ಬೆಂಗಳೂರು: ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ. ಇದು ಭಾರತದ ಸಿನಿಮಾವೊಂದಕ್ಕೆ ಸಿಕ್ಕಿದ ಮೊಟ್ಟ ಮೊದಲ ಗೌರವ. ಅಕಾಡೆಮಿ ಅವಾರ್ಡ್ ಸಿಕ್ಕಿದ ದಿನದಿಂದ ಈ ಹಾಡು ಗ್ಲೋಬಲ್ ಕ್ರೇಜ್ ಆಗಿ ಮಾರ್ಪಟ್ಟಿದೆ. ಜನ ಸೇರಿದ ಕಡೆಯೆಲ್ಲ ಇದೇ ಹಾಡು ಕೇಳಿಬರುತ್ತಿದೆ. ಅಂತೆಯೇ ಬೇಸ್ಬಾಲ್ ಪಂದ್ಯವೊಂದರ ವೇಳೆ ಪ್ರೇಕ್ಷಕರಿಂದ ತುಂಬಿದ್ದ ಸ್ಟೇಡಿಯಮ್ನಲ್ಲಿ ಮಸ್ಕಾಟ್ಗಳು ನಾಟು ನಾಟು ಹಾಡಿಗೆ ಡಾನ್ಸ್ ಮಾಡಿ ಸುದ್ದಿಯಾಗಿದೆ. ಟ್ವಿಟರ್ ಬಳಕೆದಾರರೊಬ್ಬರು ನಾಟು ನಾಟು ಹಾಡಿಗೆ ಡಾನ್ಸ್ ಮಾಡುವ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.
ರಿಕಿ ಸುಲ್ಗಿ ಎಂಬುವರು ಈ ವಿಡಿಯೊವನ್ನು ಶೇರ್ ಮಾಡಿದ್ದಾರೆ. ಪಂದ್ಯದ ನಡುವಿನ ಬ್ರೇಕ್ನಲ್ಲಿ ಹಾಡನ್ನು ಪ್ಲೇ ಮಾಡಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಕೊನೆಯಲ್ಲಿ ಅವರು ಇದು ಗ್ಲೋಬಲ್ ಕ್ರೇಜ್ ಎಂಬುದಾಗಿ ಹೇಳಿದ್ದಾರೆ.
ವಿಡಿಯೊವನ್ನು ಶೇರ್ಮಾಡಿದ ಬಳಿಕದಿಂದ ಲಕ್ಷಾಂತರ ಮಂದಿ ನೋಡಿದ್ದಾರೆ. ಅಲ್ಲದೆ, ಹಾಡಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಕೊಂಡಿದ್ದಾರೆ.
ನಾಟು ನಾನು ಹಾಡನ್ನು ನಾನು ತುಂಬಿದ ಬೇಸ್ಬಾಸ್ ಸ್ಟೇಡಿಯಮ್ನಲ್ಲಿ ನೋಡುತ್ತಿರುವುದು ಅತ್ಯಂತ ಖುಷಿಯ ಸಂಗತಿ. ಹಾಡು ಕೇಳವಾಗ ರೋಮಾಂಚನವಾಗುತ್ತಿದೆ. ಅದೇ ರೀತಿ ನಾನು ಭಾರತೀಯ ಎಂಬ ಹೆಮ್ಮೆಯೂ ಮೂಡಿತು. ಜಾಗತಿಕ ಮಟ್ಟದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಗೀತವನ್ನು ನೋಡುವುದೇ ಅಭಿಮಾನದ ಸಂಗತಿ ಎಂದು ಅವರು ಹೇಳಿಕೊಂಡಿದ್ದಾರೆ.
ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
ನಾಟ ನಾಟು ಹಾಡಿಗೆ ಜನರು ಹೆಜ್ಜೆ ಹಾಕೊದೇನೋ ಸರಿ. ಈ ಹಾಡು ಕೇಳಿದ ತಕ್ಷಣ ಕಾರುಗಳು ಡಾನ್ಸ್ ಮಾಡಲು ಶುರು ಮಾಡಿದರೆ ಹೇಗಿರಬಹುದು. ಕಣ್ಣಿಗೆ ಹಬ್ಬ ಗ್ಯಾರಂಟಿ. ಈ ರೀತಿಯಾಗಿ ನಾಟು ನಾಟು ಹಾಡಿಗೆ ಡಾನ್ಸ್ ಮಾಡಿದ್ದು ಸ್ವಯಂ ಚಾಲನೆ (ಸೆಲ್ಫ್ ಡ್ರೈವ್) ಮಾಡುವ ಸಾಮರ್ಥ್ಯ ಹೊಂದಿರುವ ಟೆಸ್ಲಾ ಕಾರು.
