ಮುಂಬಯಿ: ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್(shubman gill) ಆಸೀಸ್(IND vd AUS) ವಿರುದ್ಧ ಇಂದು ನಡೆಯುವ ಮೊದಲ ವಿಶ್ವಕಪ್ನಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ ಸಚಿನ್ ತೆಂಡೂಲ್ಕರ್(sachin tendulkar) ಪುತ್ರಿ ಸಾರಾ ತೆಂಡೂಲ್ಕರ್(sara tendulkar) ಮಾಡಿರುವ ಟ್ವೀಟ್ ಒಂದು ವೈರಲ್ ಆಗಿದೆ.
ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್(Gill And Sara) ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship) ನಡೆಸುತ್ತಿದ್ದಾರೆ. ಇವರಿಬ್ಬರು ಪ್ರೀತಿ ಕೂಡ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿದೆ. ಇದೇ ಕಾರಣಕ್ಕೆ ಇವರಿಬ್ಬರ ಮೇಲೆ ನೆಟ್ಟಿಗರು ಕಣ್ಣಿಟ್ಟಿದ್ದಾರೆ. ಈ ಜೋಡಿಯ ವಿಚಾರಾದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳನ್ನು ಮಾಡುತ್ತಿರುತ್ತಾರೆ. ಇದೀಗ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಗಿಲ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಸಾರಾ ತೆಂಡೂಲ್ಕರ್ ಹಾರೈಸಿರುವ ಟೀಟ್ ಒಂದು ವೈರಲ್ ಆಗಿದೆ.
ಇದನ್ನೂ ಓದಿ IND vs AUS: ಭಾರತ-ಆಸೀಸ್ ಪಂದ್ಯಕ್ಕೆ ಕ್ಷಣಗಣನೆ; ಮಳೆ ಕಾಟ ಇದೆಯೇ?; ಇಲ್ಲಿದೆ ಹವಾಮಾನ ವರದಿ
ಸಾರಾ ತೆಂಡೂಲ್ಕರ್ ಹೆಸರಿನ ಟ್ವಿಟರ್ ಖಾತೆಯಿಂದ ಶುಭಮನ್ ಗಿಲ್ ಅವರ ಫೋಟೊ ಹಾಕಿ, ಇಲ್ಲಿ ಗೆಟ್ ವೆಲ್ ಸೂನ್(ಶೀಘ್ರ ಗುಣಮುಖರಾಗಿ ಬನ್ನಿ) ಎಂದು ಬರೆಯಲಾಗಿದೆ. ಅಸಲಿಗೆ ಇದು ಸಾರಾ ತೆಂಡೂಲ್ಕರ್ ಅವರ ಅಧಿಕೃತ ಟ್ವೀಟರ್ ಖಾತೆಯಿಂದ ಮಾಡಿರುವ ಟ್ವೀಟ್ ಅಲ್ಲ. ಬದಲಾಗಿ ಅವರ ಹೆಸೆರಿನ ನಕಲಿ ಖಾತೆಯಿಂದ ಈ ಟ್ವೀಟ್ ಮಾಡಿ ನೆಟ್ಟಿಗರು ಚಮಕ್ ನೀಡಿದ್ದಾರೆ. ನೆಟ್ಟಿಗರು ಎಷ್ಟೇ ಕಾಲೆಳೆದರೂ ಗಿಲ್ ಮತ್ತು ಸಾರಾ ತಮ್ಮ ಪ್ರೀತಿ ಮತ್ತು ಡೇಟಿಂಗ್ ವಿಚಾರವಾಗಿ ಇದುವರೆಗೂ ಎಲ್ಲಿಯೂ ತುಟಿಬಿಚ್ಚಿಲ್ಲ. ಎಷ್ಟೇ ರೂಮರ್ಸ್ ಹಬ್ಬಿದರೂ ತಮ್ಮ ಪಾಡಿಗೆ ತಾವು ಸುಮ್ಮನಿದ್ದಾರೆ.
Get well soon #ShubmanGill 💙🇮🇳 pic.twitter.com/sF1Nlr9Qbj
— Sara Tendulkar (@imsaratendulkar) October 6, 2023
“ವೆಲ್ ಪ್ಲೇ ಶುಭಮನ್ ಗಿಲ್”
ಆಸ್ಟ್ರೇಲಿಯಾ ವಿರುದ್ಧದ ತವರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಪಂದ್ಯದಲ್ಲಿ 74 ರನ್ ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಪ್ರದರ್ಶನಕ್ಕೆ ಸಾರಾ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ವೆಲ್ ಪ್ಲೇ ಶುಭಮನ್ ಗಿಲ್’ ಎಂದು ಬರೆದು ಚಪ್ಪಾಳೆ ತಟ್ಟುವ ಎಮೊಜಿಯನ್ನು ಹಾಕಿದ್ದರು.
ಗಿಲ್ ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ದ್ವಿಶತಕ ಗಳಿಸುವ ಜತಗೆ ಈಗಾಗಕಲೇ ಅತಿ ಕಡಿಮೆ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಮತ್ತು ಶತಕ ದಾಖಲಿಸಿ ಮಿಂಚುತಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಸ್ವಲ್ಪ ಕುಸಿತ ಕಂಡಿದ್ದ ಅವರು ಮುಂದಿನ ಸರಣಿಯಲ್ಲಿ ಮತ್ತೆ ಪ್ರಚಂಡ ಬ್ಯಾಟಿಂಗ್ ಫಾರ್ಮ್ಗೆ ಮರಳಿದ್ದರು. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ ಲೀಗ್ನಲ್ಲಿ 890 ರನ್ಗಳೊಂದಿಗೆ ಅತಿ ಹೆಚ್ಚು ಸ್ಕೋರರ್ ಆಗಿದ್ದರು. ಕಳೆದ ತಿಂಗಳು ಮುಕ್ತಾಯ ಕಂಡ ಏಷ್ಯಾ ಕಪ್ನಲ್ಲಿ 302 ರನ್ ಬಾರಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಕಳೆದ ಕೆಲವು ಇನಿಂಗ್ಸ್ಗಳಲ್ಲಿ ಅವರು 104, 74, 27, 121, 19, 58 ಮತ್ತು 67 ರನ್ ಗಳಿಸಿದ್ದಾರೆ.