Site icon Vistara News

INDvsAUS : ಬುಮ್ರಾ ಇಲ್ಲದ್ದಕ್ಕೆ ಟರ್ನಿಂಗ್​ ಪಿಚ್​ ತಯಾರಿ, ಭಾರತದ ಬೌಲಿಂಗ್​ ವಿಭಾಗವನ್ನು ಟೀಕಿಸಿದ ಗವಾಸ್ಕರ್

Gavaskar criticizes India's bowling department for preparing turning pitch for Bumrah's absence

Why 3 demerit points were given to a non-dangerous pitch? Sunil Gavaskar Question

ಮುಂಬಯಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ (INDvsAUS) ನಡುವಿನ ಟೆಸ್ಟ್​ ಸರಣಿಯಲ್ಲಿ ಆಟಗಾರರ ಪ್ರದರ್ಶನಕ್ಕಿಂತ ಹೆಚ್ಚಾಗಿ ಪಿಚ್​ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಮಿತಿ ಮೀರಿ ತಿರುವು ಪಡೆಯುತ್ತಿದ್ದ ಪಿಚ್ ಭಾರತದ ಬೌಲರ್​ಗಳಿಗೆ ಅನುಕೂಲಕರವಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರರು ಆರೋಪ ಮಾಡುತ್ತಿದ್ದರೆ, ಭಾರತದ ಹಿರಿಯ ಕ್ರಿಕೆಟಿಗರು ಬ್ಯಾಟ್ ಮತ್ತು ಬಾಲ್​ ನಡುವೆ ಸಮತೋಲನ ಹೊಂದಿರುವ ಪಿಚ್​ಗಳನ್ನು ಟೆಸ್ಟ್​ಗೆ ರೂಪಿಸಬೇಕು ಎಂದು ಹೇಳುತ್ತಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಮಾಜಿ ನಾಯಕ ಸುನೀಲ್​ ಗವಾಸ್ಕರ್​ ನಾಗ್ಪುರ್, ಡೆಲ್ಲಿ ಹಾಗೂ ಇಂದೋರ್​ ಪಿಚ್​ಗಳ ಬಗ್ಗೆ ಸತತವಾಗಿ ಟೀಕೆ ಮಾಡುತ್ತಿದ್ದಾರೆ. ಇದೀಗ ಅವರು, ವೇಗದ ಬೌಲರ್​ ಜಸ್​ಪ್ರಿತ್​ ಬುಮ್ರಾ ಇಲ್ಲದ್ದಕ್ಕೆ ಟರ್ನಿಂಗ್​ ಪಿಚ್​ ಇಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಇಂಡಿಯಾ ಟುಡೆ ಜತೆ ಮಾತನಾಡಿದ ಅವರು ಇಂದೋರ್​ ಪಿಚ್​ ಬಗ್ಗೆ ಮಾತನಾಡುತ್ತಾ, ಮೂರನೇ ಪಂದ್ಯಕ್ಕೆ ಜಸ್​ಪ್ರಿತ್​ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಅಲಭ್ಯರಾಗುವುದು ಗೊತ್ತಿತ್ತು. ಅನುಭವಿ ಬೌಲರ್​ಗಳು ಇಲ್ಲದೇ ಆಸೀಸ್ ಬಳಗದ 20 ವಿಕೆಟ್​ ಉರುಳಿಸುವ ಯೋಜನೆ ಸುಲಭವಾಗಿರಲಿಲ್ಲ. ಹೀಗಾಗಿ ಮಿತಿ ಮೀರಿ ಟರ್ನಿಂಗ್​ ಆಗುವ ಪಿಚ್ ತಯಾರಿಸಿದ್ದರು. ಆದರೆ, ಆಸ್ಟ್ರೇಲಿಯಾದ ಸ್ಪಿನ್ನರ್​ಗಳು ಹೆಚ್ಚು ಯಶಸ್ಸು ಸಾಧಿಸಿದ್ದರು ಎಂದು ಬುಮ್ರಾ ಹೇಳಿದ್ದಾರೆ.

ಅನುಭವಿ ಮತ್ತು ಮಾರಕ ವೇಗದ ಬೌಲರ್​ಗಳು ಇಲ್ಲದೇ ಭಾರತದ ಪಿಚ್​ಗಳಲ್ಲಿ 20 ವಿಕೆಟ್​ ಪಡೆಯುವುದು ಸುಲಭದ ಕೆಲಸವಲ್ಲ. ಸಿರಾಜ್​ ಬೌಲಿಂಗ್​ನಲ್ಲಿ ಹೆಚ್ಚು ಅನುಭವ ಹೊಂದಿಲ್ಲ. ಹೀಗಾಗಿ 20 ವಿಕೆಟ್​ ಪಡೆಯುವುಕ್ಕೆ ಸಾಧ್ಯವಾಗಬೇಕಾದರೆ ಅದಕ್ಕೆ ಸ್ಪಿನ್​ ಪಿಚ್ ಬೇಕಾಗುತ್ತದೆ ಎಂದು ಗವಾಸ್ಕರ್​ ಹೇಳಿದ್ದಾರೆ.

ಇದನ್ನೂ ಓದಿ : INDvsAUS : ಅಪಾಯಕಾರಿಯಲ್ಲದ ಪಿಚ್​ಗೆ 3 ಡಿಮೆರಿಟ್​ ಅಂಕ ಕೊಟ್ಟಿದ್ದು ಯಾಕೆ? ಸುನೀಲ್​ ಗವಾಸ್ಕರ್​ ಪ್ರಶ್ನೆ

ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ಗೆ ಭಾರತ ತಂಡ ಹೋಗಬೇಕಾದರೆ ಸ್ಪಿನ್​ ಪಿಚ್​ಗಳೇ ಅನಿವಾರ್ಯವಾಗಿತ್ತು. ಒಂದು ವೇಳೆ ಅನುಭವಿ ವೇಗಿಗಳು ತಂಡದಲ್ಲಿ ಇದ್ದರೆ ಅನುಕೂಲಕರ ಪಿಚ್​ ತಯಾರು ಮಾಡಬಹುದಾಗಿತ್ತು. ಆದರೆ ಅವರಿಲ್ಲದಿದ್ದ ಕಾರಣ ಸ್ಪಿನ್ ಪಿಚ್ ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.

Exit mobile version