ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನ ಶನಿವಾರದ(ಮಾರ್ಚ್ 11) ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡದ ನಾಯಕಿ ಸ್ನೇಹ್ ರಾಣಾ ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದ ಬೆತ್ ಮೂನಿ ಅವರ ಬದಲು ತಂಡಕ್ಕೆ ಆಯ್ಕೆಯಾದ ದಕ್ಷಿಣ ಆಫ್ರಿಕಾ ತಂಡದ ಹಾರ್ಡ್ ಹಿಟ್ಟರ್ ಲಾರಾ ವೊಲ್ವಾರ್ಡ್ಟ್ ಈ ಪಂದ್ಯದಲ್ಲಿ ಆಡಲಿಳಿದರು.
ಡಾ.ಡಿ.ವೈ.ಪಾಟೀಲ್ ಕ್ರೆಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ಗುಜರಾತ್ ಜೈಂಟ್ಸ್ಗೆ ಮಹತ್ವದ ಪಂದ್ಯವಾಗಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಗುಜರಾತ್ ಸೋತರೆ ಮುಂದಿನ ಹಾದಿ ದುರ್ಗಮಗೊಳ್ಳಲಿದೆ. ಹೀಗಾಗಿ ಗುಜರಾತ್ ಈ ಪಂದ್ಯದಲ್ಲಿ ಶಕ್ತಿ ಮೀರಿ ಪ್ರಯತ್ನಿಸುವ ಸಾಧ್ಯತೆ ಇದೆ. ಡೆಲ್ಲಿ ಕೂಡ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಅಂಕ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ಪಂದ್ಯವನ್ನು ಗೆಲ್ಲುವ ಪಣ ತೊಟ್ಟಿದೆ. ಒಟ್ಟಾರೆ ಈ ಪಂದ್ಯ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ಮರಿಜಾನ್ ಕಾಪ್, ಅಲೈಸ್ ಕ್ಯಾಪ್ಸಿ, ತನಿಯಾ ಭಾಟಿಯಾ, ಅರುಂಧತಿ ರೆಡ್ಡಿ, ಜೆಸ್ ಜೊನಾಸೆನ್, ರಾಧಾ ಯಾದವ್, ಶಿಖಾ ಪಾಂಡೆ,ತಾರಾ ನೋರಿಸ್.
ಇದನ್ನೂ ಓದಿ WPL 2023 : ಆರ್ಸಿಬಿಗೆ ಮಗದೊಂದು ಹೀನಾಯ ಪರಾಜಯ, ಯುಪಿ ವಿರುದ್ಧ 10 ವಿಕೆಟ್ ಸೋಲು
ಗುಜರಾತ್ ಜೈಂಟ್ಸ್: ಎಸ್ ಮೇಘನಾ,ಲಾರಾ ವೊಲ್ವಾರ್ಡ್ಟ್,ಹರ್ಲೀನ್ ಡಿಯೋಲ್,ಆಶ್ಲೀಗ್ ಗಾರ್ಡ್ನರ್, ಜಾರ್ಜಿಯಾ, ಸುಷ್ಮಾ ವರ್ಮ, ಹೇಮಲತಾ ದಯಾಲನ್, ಸ್ನೇಹ್ ರಾಣಾ (ನಾಯಕಿ), , ತನುಜಾ ಕನ್ವರ್, ಮಾನ್ಸಿ ಜೋಶಿ, ಕಿಮ್ ಗಾರ್ತ್.