Site icon Vistara News

Glenn Maxwell: ಗಂಡು ಮಗುವಿನ ತಂದೆಯಾದ ಗ್ಲೆನ್‌ ಮ್ಯಾಕ್ಸ್​ವೆಲ್‌

Glenn Maxwell And Wife Vini Raman

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್‌ ಮ್ಯಾಕ್ಸ್​ವೆಲ್‌(Glenn Maxwell) ತಂದೆಯಾದ ಖುಷಿಯಲ್ಲಿದ್ದಾರೆ. ಅವರ ಭಾರತೀಯ ಮೂಲದ ಪತ್ನಿ ವಿನಿ ರಾಮನ್‌(Vini Raman) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಮಗುವಿಗೆ ಲೋಗನ್‌ ಮಾವೆರಿಕ್‌(Logan Maverick) ಎಂದು ಹೆಸರಿಡಲಾಗಿದೆ ಎಂಬುದಾಗಿಯೂ ಮ್ಯಾಕ್ಸ್​ವೆಲ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ವಿನಿ ರಾಮನ್‌ ಮಗುವಿನ ಚಿತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, 11.09.2023. ಲೋಗನ್‌ ಮಾವೆರಿಕ್‌ ಮ್ಯಾಕ್ಸ್​ವೆಲ್‌ ಎಂದು ಬರೆದುಕೊಂಡಿದ್ದಾರೆ. 2022ರ ಮಾರ್ಚ್‌ 18ರಂದು ಮ್ಯಾಕ್ಸ್‌ವೆಲ್‌ ಮತ್ತು ವಿನಿ ರಾಮನ್‌ ತಮಿಳು ಸಂಪ್ರದಾಯದಂತೆ ಮದುವೆಯಾಗಿದ್ದರು. ಅಲ್ಲದೆ ಭಾರತೀಯ ಸಂಪ್ರದಾಯದಂತೆ ಸೀಮಂತ ಕೂಡ ಮಾಡಿ ಎಲ್ಲರ ಗಮನಸೆಳೆದಿದ್ದರು.

ಶುಭಾಶಯ ಕೋರಿದ ಆರ್​ಸಿಬಿ

ಐಪಿಎಲ್​ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ, ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮ, ಎಬಿಡಿ ವಿಲಿಯರ್ಸ್​ ಸೇರಿ ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ತಂದೆಯಾದ ಮ್ಯಾಕ್ಸ್​ವೆಲ್​ಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಗಾಯಾಳಾಗಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮುಂದಿನ ವಾರ ನಡೆಯುವ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡು ಈ ಸರಣಿಯಿಂದ ಹೊರಗುಳಿದಿದ್ದಾರೆ.

ಹಿಂದೊಮ್ಮೆ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಮ್ಯಾಕ್ಸ್​ವೆಲ್​ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು. ಇದರಿಂದ ಬಿಗ್ ಬ್ಯಾಶ್ ಕೂಟದಿಂದ ಮ್ಯಾಕ್ಸ್​ವೆಲ್​ ಹೊರಬಿದ್ದಿದ್ದರು. ಇದೀಗ ಮತ್ತೆ ಪಾದದ ನೋವಿನ ಗಾಯಕ್ಕೆ ಈಡಾಗಿದ್ದು ವಿಶ್ವಕಪ್​ ಟೂರ್ನಿಗೆ ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಮ್ಯಾಕ್ಸ್​ವೆಲ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರೆ ವಿಶ್ರಾಂತಿ ಅಗತ್ಯ. ವಿಶ್ವಕಪ್​ಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಆದ್ದರಿಂದ ಫಿಟ್​ನೆಸ್​ ಪಾಸ್​ ಆಗಿ ಕಮ್​ಬ್ಯಾಕ್​ ಮಾಡುವುದು ಕಷ್ಟ. ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ ಭಾರತ ವಿರುದ್ಧ ಮೂರು ಏಕದಿನ ಪಂದ್ಯವನ್ನು ಆಡಲಿದೆ. ಈ ಸರಣಿಗೆ ಮ್ಯಾಕ್ಸ್​ವೆಲ್​ ಆಯ್ಕೆ ಮಾಡುವ ಕುರಿತು ಯೋಚನೆ ಮಾಡಬೇಕಿದೆ ಎಂದು ಆಯ್ಕೆ ಸಮಿತಿಯ ಅಧಿಕಾರಿ ಟೋನಿ ಡೊಡಮೈಡ್ ತಿಳಿಸಿದ್ದಾರೆ.

ಇದನ್ನೂ ಓದಿ IPL 2023: ಗಾಯದ ಬಗ್ಗೆ ಮಾಹಿತಿ ನೀಡಿದ ಮ್ಯಾಕ್ಸ್​ವೆಲ್​; ಚಿಂತೆಯಲ್ಲಿ ಆರ್​ಸಿಬಿ ಅಭಿಮಾನಿಗಳು

ಅಕ್ಟೋಬರ್​ 5ರಿಂದ ವಿಶ್ವಕಪ್​

ಆಸ್ಟ್ರೇಲಿಯಾ ತಂಡ 18 ಸದಸ್ಯರ ಸಂಭಾವ್ಯ ತಂಡವನ್ನು(preliminary World Cup squad) ಪ್ರಕಟಿಸಿದೆ. ಅನುಭವಿ ವೇಗಿ ಪ್ಯಾಟ್​ ಕಮಿನ್ಸ್(Pat Cummins)​ ತಂಡವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ(icc world cup 2023 schedule) ವಿಶ್ವಕಪ್​ ಟೂರ್ನಿ ನಡೆಯಲಿದೆ. 

ಸ್ಯದ ಈಗಿನ ಪಟ್ಟಿಯ ಪ್ರಕಾರ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಆಸೀಸ್​ ಇನಿಂಗ್ಸ್​ ಆರಂಭಿಸಲಿದ್ದಾರೆ. ಒಂದೊಮ್ಮೆ ಭಾರತ ಮತ್ತು ದಕ್ಷಿಣ ಆಫ್ರಿಕಾ​ ವಿರುದ್ಧದ ಏಕದಿನ ಸರಣಿಯಲ್ಲಿ ವಾರ್ನರ್​ ನಿರೀಕ್ಷಿತ ಪ್ರದರ್ಶನ ತೋರದೇ ಇದಲ್ಲಿ ಅವರ ಸ್ಥಾನದಲ್ಲಿ ಮಿಚೆಲ್ ಮಾರ್ಷ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಅಧಿಕವಾಗಿದೆ.

Exit mobile version