Site icon Vistara News

Gautam Gambhir | ವಿದೇಶಿ ಕೋಚ್‌ಗಳಿಂದ ಅಪಾಯ, ಭಾರತೀಯ ಕೋಚ್‌ಗಳ ಮೇಲೆ ನಂಬಿಕೆ ಇಡಿ: ಗಂಭೀರ್ ಸಲಹೆ​

Be thick-skinned, Delhi High Court says to gautam gambhir

ನವದೆಹಲಿ: ಟೀಮ್​ ಇಂಡಿಯಾಕ್ಕೆ ವಿದೇಶಿ ಕೋಚ್‌ಗಳ ಅಗತ್ಯವಿಲ್ಲ. ಭಾರತೀಯ ತರಬೇತುದಾರರನ್ನೇ ನೇಮಿಸಿಕೊಳ್ಳಬೇಕು ಎಂದು ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಗೌತಮ್​ ಗಂಭೀರ್(Gautam Gambhir)​ ಒತ್ತಾಯಿಸಿದ್ದಾರೆ. ಈ ಮೂಲಕ ದೇಶೀಯ ಕೋಚ್‌ಗಳ ಪರ ಗಂಭೀರ್​​ ಬ್ಯಾಟ್ ಬೀಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್​, ಭಾರತ ತಂಡಕ್ಕೆ ವಿದೇಶಿ ಕೋಚ್‌ಗಳ ಅವಶ್ಯಕತೆ ಇಲ್ಲ, ಅವರು ನಮಗೆ ಬೇಡ, ವಿದೇಶಿ ಕೋಚ್‌ಗಳು ನಮ್ಮ ಕ್ರಿಕೆಟ್ ತಂಡವನ್ನು ಹಾಳು ಮಾಡಬಹುದು, ಭಾರತೀಯ ಕೋಚ್‌ಗಳು ಏಕೆ ಬೇಡ? ಅವರು ಏನು ತಪ್ಪು ಮಾಡಿದ್ದಾರೆ? ಲಾಲ್‌ ಚಂದ್ ರಜಪೂತ್ ತರಬೇತುದಾರರಾಗಿದ್ದ ವೇಳೆ ನಾವು ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದೇವೆ” ಎಂದು ಹೇಳುವು ಮೂಲಕ ದೇಶೀಯ ಕೋಚ್‌ಗಳಿಗೆ ಹೆಚ್ಚು ಅವಕಾಶ ಸಿಗುವಂತೆ ಬಿಸಿಸಿಐಗೆ ಒತ್ತಾಯಿಸಿದ್ದಾರೆ.

“ಭಾರತ ತಂಡಕ್ಕೆ ಈ ಮೊದಲು ವಿದೇಶಿ ಕೋಚ್‌ಗಳಾಗಿದ್ದ ಡಂಕನ್ ಫ್ಲೆಚರ್ ಮತ್ತು ಜಾನ್ ರೈಟ್ ಅವರು ಯಾವ ವಿಶೇಷ ಕೆಲಸ ಮಾಡಿದ್ದಾರೆ? ನಾವು ವಿದೇಶಿ ತರಬೇತುದಾರರನ್ನು ಬಿಟ್ಟು, ನಮ್ಮ ದೇಶದ ಆಟಗಾರರು ಮತ್ತು ಕೋಚ್‌ಗಳಲ್ಲಿ ನಂಬಿಕೆ ಇಡಬೇಕು” ಎಂದು ಗಂಭೀರ್ ಸಲಹೆ ನೀಡಿದರು.

ಗ್ಯಾರಿ ಕರ್ಸ್ಟನ್ ಬಗ್ಗೆ ಮೆಚ್ಚುಗೆ

ವಿದೇಶಿ ಕೋಚ್​ಗಳಲ್ಲಿ ನಮಗೆ ನೆನಪಿರುವುದು 2011ರ ವಿಶ್ವ ಕಪ್ ಗೆಲ್ಲಲು ಕಾರಣರಾದ ದಕ್ಷಿಣ ಆಫ್ರಿಕಾದ ಕೋಚ್ ಗ್ಯಾರಿ ಕರ್ಸ್ಟನ್ ಮಾತ್ರ. ಅವರಂತಹ ವಿದೇಶಿ ಕೋಚ್​ ಮತ್ತೆ ಬರಲು ಸಾಧ್ಯವಿಲ್ಲ. ಆದ್ದರಿಂದ ಭವಿಷ್ಯದಲ್ಲಿ ಬಿಸಿಸಿಐ ವಿದೇಶಿ ಕೋಚ್​ಗಳಿಗೆ ಮಣೆಹಾಕುವ ಬದಲು ಭಾರತೀಯರಿಗೆ ಅವಕಾಶ ನೀಡಬೇಕೆಂದು ತಿಳಿಸಿದ್ದಾರೆ.

ಇದನ್ನೂ ಓದಿ | IND VS NZ | ಪಂದ್ಯದಲ್ಲಿ ಅವಕಾಶ ಸಿಗದಿದ್ದರೂ ಮೈದಾನದ ಸಿಬ್ಬಂದಿಗೆ ಸಹಕರಿಸಿ ಮನಗೆದ್ದ ಸಂಜು

Exit mobile version