ಮೆಲ್ಬೋರ್ನ್ : ಪಾಕಿಸ್ತಾನ ವಿರುದ್ಧದ ಟಿ೨೦ ಪಂದ್ಯದಲ್ಲಿ ಭಾರತ ತಂಡದ ಗೆಲುವಿನ ಸವಿಯನ್ನು ಭಾರತೀಯರು ಇನ್ನೂ ಮರೆತಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿಯ ಇನಿಂಗ್ಸ್ ಇಡೀ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದೆ. ವಿರಾಟ್ ಕೊಹ್ಲಿ ತಂಡವನ್ನು ಗೆಲ್ಲಿಸಿದ ಪರಿಯನ್ನು ವಿಶ್ವ ಕ್ರಿಕೆಟ್‌ನ ಗಣ್ಯರನೇಕರು ಹಾಡಿ ಹೊಗಳುತ್ತಿದ್ದಾರೆ. ಅಂತೆಯೇ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಗ್ರೆಗ್ ಚಾಪೆಲ್ ಅವರು ವಿರಾಟ್ ಕೊಹ್ಲಿಯ ಇನಿಂಗ್ಸ್ ಅನ್ನು ಭಗವದ್ಗೀತೆಗೆ ಹೋಲಿಸಿದ್ದಾರೆ.
ಗ್ರೆಗ್ ಚಾಪೆಲ್ ಅವರು ತಮ್ಮ ಅಂಕಣದಲ್ಲಿ ವಿರಾಟ್ ಕೊಹ್ಲಿಯನ್ನು ಹೊಗಳಿ ಬರೆದಿದ್ದಾರೆ. “ಭಗವದ್ಗೀತೆ ಎಂಬುದು ಹಿಂದೂಗಳು ಪವಿತ್ರ ಗ್ರಂಥ. ಅದರರ್ಧ ದೇವರ ವಾಣಿ. ಪಾಕಿಸ್ತಾನ ವಿರುದ್ಧದ ಕೊಹ್ಲಿಯ ಇನಿಂಗ್ಸ್ ಕೂಡ ದೇವರ ವಾಣಿಗೆ ಸನಿಹವಿತ್ತು ಎಂಬುದಾಗಿ ಅವರು ಹೇಳಿದ್ದಾರೆ.
ಕೊಹ್ಲಿಯ ಇನಿಂಗ್ಸ್ ಬೆಕ್ಕಿನ ಮರಿ ಉಣ್ಣೆಯ ನೂಲಿನಲ್ಲಿ ಅಡಿದಂತಿತ್ತು. ನಿಧಾನವಾಗಿ ಅಟ ಆರಂಭಿಸಿ ಬಳಿಕ ಸಂಪೂರ್ಣ ನಿಯಂತ್ರಣ ಪಡೆದುಕೊಂಡರು. ಪಾಕಿಸ್ತಾನದ ಬಲಿಷ್ಠ ಬೌಲಿಂಗ್ ಬಳಗದ ಬಲವನ್ನು ನಿಧಾನವಾಗಿ ಹಿಮ್ಮೆಟ್ಟಿಸುತ್ತಾ ಹೋದರು. ಎಮ್‌ಜಿಸಿಯ ಹಸಿರು ಹೊದಿಕೆಯಲ್ಲಿ ಬ್ಯಾಟಿಂಗ್ ವೈಭವ ತೋರಿಸಿದರು ಎಂದು ಚಾಪೆಲ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Virat kohli | ಪಾಕ್ ವಿರುದ್ಧ ವಿರಾಟ್ ದರ್ಶನದ ಬಳಿಕ ಐದು ಸ್ಥಾನ ಮುಂಬಡ್ತಿ ಪಡೆದ ವಿರಾಟ್ ಕೊಹ್ಲಿ