Site icon Vistara News

GT vs SRH: ಹೈದರಾಬಾದ್​ ಬ್ಯಾಟಿಂಗ್​ ಆರ್ಭಟಕ್ಕೆ ತಡೆಯೊಡ್ಡೀತೇ ಗುಜರಾತ್​ ಟೈಟಾನ್?​

GT vs SRH

ಅಹಮದಾಬಾದ್​: ಬಲಿಷ್ಠ ಬ್ಯಾಟಿಂಗ್​ ಲೈನ್​ ಹೊಂದಿರುವ, ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ರನ್​ ಮಳೆಯನ್ನೇ ಹರಿಸಿ ಐಪಿಎಲ್​ನಲ್ಲಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ಬರೆದ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡ ಇದೇ ಜೋಶ್​ನಲ್ಲಿ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಭಾನುವಾರ ನಡೆಯುವ ಐಪಿಎಲ್​ನ(IPL 2024) ಡಬಲ್​ ಹೆಡರ್​ನ(GT vs SRH) ಹಗಲು ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್(gujarat titans)​ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೆ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಿದೆ.

ಹೈದರಾಬಾದ್​ಗೆ ಬ್ಯಾಟಿಂಗ್​ ಬಲ


ಹೈದರಾಬಾದ್​ ತಂಡದಲ್ಲಿ ಅನುಭವಿ ಬೌಲರ್​ಗಳಿದ್ದರೂ ಕೂಡ ಕ್ಲಿಕ್​ ಆದದ್ದು ಬ್ಯಾಟಿಂಗ್​ ವಿಭಾಗ ಮಾತ್ರ. ಈಗಾಗಲೇ ತಂಡ ಆಡಿದ 2 ಪಂದ್ಯಗಳಲ್ಲಿಯೂ ಇದು ಸಾಬೀತಾಗಿದೆ. ಹೀಗಾಗಿ ಈ ಪಂದ್ಯಕ್ಕೂ ತಂಡ ಬ್ಯಾಟಿಂಗ್​ ಬಲವನ್ನೇ ನೆಚ್ಚಿಕೊಂಡಿದೆ. ಕನ್ನಡಿಗ ಮಯಾಂಕ್​ ಅಗರ್ವಾಲ್​ ಮತ್ತು ವಿಶ್ವಕಪ್ ಹೀರೊ ಆಸ್ಟ್ರೇಲಿಯಾದ ಟ್ರಾವಿಸ್​ ಹೆಡ್​ ಸ್ಫೋಟಕ ಬ್ಯಾಟಿಂಗ್​ ಮೂಲಕ ತಮಡಕ್ಕೆ ಉತ್ತಮ ಆರಂಭ ಒದಗಿಸಿದರೆ, ಆ ಬಳಿಕ ಅಭಿಷೇಕ್​ ಶರ್ಮ, ಮಾರ್ಕ್ರಮ್​ ಮತ್ತು ಹೆನ್ರಿಚ್​ ಕ್ಲಾಸೆನ್​ ಮಧ್ಯಮ ಕ್ರಮಾಂಕದಲ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟಿ ಬೇಸಿ ತಂಡದ ಬೃಹತ್​ ಮೊತ್ತಕ್ಕೆ ನೆರವಾಗುತ್ತಿದ್ದಾರೆ. ಹೀಗಾಗಿ ಬ್ಯಾಟಿಂಗ್​ ವಿಭಾಗದಲ್ಲಿ ಯಾವುದೇ ಕೊರತೆ ಇಲ್ಲ.

​ಹೈದರಾಬಾದ್​ಗೆ ಚಿಂತೆ ಇರುವುದು ಬೌಲಿಂಗ್​ ವಿಭಾಗದಲ್ಲಿ. ಟಿ.ನಟರಾಜನ್​, ಭುವನೇಶ್ವರ್​ ಕುಮಾರ್​, ನಾಯಕ ಪ್ಯಾಟ್​ ಕಮಿನ್ಸ್​, ಶಾಬಾಜ್​ ಅಹ್ಮದ್​, ಉನಾದ್ಕತ್​ ಇವರೆಲ್ಲೆ ಆರಂಭಿಕ ಓವರ್​ ಕಂಟ್ರೋಲ್​ ಮಾಡಿದರೂ ಕೂಡ ಮುಂದಿನ ಓವರ್​ಗಳಲ್ಲಿ ದುಬಾರಿಯಾಗಿ ಕಂಡುಬರುತ್ತಿದ್ದಾರೆ. ಹೀಗಾಗಿ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಫಾರ್ಮ್​ ಕಂಡುಕೊಳ್ಳಲೇ ಬೇಕಾದ ಅನಿವಾರ್ಯತೆ ಇವರ ಮುಂದಿದೆ. ಕೇವಲ ಬ್ಯಾಟಿಂಗ್​ ಮಾತ್ರ ನಂಬಿ ಕುಳಿತರೆ ಆಗದು.

