ಮುಂಬಯಿ: ಡಬ್ಲ್ಯುಪಿಎಲ್ನ (WPL 2023) ಮೂರನೇ ಪಂದ್ಯ ಅತ್ಯಂತ ರೋಚಕವಾಗಿ ನಡೆದಿದೆ. ಗುಜರಾತ್ ಜಯಂಟ್ಸ್ ವಿರುದ್ಧದ ಯುಪಿ ವಾರಿಯರ್ಸ್ ತಂಡ 3 ವಿಕೆಟ್ಗಳ ವೀರೋಚಿತ ವಿಜಯ ಸಾಧಿಸಿದೆ. ಈ ಗೆಲುವಿಗೆ ಕಾರಣರಾದವರು ಆಸ್ಟ್ರೇಲಿಯಾದ ಆಲ್ರೌಂಡರ್ ಗ್ರೇಸ್ ಹ್ಯಾರಿಸ್. ಅವರು ಕೊನೇ ಹಂತದಲ್ಲಿ 26 ಎಸೆತಗಳಲ್ಲಿ 59 ರನ್ ಬಾರಿಸಿದ್ದರು. ಅಲ್ಲದೆ, ಸೋಫಿ ಎಕ್ಲೆಸ್ಟೋನ್ ಜತೆ ಎಂಟನೇ ವಿಕೆಟ್ಗೆ 70 ರನ್ಗಳ ಜತೆಯಾಟ ನೀಡಿದ್ದರು. ಅವರಿಬ್ಬರ ಸಾಹಸದಿಂದ ಯುಪಿ ವಾರಿಯರ್ಸ್ ತಂಡ ಅಮೋಘ ವಿಜಯ ಸಾಧಿಸಿತ್ತು. ತಮ್ಮ ದೊಡ್ಡ ದೊಡ್ಡ ಹೊಡೆತಗಳ ಕುರಿತು ಮಾತನಾಡಿದ ಗ್ರೇಸ್ ಹ್ಯಾರಿಸ್, ಅದಕ್ಕೆ ಬಟರ್ ಚಿಕನ್ ಕಾರಣ ಎಂದು ಹೇಳಿದ್ದಾರೆ.
170 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್ ಬಳಗ 86 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ವೇಳೆ 12 ಓವರ್ಗಳು ಮುಕ್ತಾಯಗೊಂಡಿದ್ದವು. ಈ ವೇಳೆ ಆಡಲು ಇಳಿದ ಗ್ರೇಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೊನೇ ಐದು ಓವರ್ಗಳಲ್ಲಿ ಯುಪಿ ತಂಡಕ್ಕೆ 70 ರನ್ಗಳು ಬೇಕಾಗಿದ್ದವು. ಈ ಸ್ಕೋರ್ ಅನ್ನು ನಿರಾಯಾಸವಾಗಿ ಪೂರೈಸಿದ್ದರು ಗ್ರೇಸ್ ಮತ್ತು ಸೋಫಿ.
ಕೊನೇ ಹಂತದಲ್ಲಿ ಜೋರಾಗಿ ಬ್ಯಾಟ್ ಬೀಸಿದೆ. ಸೋಫಿ ಕೂಡ ಉತ್ತಮ ನೆರವು ಕೊಟ್ಟರು. ಈ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆಯಿದೆ. ಭಾರತದಲ್ಲಿ ಇದಕ್ಕಾಗಿ ಒಂದೊಳ್ಳೆ ಬರ್ಗರ್ ಎಲ್ಲಿ ಸಿಗಬಹುದು ಎಂದು ಹುಡುಕುತ್ತಿದ್ದೇನೆ. ಜತೆಗೆ ಬಟರ್ ಚಿಕನ್ ಕೂಡ ತಿನ್ನಬೇಕಿದೆ ಎಂದು ಗ್ರೇಸ್ ಹೇಳಿದ್ದಾರೆ.
ಇದನ್ನೂ ಓದಿ : WPL 2023 : ಡಬ್ಲ್ಯುಪಿಎಲ್ನಂತೆ ಐಪಿಎಲ್ನಲ್ಲೂ ವೈಡ್ ಬಾಲ್, ನೋ ಬಾಲ್ ಪರೀಕ್ಷೆಗೆ ಡಿಆರ್ಎಸ್ ಬಳಕೆ?
ಆರಂಭದಲ್ಲಿ ನಾನು ನಿಧಾನವಾಗಿ ಆಡಿದೆ. ಆದರೆ, ಬಳಿಕ ತಂಡದ ಅಗತ್ಯಕ್ಕೆ ತಕ್ಕ ಹಾಗೆ ಬ್ಯಾಟ್ ಬೀಸಲು ಶುರು ಮಾಡಿದೆ. ಕೊನೆಯ ಹಂತದಲ್ಲಿ ವೈಡ್ ಬಾಲ್ಗಳ ಗೊಂದಲ ಉಂಟಾಯಿತು. ಆದರೂ ಜಿದ್ದು ಬಿಡದೇ ಗೆದ್ದೆ ಎಂದಬುದಾಗಿ ಗ್ರೇಸ್ ಇದೇ ವೇಳೆ ಹೇಳಿದ್ದಾರೆ.