Site icon Vistara News

Virat kohli : ವಿರಾಟ್​ ಕೊಹ್ಲಿಯನ್ನು ಮೊದಲ ಬಾರಿ ಹೊಗಳಿದ ಗೌತಮ್​ ಗಂಭೀರ್​!

Gautam Gambhir speaks about WTC Final

ನವ ದೆಹಲಿ: ವಿರಾಟ್​ ಕೊಹ್ಲಿ (Virat kohli ) ಏನೇ ಸಾಧನೆ ಮಾಡಿದರೂ ಅದರು ತೃಪ್ತಿಕರವಲ್ಲ ಎಂದು ಮಾಜಿ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್ (Gautam Gambhir)​ ಹೇಳಿಕೆ ಕೊಡುತ್ತಾರೆ. ಹೀಗಾಗಿ ಗಂಭೀರ್ ಅವರನ್ನು ವಿರಾಟ್​ ಕೊಹ್ಲಿಯ ಕಾಯಂ ಟೀಕಾಕಾರ ಎಂದೇ ಹೇಳಲಾಗುತ್ತದೆ. ಅಚ್ಚರಿಯೆಂದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಡುವೆ ಗೌತಮ್​ ಗಂಭೀರ್​ ಮಾಜಿ ನಾಯಕ ವಿರಾಟ್​ ಕೊಹ್ಲಿಯನ್ನು ಹೊಗಳಿ ಅಚ್ಚರಿ ಮೂಡಿಸಿದ್ದಾರೆ. ಅದರೂ ಕೊಹ್ಲಿ ನಾಯಕತ್ವದ ಬಗ್ಗೆ ಅವರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿಯಂಥ ನಾಯಕ ಭಾರತದಲ್ಲಿ ಇನ್ನೊಬ್ಬ ಇಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿ ಕೊಹ್ಲಿಯ ಅಭಿಮಾನಿಗಳನ್ನು ಅಚ್ಚರಿಗೆ ಬೀಳಿಸಿದ್ದಾರೆ.

ಭಾರತ ತಂಡದ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಡ್​ ಸರಣಿಯ ಎರಡನೇ ಪಂದ್ಯದಲ್ಲಿ ಆರು ವಿಕೆಟ್​ ಅಧಿಕಾರಯುತ ವಿಜಯ ಸಾಧಿಸಿದೆ. ಸ್ಟಾರ್​ ಸ್ಪೋರ್ಟ್ಸ್​​ ವಿಶ್ಲೇಷಕರಾಗಿರುವ ಗೌತಮ್​ ಗಂಭೀರ್ ಪಂದ್ಯದ ಕುರಿತು ವಿಶ್ಲೇಷಣೆ ಮಾಡುವ ವೇಳೆ ವಿರಾಟ್​ ಕೊಹ್ಲಿ ನಾಯಕತ್ವವನ್ನು ಹೊಗಳಿ ಮಾತನಾಡಿದ್ದಾರೆ.

ಖಂಡಿತವಾಗಿಯೂ ನಾನು ಹೇಳುವುದಾದರೆ ರೋಹಿತ್​ ಶರ್ಮಾ ಭಾರತ ತಂಡದ ಅತ್ಯುತ್ತಮ ನಾಯಕ. ಆದರೆ, ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ರೋಹಿತ್ ನಾಯಕತ್ವವನ್ನು ಹೋಲಿಕೆ ಮಾಡುವುದಾದರೆ ದೊಡ್ಡ ಮಟ್ಟದ ವ್ಯತ್ಯಾಸವಿದೆ. ಪ್ರಮುಖವಾಗಿ ಟೆಸ್ಟ್​ ಮಾದರಿಯಲ್ಲಿ ವಿರಾಟ್​ ಕೊಹ್ಲಿ ತನ್ನದೇ ಆದ ನಾಯಕತ್ವದ ಮಾದರಿಯನ್ನು ಹೊಂದಿದ್ದರು. ಅದನ್ನವರು ಚೆನ್ನಾಗಿ ಬಳಸಿಕೊಂಡು ಬಂದರು, ಎಂದು ಗಂಭಿರ್​ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಜಡೇಜಾ ಹಾಗೂ ಅಶ್ವಿನ್ ಅವರ ಸ್ಪಿನ್​ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆ. ಅದೇ ಮಾದರಿಯನ್ನು ರೋಹಿತ್​ ಶರ್ಮ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂಬುದಾಗಿ ಗಂಭೀರ್​ ಕೊಹ್ಲಿಯ ನಾಯಕತ್ವದ ಕೊಡುಗೆಯನ್ನು ಮೆಚ್ಚಿದರು.

ಇದನ್ನೂ ಓದಿ : INDvsAUS : ಕೆ ಎಲ್​ ರಾಹುಲ್​ ವಿರುದ್ಧ ಮಗದೊಮ್ಮೆ ಟೀಕೆಗಳ ಪ್ರಹಾರ ನಡೆಸಿದ ವೆಂಕಟೇಶ್​ ಪ್ರಸಾದ್​

ಆಲ್​ರೌಂಡರ್ ರವೀಂದ್ರ ಜಡೇಜಾ ಅವರು ಎರಡನೇ ಟೆಸ್ಟ್​ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ 42 ರನ್​ಗಳಿಗೆ 7 ವಿಕೆಟ್​ ಕಬಳಿಸಿದ್ದರು. ಅವರ ಮಾರಕ ಬೌಲಿಂಗ್​ ದಾಳಿಯಿಂದ ಭಾರತ ತಂಡ ಆರು ವಿಕೆಟ್​ ವಿಜಯ ಸಾಧಿಸಿತ್ತು.

Exit mobile version