ಸಿಡ್ನಿ: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ(Australia vs West Indies 2nd T20I) ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell), ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಭಾನುವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ 120 ರನ್ ಗಳಿಸಿದ ಮ್ಯಾಕ್ಸ್‌ವೆಲ್ ಟಿ20ಯಲ್ಲಿ 5ನೇ ಶತಕ ಪೂರ್ತಿಗೊಳಿಸಿ ರೋಹಿತ್ ಶರ್ಮ ದಾಖಲೆಯನ್ನು ಸರಿಗಟ್ಟಿದರು. ರೋಹಿತ್ ಕೂಡ 5 ಶತಕ ಬಾರಿಸಿದ್ದಾರೆ. ಮ್ಯಾಕ್ಸ್‌ವೆಲ್ ಅವರ ಈ ಬ್ಯಾಟಿಂಗ್ ಸಾಹಸದಿಂದ ಆಸ್ಟ್ರೇಲಿಯಾ 34 ರನ್ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.
Most Hundreds in T20I:
— Johns. (@CricCrazyJohns) February 11, 2024
Glenn Maxwell – 5* (94 innings)
Rohit Sharma – 5 (143 innings) pic.twitter.com/38HMakhBJL
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿಂಡೀಸ್ ತಂಡ 14 ರನ್ಗಳಿಸುವಷ್ಟರಲ್ಲಿ ಆಸೀಸ್ ತಂಡದ ಮೊದಲ ವಿಕೆಟ್ ಕಿತ್ತರೂ ಕೂಡ ಆ ಬಳಿಕ ಲಯ ಕಳೆದುಕೊಂಡು ಸರಿಯಾಗಿ ದಂಡಿಸಿಕೊಂಡರು. ಗ್ಲೆನ್ ಮ್ಯಾಕ್ಸ್ ಒಬ್ಬರೆ 120 ರನ್ ದೋಚಿದರು. ಅವರ ಈ ಬಿರುಸಿನ ಬ್ಯಾಟಿಂಗ್ ವೇಳೆ ಬರೋಬ್ಬರಿ 12 ಬೌಂಡರಿ ಮತ್ತು 8 ಸೊಗಸಾದ ಸಿಕ್ಸರ್ಗಳು ದಾಖಲಾಯಿತು. ಇವರ ಈ ಬ್ಯಾಟಿಂಗ್ ಸಾಹಸರದಿಂದ ಆಸೀಸ್ ಕೇವಲ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತು.
ಇದನ್ನೂ ಓದಿ U19 World Cup Final: ಭಾರತ ಗೆಲುವಿಗೆ 254 ರನ್ ಗುರಿ ನೀಡಿದ ಆಸ್ಟ್ರೇಲಿಯಾ
ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ವೆಸ್ಟ್ ಇಂಡೀಸ್ ನಿಗದಿತ 20 ಓವರ್ ಬ್ಯಾಟಿಂಗ್ ನಡೆಸಿ 9 ವಿಕೆಟ್ಗೆ 207ರನ್ ಬಾರಿಸಲಷ್ಟೇ ಶಕ್ತವಾಯಿತು. ಮೊದಲ ಮೂವರು ಬ್ಯಾಟರ್ಗಳಾದ ಬ್ರಾಂಡನ್ ಕಿಂಗ್(5), ಜಾನ್ಸನ್ ಚಾರ್ಲ್ಸ್(24) ಮತ್ತು ನಿಕೋಲಸ್ ಪೂರನ್(18) ಅಗ್ಗಕ್ಕೆ ಔಟಾದದ್ದು ತಂಡದ ಸೋಲಿಗೆ ನೇರ ಕಾರಣವಾಯಿತು. ಇದರಲ್ಲಿ ಕನಿಷ್ಠ ಒಬ್ಬರಾದರೂ 50 ರನ್ ಬಾರಿಸುತ್ತಿದ್ದರೆ ಪಂದ್ಯವನ್ನು ಆರಾಮವಾಗಿ ಗೆಲ್ಲಬಹುದಿತ್ತು.
Glenn Maxwell's record-equalling ton drove Australia to a big win in Adelaide 👏
— ICC (@ICC) February 11, 2024
More 👉 https://t.co/mylKYJauJl#AUSvWI pic.twitter.com/XMWzdxQCUM
ನಾಯಕ ರೋವ್ಮನ್ ಪೊವೆಲ್ ಏಕಾಂಗಿಯಾಗಿ ಹೋರಾಟ ನಡೆಸಿ 63 ರನ್ ಬಾರಿಸಿದರು. ಆ್ಯಂಡ್ರೆ ರಸೆಲ್ 37 ರನ್ ಬಾರಿಸಿ ಮಾರ್ಕಸ್ ಸ್ಟೋಯಿನಿಸ್ಗೆ ವಿಕೆಟ್ ಒಪ್ಪಿಸಿದರು. ಜಾಸನ್ ಹೋಲ್ಡರ್ ಅಜೇಯ 28 ರನ್ ಬಾರಿಸಿದರೂ ಅವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇತ್ತಂಡಗಳ ನಡುವಣ ಮೂರನೇ ಹಾಗು ಅಂತಿಮ ಟಿ20 ಪಂದ್ಯ ಫೆಬ್ರವರಿ 13ರಂದು ನಡೆಯಲಿದೆ. ಈ ಪಂದ್ಯದಲ್ಲಾದರೂ ಗೆದ್ದು ವಿಂಡೀಸ್ ವೈಟ್ ವಾಶ್ ಮುಖಭಂಗದಿಂದ ಪಾರಾಗಲಿದೆಯಾ ಎಂದು ಕಾದು ನೋಡಬೇಕಿದೆ.