Site icon Vistara News

Hockey World Cup | ಹಾಕಿ ವಿಶ್ವ ಕಪ್​ ಗೆದ್ದ ಜರ್ಮನಿ, ಬೆಲ್ಜಿಯಮ್​ ತಂಡ ರನ್ನರ್​ಅಪ್

germany hockey team

#image_title

ಭುವನೇಶ್ವರ: ಕಳೆದ ಬಾರಿಯ ಚಾಂಪಿಯನ್​ ಬೆಲ್ಜಿಯಮ್​ ತಂಡವನ್ನು ಮಣಿಸಿದ ಜರ್ಮನಿ ಹಾಕಿ ತಂಡ ಇಲ್ಲಿ ನಡೆದ ಹಾಕಿ ವಿಶ್ವ ಕಪ್​ನ (Hockey World Cup) ಟ್ರೋಫಿ ತನ್ನದಾಗಿಸಿಕೊಂಡಿತು. ಜರ್ಮನಿ ತಂಡದ ಪಾಲಿಗೆ ಇದು ಮೂರನೇ ವಿಶ್ವ ಕಪ್ ಆಗಿದ್ದು ಈ ಹಿಂದೆ 2002 ಹಾಗೂ 2006ರಲ್ಲಿ ಚಾಂಪಿಯನ್​ಪಟ್ಟ ಅಲಂಕರಿಸಿತ್ತು. ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಬೆಲ್ಜಿಯಮ್​ ವಿರುದ್ಧ ಸಡನ್ ಡೆತ್​ 5-4 ಗೋಲ್​ಗಳ ಅಂತರದಿಂದ ಜರ್ಮನಿ ಜಯ ಸಾಧಿಸಿತು.

ಪಂದ್ಯದ ನಿಗದಿತ ಅವಧಿಯಲ್ಲಿ ಇತ್ತಂಡಗಳು ತಲಾ 3 ಗೋಲ್​ಗಳನ್ನು ಬಾರಿಸಿದ್ದವು. ಜರ್ಮನಿ ತಂಡದ ಪರವಾಗಿ ನಿಕ್ಲಾಸ್​ ವೆಲ್ಲೆಸ್​ (29ನೇ ನಿಮಿಷ), ಗೊಂಜಾಲೊ ಪೆಲ್ಲಾಟ್​ (41ನೇ ನಿಮಿಷ) ಹಾಗೂ ಗ್ಯಾಟ್​ ಗ್ರಾಂಬಶ್​ ಗೋಲ್​ ಬಾರಿಸಿದರು. ಮಾಜಿ ಚಾಂಪಿಯನ್​ ಬೆಲ್ಜಿಯಮ್​ ತಂಡದ ಪರವಾಗಿ ಅಬೆಲ್​ ಫ್ಲಾರೆಂಟ್​ (10ನೇ ನಿಮಿಷ), ಟಾಂಗಿ ಕಾಸಿನ್ಸ್​ (11ನೇ ನಿಮಿಷ), ಟಾಮ್​ ಬೂನ್​ (59ನೇ ನಿಮಿಷ) ಗೋಲ್​ ಬಾರಿಸಿದರು.

ಇದನ್ನೂ ಓದಿ : Hockey World Cup: ಹಾಕಿ ವಿಶ್ವ ಕಪ್​; ಜಪಾನ್​ ವಿರುದ್ಧ ಭಾರತಕ್ಕೆ 8-0 ಗೋಲ್​ ಅಂತರದ ಗೆಲುವು

ಅದಕ್ಕಿಂತ ಮೊದಲು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 3-1 ಗೋಲ್​ಗಳಿಂದ ಮಣಿಸಿದ ನೆದರ್ಲೆಂಡ್ಸ್​ ತಂಡ ಕಂಚಿನ ಪದಕ ಗೆದ್ದುಕೊಂಡಿತು. ನೆದರ್ಲೆಂಡ್ಸ್​ ತಂಡದ ಬ್ರಿಂಕ್​ಮನ್​ (35 ಹಾಗೂ 45ನೇ ನಿಮಿಷ), ಜಿಪ್​ ಜಿನ್ಸೆನ್​ (33ನೇ ನಿಮಿಷ) ಗೋಲ್​ ಬಾರಿಸಿದರು. ಆಸ್ಟ್ರೇಲಿಯಾ ತಂಡದ ಪರ ಜೆರೆಮಿ ಹೇವರ್ಡ್​​ 13ನೇ ನಿಮಿಷದಲ್ಲಿ ಗೋಲ್ ಹೊಡೆದರು.

ಇದೇ ವೇಳೆ ಭಾರತ ತಂಡವು 9ನೇ ಸ್ಥಾನಿಯಾಗಿ ಹಾಲಿ ಆವೃತ್ತಿಯ ವಿಶ್ವ ಕಪ್​ ಅಭಿಯಾನವನ್ನು ಕೊನೆಗೊಳಿಸಿತು. ತವರಿನಲ್ಲಿ ನಡೆದ ಟೂರ್ನಿಯ ಲಾಭವನ್ನು ಪಡೆಯಲು ಭಾರತ ತಂಡ ವಿಫಲವಾಯಿತು.

Exit mobile version