ಇದನ್ನೂ ಓದಿ IPL 2024: ಮುಂಬೈ ತಂಡಕ್ಕೆ ಮತ್ತಷ್ಟು ಚಿಂತೆ ಹೆಚ್ಚಿಸಿದ ಸೂರ್ಯಕುಮಾರ್ ಫಿಟ್‌ನೆಸ್‌

ಗುಜರಾತ್​ ಸಾಮಾನ್ಯ ತಂಡ


5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮೊದಲ ಪಂದ್ಯದಲ್ಲಿ ಸೋಲಿಣಿಸಿದರೂ ಕೂಡ ಗುಜರಾತ್​ ಸಾಮಾನ್ಯ ತಂಡವಾಗಿದೆ. ಇಲ್ಲಿ ಸ್ಟಾರ್​ ಆಟಗಾರರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಕಳೆದ ಆವೃತ್ತಿಯಲ್ಲಿ ಗರಿಷ್ಠ ಸ್ಕೋರರ್​​ ಆಗಿದ್ದ ಶುಭಮನ್​ ಗಿಲ್​ ತಂಡದ ನಾಯಕನಾದ ಬಳಿಕ ನಿರೀಕ್ಷಿತ ಪ್ರದರ್ಶನ ತೋರಿ ಬರುತ್ತಿಲ್ಲ. ಇದಕ್ಕೆ ನಾಯಕತ್ವದ ಒತ್ತಡವೂ ಕೂಡ ಕಾರಣವಾಗಿರಬಹುದು. ಬೌಲಿಂಗ್​ನಲ್ಲಿ ಮೋಹಿತ್​ ಶರ್ಮ ಹೊರತುಪಡಿಸಿ ಉಳಿದೆಲ್ಲರೂ ಸರಿಯಾಗಿ ದಂಡಿಸಿಕೊಳ್ಳುತ್ತಿದ್ದಾರೆ. ರಶೀದ್​ ಖಾನ್​ ಸ್ಪಿನ್​ ಮ್ಯಾಜಿಕ್​ ಕೂಡ ವರ್ಕ್ ಆಗುತ್ತಿಲ್ಲ. ಡೇವಿಡ್​ ಮಿಲ್ಲರ್​ ಒಂದೆರಡು ಬೌಂಡರಿಗಿ ಸೀಮಿತರಾಗಿದ್ದಾರೆ. ಹೀಗಾಗಿ ತಂಡದ ಮೇಲೆ ಹೆಚ್ಚಿನ ಭರವಸೆ ಇಡುವುದು ಕಷ್ಟ.

ಮುಖಾಮುಖಿ


ಉಭಯ ತಂಡಗಳ ಇದುವರೆಗಿನ ಮುಖಾಮುಖಿಯನ್ನು(Gt vs SRH Head To Head Records) ನೋಡುವಾಗ ಗುಜರಾತ್​ ಬಲಿಷ್ಠವಾಗಿ ಗೋಚರಿಸಿದೆ. ಒಟ್ಟು ಮೂರು ಪಂದ್ಯ ಆಡಿ 2ರಲ್ಲಿ ಗೆದ್ದಿದೆ. ಹೈದರಾಬಾದ್​ ಒಂದು ಪಂದ್ಯ ಮಾತ್ರ ಜಯಿಸಿದೆ. ಆದರೆ, ಅಂದು ಇದ್ದ ತಂಡಕ್ಕೂ ಈಗ ಇರುವ ತಂಡಕ್ಕೂ ಬಹಳ ವ್ಯತ್ಯಾಸವಿದೆ. ಹೈದರಾಬಾದ್​ ಬಲಿಷ್ಠಗೊಂಡರೆ, ಗುಜರಾತ್​ ದುರ್ಬಲಗೊಂಡಿದೆ.

ಸಂಭಾವ್ಯ ತಂಡ


ಗುಜರಾತ್​:
ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.

ಹೈದರಾಬಾದ್​: ಟ್ರಾವಿಸ್ ಹೆಡ್, ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್.

Exit mobile version