ಭುವನೇಶ್ವರ: ಹಾಕಿ ವಿಶ್ವ ಕಪ್(Hockey World Cup) ಟೂರ್ನಿಯ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿ ಮತ್ತು ನೆದರ್ಲೆಂಡ್ಸ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
ಇಂಗ್ಲೆಂಡ್ ಎದುರಿನ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್ 5-1 ಗೋಲುಗಳಿಂದ ಕೊರಿಯಾವನ್ನು ಮಣಿಸಿ ಸೆಮಿಗೆ ಲಗ್ಗೆಯಿಟ್ಟಿತು.
ರೋಚಕ ಗೆಲುವು ಸಾಧಿಸಿದ ಜರ್ಮನಿ
ಪಂದ್ಯದ ಆರಂಭದಲ್ಲೇ ಎರಡು ಗೋಲ್ ಬಾರಿಸಿ ಮುನ್ನಡೆ ಕಾಯ್ದುಕೊಂಡಿದ್ದ ಇಂಗ್ಲೆಂಡ್ ಪಂದ್ಯದ ಮುಕ್ತಾಯಕ್ಕೆ ಕೇವಲ ಎರಡು ನಿಮಿಷ ಇರುವ ವರೆಗೂ 2-0 ಮುನ್ನಡೆಯೊಂದಿಗೆ ಸೆಮಿಫೈನಲ್ ಕನಸಿನಲ್ಲಿ ವಿಹರಿಸುತ್ತಿತ್ತು. ಆದರೆ 58ನೇ ನಿಮಿಷದಲ್ಲಿ ಜರ್ಮನಿ ಫೀನಿಕ್ಸ್ ನಂತೆ ಎದ್ದು ಬಂದು ಸತತ 2 ಗೋಲು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತಂದಿತು. ಬಳಿಕ ಶೂಟೌಟ್‌ನಲ್ಲಿ 4-3 ಅಂತರದಿಂದ ಆಂಗ್ಲ ಪಡೆಯನ್ನು ಮಗುಚಿ ಹಾಕಿತು. ಜರ್ಮನಿಯ ಮುಂದಿನ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಸೆಣಸಾಟ ನಡೆಸಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಹೋರಾಡಲಿದೆ.
ಇದನ್ನೂ ಓದಿ | Hockey World Cup: ಹಾಕಿ ವಿಶ್ವ ಕಪ್; 9-16ನೇ ಸ್ಥಾನದ ಸ್ಪರ್ಧೆಗೆ ಸಜ್ಜಾದ ಭಾರತ