡವರಾಗಿದ್ದರು.

ಪಾಕ್​ ವಿರುದ್ಧ ರಾಹುಲ್​ ಆಡುವುದು ಖಚಿತ

ಕೊಲಂಬೊ: ಸಂಪೂರ್ಣ ಫಿಟ್​ ಆಗದ ಕಾರಣ ಏಷ್ಯಾಕಪ್​ನ(Asia Cup 2023) ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ ಕೆ.ಎಲ್​. ರಾಹುಲ್(KL Rahul)​ ಅವರು ಈಗ ಫುಲ್​ ಫಿಟ್​ ಆಗಿದ್ದಾರೆ. ಭಾನುವಾರ ನಡೆಯುವ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ(IND vs PAK) ವಿರುದ್ಧ ಅವರು ಆಡುವುದು ಖಚಿತವಾಗಿದೆ. ಅಲ್ಲದೆ ಅವರ ಕ್ರಮಾಂಕದ ಬಗ್ಗೆಯೂ ತಂಡದ ನಾಯಕ ರೋಹಿತ್​ ಶರ್ಮ ಸ್ಪಷ್ಟನೆ ನೀಡಿದ್ದಾರೆ.

ರಾಹುಲ್​ ಇನಿಂಗ್ಸ್ ಆರಂಭ

ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದಿದ್ದರು. ನಂತರ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದರು. ಸೋಮವಾರ ಅವರು ಫಿಟ್​ನೆಸ್​ ಪಾಸ್​ ಆಗಿ ಶ್ರೀಲಂಕಾಕ್ಕೆ ತೆರಳಿದ್ದರು. ಶಕ್ರವಾರ ಪ್ರೇಮದಾಸ ಕ್ರಿಕೆಟ್​ ಮೈದಾನದಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಇದೀಗ ರೋಹಿತ್​ ಶರ್ಮ ಅವರು ರಾಹುಲ್​ ಪಾಕಿಸ್ತಾನ ವಿರುದ್ಧ ಭಾರತದ ಇನಿಂಗ್ಸ್​ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕೀಪಿಂಗ್​ ಮಾತ್ರ ಇಶಾನ್​ ಕಿಶನ್​ ನಡೆಸುವುದಾಗಿ ತಿಳಿಸಿದ್ದಾರೆ.

ಗಿಲ್​ಗೆ ಮೂರನೇ ಕ್ರಮಾಂಕ

ರೋಹಿತ್​ ಶರ್ಮ ಜತೆ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಯುತ್ತಿದ್ದ ಶುಭಮನ್​ ಗಿಲ್​ ಅವರು ಮೂರನೇ ಕ್ರಮಾಂಕದಲ್ಲಿ ಆಡಲು ನಿರ್ಧರಿಸಿರುವುದಾಗಿ ರೋಹಿತ್​ ತಿಳಿಸಿದ್ದಾರೆ. ಗಿಲ್​ ಅವರು ರಾಹುಲ್​ ಅವರಿಗೆ ಆರಂಭಿಕ ಸ್ಥಾನ ಬಿಟ್ಟುಕೊಡಲು ನಿರ್ಧರಿಸಿದ್ದು, ಇದೇ ವಿಚಾರವಾಗಿ ಗಿಲ್​ ರಾಹುಲ್​ ಜತೆ ಚರ್ಚಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್​ ಆಡಲಿದ್ದಾರೆ ಎಂದು ರೋಹಿತ್​ ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ.

Exit mobile version