Site icon Vistara News

Pro Kabaddi | ಪಾಟ್ನಾ ಪೈರೇಟ್ಸ್‌ ವಿರುದ್ಧ ಬೆಂಗಾಲ್‌ ವಾರಿಯರ್ಸ್‌ಗೆ ಅಮೋಘ ಜಯ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನಲ್ಲಿ ಭಾನುವಾರದ ಮೂರನೇ ಪಂದ್ಯದಲ್ಲಿ ದಿನದ ಮೂರನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡ 54-26 ಅಂತರದಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ ಜಯ ಗಳಿಸಿದವು.

ನಾಯಕ ಮಣಿಂದರ್ ಸಿಂಗ್‌ (12) ಹಾಗೂ ಶ್ರೀಕಾಂತ್‌ ಯಾದವ್‌ (9) ಅವರ ರೈಡಿಂಗ್‌ ಅಂಕಗಳ ನೆರವಿನಿಂದ ಬೆಂಗಾಲ್‌ ವಾರಿಯರ್ಸ್‌ ಪಂದ್ಯದುದ್ದಕ್ಕೂ ಪಾರಮ್ಯ ಸಾಧಿಸಿ ಗೆಲುವು ಕಂಡಿತು. ಇದು ಪ್ರಸಕ್ತ ಋತುವಿನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಅಂಕವಾಗಿದೆ. ಪಾಟ್ನಾ ಪೈರೇಟ್ಸ್‌ ಪರ ಸಚಿನ್‌ 12 ಅಂಕಗಳನ್ನು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ನಾಯಕ ಮಣಿಂದರ್‌ ಸಿಂಗ್‌ (8) ಹಾಗೂ ಶ್ರೀಕಾಂತ್‌ ಜಾದವ್‌ (6) ಅವರ ಅದ್ಭುತ ರೈಡಿಂಗ್‌ ನೆರವಿನಿಂದ ಪಾಟ್ನಾ ಪೈರೇಟ್ಸ್‌ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಬೆಂಗಾಲ್‌ ವಾರಿಯರ್ಸ್‌ 26-11 ಅಂತರದಲ್ಲಿ ಮುನ್ನಡೆ ಕಂಡಿದೆ, ರೈಡಿಂಗ್‌ ಹಾಗೂ ಟ್ಯಾಕಲ್‌ ವಿಭಾಗದಲ್ಲಿ ಕಳೆಗುಂದಿದ ಪಾಟ್ನಾ ಪೈರೇಟ್ಸ್‌ ಮತ್ತೊಂದು ಸೋಲಿಗೆ ಮುನ್ನಡಿ ಬರೆಯಿತು.

ಇದನ್ನೂ ಓದಿ | Pro Kabaddi | ತೆಲುಗು ಟೈಟನ್ಸ್‌ ಬಳಗದ ವಿರುದ್ಧ ದಬಾಂಗ್ ಡೆಲ್ಲಿ ತಂಡದ ಜಯಭೇರಿ

Exit mobile version