ಹೌದು, ಅಮೆರಿಕದ ನ್ಯೂಜೆರ್ಸಿಯಲ್ಲಿ ಹಲವು ಕಾರುಗಳು ಒಟ್ಟಿಗೆ ನಾಡು ನಾಟು ಹಾಡಿಗೆ ಗೌರವ ಸಲ್ಲಿಸಿದೆ. ಆದರೆ, ಕಾರುಗಳು ಎದ್ದು ನಿಂತು ಡಾನ್ಸ್ ಮಾಡಿಲ್ಲ. ಬದಲಾಗಿ ಲೈಟುಗಳನ್ನು ಮಿಟುಕಿಸುವ ಮೂಲಕ ಹಾಡನ್ನು ಸಿಂಕ್ ಮಾಡಿದೆ. ಹಲವಾರು ಕಾರುಗಳು ಏಕಕಾಲಕ್ಕೆ ಹಾಡಿನ ಅಬ್ಬರಕ್ಕೆ ತಕ್ಕಂತೆ ಲೈಟ್ ಬೆಳಗಿಸುವುದು ಆಕರ್ಷಕವಾಗಿ ಕಂಡಿದೆ.
ಆರ್ಆರ್ಆರ್ ಮೂವಿ ತಂಡ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದು, ನಿಮ್ಮೆಲ್ಲರ ಪ್ರೀತಿಗೆ ಆಭಾರಿ ಎಂದು ಹೇಳಿದೆ. ಅಂದ ಹಾಗೆ ವಿಡಿಯೊಕ್ಕೆ ಸಿಕ್ಕಾಪಟ್ಟೆ ಲೈಕ್ಸ್ಗಳು ಬಂದಿವೆ. ಕೆಲವರು ಇದಕ್ಕೆ ರೋಮಾಂಚನ ಎಂದು ಕಾಮೆಂಟ್ ಬರೆದಿದ್ದಾರೆ.
ಟೆಸ್ಲಾ ಟಾಯ್ಬಾಕ್ಸ್ ಫೀಚರ್ (Tesla Toybox)
ಟೆಸ್ಲಾ ಕಾರಿನಲ್ಲಿ ಟಾಯ್ ಬಾಕ್ಸ್ (Tesla Toybox) ಎಂಬ ಫೀಚರ್ ಇದೆ. ಇದರ ಮೂಲಕ ಲೈಟ್ ಶೋ ಮೂಲಕ ಚಾಲಕರಿಗೆ ವಿಭಿನ್ನ ಅನುಭವ ಪಡೆಯುವ ಅವಕಾಶ ನೀಡಲಾಗಿದೆ. ಈ ಫೀಚರ್ ಆಕ್ಟಿವೇಟ್ ಮಾಡಿದರೆ ಕಾರಿನ ಹೆಡ್ಲೈಟ್, ಟೈಲ್ ಲೈಟ್, ಇಂಡಿಕೇಟರ್ಗಳು ಹಾಗೂ ಇಂಟೀರಿಯರ್ ಲೈಟ್ಗಳು ಮ್ಯೂಸಿಕ್ಗೆ ತಕ್ಕ ಹಾಗೆ ಫ್ಲ್ಯಾಶ್ ಆಗುತ್ತವೆ. ಜತೆಗೆ ಬಣ್ಣವನ್ನೂ ಬದಲಿಸುತ್ತವೆ.
ಅದೇ ರೀತಿ ಟೆಸ್ಲಾದ ಸೌಂಡ್ ಸಿಸ್ಟಮ್ ಪ್ರೋಗ್ರಾಮ್ನ ಮೂಲಕವೂ ಸಂಪೂರ್ಣ ಆಡಿಯೊ ವಿಷುವಲ್ ಅನುಭವ ಪಡೆಯಲು ಸಾಧ್ಯವಿದೆ. ಮಾಡೆಲ್ ಎಕ್ಸ್, ಮಾಡೆಲ್ ಎಸ್ ಹಾಗೂ ಮಾಡೆಲ್ 3ಯಲ್ಲಿ ಈ ಫಿಚರ್ ಇದೆ.