ಗುಜರಾತ್: ಗುಜರಾತ್‌ನಲ್ಲಿ ಚುನಾವಣಾ ಕಾವು ದಿನೇ ದಿನೆ ಹೆಚ್ಚುತ್ತಲೇ ಇದ್ದು ಟಿ20 ಕ್ರಿಕೆಟ್ ಸಮರದಂತಾಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಪತ್ನಿ ಗುಜರಾತ್(Gujarat Election) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಪತ್ನಿಯ ಗೆಲುವಿಗಾಗಿ ಇದೀಗ ಜಡ್ಡು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ.
ಕ್ರಿಕೆಟಿಗ ರವೀಂದ್ರ ಜಡೇಜಾ ತಮ್ಮ ಪತ್ನಿಯನ್ನು ಗೆಲ್ಲಿಸಲು ಚುನಾವಣಾ ಅಖಾಡಕ್ಕೆ ಧುಮುಕಿದ್ದು ಹಗಲು ರಾತ್ರಿ ಎನ್ನದೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದೀಗ ಜಡೇಜಾಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಸಾಥ್ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜತೆಗಿರುವ ಫೋಟೋವನ್ನು ಜಡೇಜಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ದೇಶದ ಹೆಮ್ಮೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಜಡೇಜಾ ಅವರ ಪತ್ನಿ ರಿವಾಬ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ್(ಉತ್ತರ) ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ರಿವಾಬ ಜಡೇಜಾ 2019ರಿಂದಲೇ ಸಕ್ರಿಯ ರಾಜಕಾರಣಕ್ಕೆ ಎಂಟ್ರಿಕೊಟ್ಟಿದ್ದು, ಇದೀಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿಪೇಂದ್ರಸಿಂಗ್ ಜಡೇಜಾ ಹಾಗೂ ಆಮ್ ಆದ್ಮಿ ಪಕ್ಷದ ಕರ್ಸಾನ್ ಕರ್ಮುರ್ ಎದುರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ | Ravindra Jadeja | ಪತ್ನಿಯ ಎಲೆಕ್ಷನ್ ಕ್ಯಾಂಪೇನ್ಗೆ ಹಾಜರ್, ಕ್ರಿಕೆಟ್ ಸರಣಿಗೆ ಚಕ್ಕರ್; ಟೀಕೆಗೆ ಒಳಗಾದ ಜಡೇಜಾ