Site icon Vistara News

Virat kohli | ಮಧ್ಯಮ ಕ್ರಮಾಂಕದಲ್ಲಿ ಫೋರ್‌, ಸಿಕ್ಸರ್‌ ಬಾರಿಸದ್ದಕ್ಕೆ ಬೇಸರ ವ್ಯಕ್ತಪಡಿಸಿದ ವಿರಾಟ್‌ ಕೊಹ್ಲಿ

virta kohli

ಹೈದರಾಬಾದ್‌ : ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಯ ಕೊನೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ೪೮ ಎಸೆತಗಳಲ್ಲಿ ೬೩ ರನ್‌ ಬಾರಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆದರೆ, ತಮ್ಮ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಅವರಿಗೂ ಸ್ವಲ್ಪ ಬೇಸರವಿದೆ. ಪಂದ್ಯದ ಬಳಿಕ ಮಾತನಾಡಿದ ಅವರು ಪಂದ್ಯದ ಮಧ್ಯದಲ್ಲಿ ನನ್ನ ಬ್ಯಾಟಿಂಗ್‌ ವೇಗ ನಿಧಾನಗೊಂಡಿತು. ದೊಡ್ಡ ಹೊಡೆತಗಳು ಬಾರಿಸಲು ಸಾಧ್ಯವಾಗಿದ್ದರೆ ಪಂದ್ಯ ಕೊನೇ ಓವರ್‌ ತನಕ ಹೋಗುವ ಅಗತ್ಯ ಬೀಳುತ್ತಿರಲಿಲ್ಲ ಎಂಬುದಾಗಿ ಅವರು ನುಡಿದಿದ್ದಾರೆ.

“ಮಧ್ಯಮ ಕ್ರಮಾಂಕದಲ್ಲಿ ನನಗೆ ಸಾಕಷ್ಟು ನಿರಾಸೆ ಎದುರಾಯಿತು. ಸಿಕ್ಸರ್‌ ಬಾರಿಸುವುದಕ್ಕಿಂತ ಹೆಚ್ಚಾಗಿ ಡಬಲ್‌ ರನ್‌ಗಳಿಗೆ ಓಡಿದೆ. ಒಂದು ವೇಳೆ ನಾನು ಸಿಕ್ಸರ್ ಬಾರಿಸಲು ಯತ್ನಿಸಿದ್ದರೆ ತಂಡದ ಪರಿಸ್ಥಿತಿಗೆ ಅದು ಪೂರಕವಾಗಿ ಇರುತ್ತಿತ್ತು. ಗೆಲುವು ಸುದೀರ್ಘವಾಗುತ್ತಿರಲಿಲ್ಲ. ಕೊನೇ ಓವರ್‌ನಲ್ಲಿ ೪ರಿಂದ ೫ ರನ್‌ಗಳು ಮಾತ್ರ ಪೇರಿಸಲು ಸಾಧ್ಯವಿತ್ತು. ಬ್ಯಾಟಿಂಗ್ ಸ್ಥಿರತೆ ಕಾಯ್ದುಕೊಳ್ಳುವ ಮೂಲಕ ಕೊನೇ ಒವರ್‌ನಲ್ಲಿ ಒಂದು ಫೋರ್‌ ಮಾತ್ರ ಸಾಕು ಎಂಬ ಪರಿಸ್ಥಿತಿ ಸೃಷ್ಟಿ ಮಾಡಬಹುದಾಗಿತ್ತು ಎಂಬುದಾಗಿ,” ಅವರು ಹೇಳಿದ್ದಾರೆ.

“ನಾನು ೩ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತೇನೆ. ಹೀಗಾಗಿ ನನ್ನ ಅನುಭವವನ್ನು ತಂಡಕ್ಕೆ ನೀಡಬೇಕಾಗುತ್ತದೆ. ಆರಂಭದಲ್ಲಿ ದೊಡ್ಡ ಹೊಡೆತಗಳನ್ನು ಬಾರಿಸಿದೆ. ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್ ಆಡಂ ಜಂಪಾ ಅವರ ವಿಶ್ವಾಸ ಕುಂದುವಂತೆ ಮಾಡಿದೆ. ಆದರೆ, ಒಂದು ಬಾರಿ ಸೂರ್ಯಕುಮಾರ್‌ ದೊಡ್ಡ ಹೊಡೆತಗಳನ್ನು ಬಾರಿಸಲು ಮುಂದಾದಾಗ ನಾನು ಪ್ರೇಕ್ಷನಂತೆ ನೋಡುತ್ತಾ ನಿಂತೆ,” ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ | Virat Kohli | ಆರ್‌ಸಿಬಿ ಅಲ್ರೊ, ಟೀಮ್‌ ಇಂಡಿಯಾ ಎಂದು ಪ್ರೇಕ್ಷಕರಿಗೆ ಸನ್ನೆ ಮಾಡಿದ ವಿರಾಟ್‌ ಕೊಹ್ಲಿ

Exit mobile version