Site icon Vistara News

Groin Injury: ಜರ್ಮನಿಯಲ್ಲಿ ಸರ್ಜರಿ ಮಾಡಿಕೊಂಡ ರಾಹುಲ್‌

groin injury

ಬೆಂಗಳೂರು: ಉತ್ತಮ ಪ್ರದರ್ಶನದ ಹೊರತಾಗಿಯೂ ಕನ್ನಡಿಗ ಕೆ. ಎಲ್‌. ರಾಹುಲ್‌ಗೆ ಗಾಯದ ಸಮಸ್ಯೆ ಬಿಡದೇ ಕಾಡುತ್ತಿದೆ. ಹೀಗಾಗಿ ಅವರು ಪ್ರಮುಖ ಟೂರ್ನಿಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಇದೀಗ ಅವರು ಜರ್ಮನಿಯಲ್ಲಿ Groin Injury ಸರ್ಜರಿಗೆ ಒಳಗಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಟಿ೨೦ ಸರಣಿಗೆ ಮೊದಲು ಅವರನ್ನು ಟೀಮ್‌ ಇಂಡಿಯಾದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಗಾಯದ ಸಮಸ್ಯೆಯಿಂದಾಗಿ ಅವರಿಗೆ ಆ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಅಂತೆಯೇ ಇಂಗ್ಲೆಂಡ್‌ ಪ್ರವಾಸ ತೆರಳಿರುವ ಹಿರಿಯರ ತಂಡವನ್ನು ಸೇರಿಕೊಳ್ಳುವ ಭಾಗ್ಯವೂ ಲಭಿಸಲಿಲ್ಲ. ಪುನಶ್ಚೇತನಕ್ಕಾಗಿ ಅವರು ಸೀದಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ ಬಂದಿದ್ದರು. ಆದರೆ, ಸಮಸ್ಯೆ ಬಿಗಡಾಯಿಸಿದ ಕಾರಣ ಅವರನ್ನು ಜರ್ಮನಿಗೆ ಕಳುಹಿಸಿ ಸರ್ಜರಿಗೆ ಒಳಪಡಿಸಲಾಗಿದೆ.

ಕೆಲವು ದಿನಗಳ ಹಿಂದೆ ರಾಹುಲ್‌ ಹಾಗೂ ಅವರ ಭಾವಿ ಪತ್ನಿ ಅತಿಯಾ ಶೆಟ್ಟಿ ಜರ್ಮನಿಯ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ಜತೆ ರಾಹುಲ್‌ ಕೂಡ ಇದ್ದರು. ಆದರೆ, ಅವರು ಯಾಕೆ ಅಲ್ಲಿಗೆ ಹೋದರು ಎಂಬುದು ಗೊತ್ತಾಗಿರಲಿಲ್ಲ. ಆದರೆ, ಜೂನ್‌ ೨೮ರಂದು ರಾಹುಲ್‌ ಅವರೇ ನನಗೆ ಸರ್ಜರಿಯಾಯಿತು ಎಂದು ಸ್ಬತಃ ರಾಹುಲ್ ಬರೆದುಕೊಂಡಿದ್ದಾರೆ.

ಐಪಿಎಲ್‌ನ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಇನ್‌ಸ್ಟಾ ಗ್ರಾಮ್‌ ಖಾತೆಯಲ್ಲಿ ರಾಹುಲ್‌ಗೆ ಗಾಯದ ಸಮಸ್ಯೆಯಿಂದ ಸುಧಾರಿಸಿಕೊಳ್ಳುವಂತೆ ಶುಭಾಶಯ ಪೋಸ್ಟ್‌ ಹಾಕಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್‌ “ಹೌದು ಸರ್ಜರಿ ಯಶಸ್ವಿಯಾಗಿ ನಡೆದಿದೆ,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಗಾಯಾಳು ಕೆ ಎಲ್‌ ರಾಹುಲ್‌ ದಕ್ಷಿಣ ಆಫ್ರಿಕ ವಿರುದ್ಧ ಸರಣಿಯಿಂದ ಹೊರಕ್ಕೆ

Exit mobile version