Site icon Vistara News

PM Modi: ಕ್ರೀಡೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಯುವಕರಿಗೆ ಸರ್ಕಾರ ಸದಾ ಪ್ರೋತ್ಸಾಹ; ಪ್ರಧಾನಿ ಮೋದಿ

Narendra Modi

#image_title

ಜೈಪುರ: ಕ್ರೀಡೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಯುವಕರಿಗೆ ಸರ್ಕಾರ ಸದಾ ಪ್ರೋತ್ಸಾಹ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಹೇಳಿದ್ದಾರೆ. ಜೈಪುರ ಮಾಹಾಖೇಲ್(Mahakhel jaipur) ಕ್ರೀಡಾಕೂಟದ​ ಉದ್ಘಾಟನೆಯ ಸಂದರ್ಭ ಮೋದಿ ಈ ವಿಚಾರವನ್ನು ತಿಳಿಸಿದ್ದಾರೆ.

ಭಾನುವಾರ ಜೈಪುರದಲ್ಲಿ ಆರಂಭಗೊಂಡ ‘ಜೈಪುರ ಮಾಹಾಖೇಲ್’ ಕ್ರೀಡಾ ಕೂಟದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಈ ಕ್ರೀಡಾ ಕೂಟದಿಂದ ಹಲವು ಗ್ರಾಮಿಣಾ ಕ್ರೀಡಾಪಟುಗಳು ಬೆಳಕಿಗೆ ಬರಲಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಲು ಸಜ್ಜಾಗಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ IND VS AUS: ನಾಗ್ಪುರದಲ್ಲಿ ಅಭ್ಯಾಸ ಆರಂಭಿಸಿದ ಟೀಮ್​ ಇಂಡಿಯಾ ಆಟಗಾರರು

ದೇಶವು 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಈ ರೀತಿಯ ಕ್ರೀಡಾಕೂಟ ಏರ್ಪಡಿಸಿದ್ದು ನಿಜಕ್ಕೂ ಸಂತಸದ ವಿಚಾರ. ರಾಜಸ್ಥಾನವು ಹೊಸ ಬಗ್ಗೆಯ ಪ್ರಯತ್ನಗಳೊಂದಿಗೆ ಯುವಕರಿಗೆ ಪ್ರೋತ್ಸಾಹ ನೀಡುವ ವಿಚಾರದಲ್ಲಿ ಸದಾ ಮುಂದಿರುತ್ತದೆ. ಈ ಕ್ರೀಡಾಕೂಟದಲ್ಲಿ ಸುಮಾರು 6 ಸಾವಿರಕ್ಕಿಂತಲೂ ಅಧಿಕ ಕ್ರೀಡಾಪಟುಗಳು ಪಾಳ್ಗೊಳ್ಳುತ್ತಿದ್ದಾರೆ. ಇದು ಸಣ್ಣ ವಿಚಾರವಲ್ಲ. ಕಳೆದ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ​ ಬಳಿಕ ದೇಶದಲ್ಲಿ ಹೆಚ್ಚಿನ ಯುವಕರು ಕ್ರೀಡಾ ಕ್ಷೇತ್ರದತ್ತ ಮುಖಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೋದಿ ಹೇಳಿದರು.

Exit mobile version