ಮುಂಬಯಿ: ವಿಶ್ವ ಮಹಿಳಾ ದಿನಾಚರಣೆಯಂದು ನಡೆಯುತ್ತಿರುವ ವನಿತಾ ಪ್ರೀಮಿಯರ್ ಲೀಗ್ನ ಮುಖಾಮುಖಿಯಲ್ಲಿ ಆರ್ಸಿಬಿ ವಿರುದ್ಧ ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಟಾಸ್ ಸೋತ ಆರ್ಸಿಬಿ ಮೊದಲು ಬೌಲಿಂಗ್ ನಡೆಸಲಿದೆ.
ಸ್ಮೃತಿ ಮಂಧಾನಾ ಸಾರಥ್ಯದ ಆರ್ಸಿಬಿ ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿತು. ದಿಶಾ ಕಸಟ್ ಬದಲು ಪೂನಂ ಕೆಮ್ನಾರ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಯಿತು. ಆದರೆ ಗುಜರಾತ್ ಜೈಂಟ್ಸ್ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿತು. ಬೆನ್ ಮೂನಿ ಈ ಪಂದ್ಯದಿಂದಲೂ ಹೊರಗುಳಿದರು.
ಮುಂಬಯಿಯ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯ ಉಭಯ ತಂಡಕ್ಕೂ ಮಹತ್ವದ ಪಂದ್ಯವಾಗಿದೆ. ಏಕೆಂದರೆ ಆಡಿದ 2 ಪಂದ್ಯಗಳಲ್ಲಿಯೂ ಇತ್ತಂಡಗಳು ಸೋಲು ಕಂಡಿವೆ. ಹೀಗಾಗಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಈ ಹೋರಾಟವನ್ನು ಹೈ ವೋಲ್ಟೇಜ್ ಪಂದ್ಯ ಎಂದು ನಿರೀಕ್ಷಿಸಬಹುದು.
ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನಾ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ದಿಶಾ ಕಸಟ್, ಹೀತರ್ ನೈಟ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಮೆಗಾನ್ ಶಟ್, ಪ್ರೀತಿ ಬೋಸ್, ರೇಣುಕಾ ಸಿಂಗ್.
ಇದನ್ನೂ ಓದಿ WPL 2023: ಯುಪಿ ವಾರಿಯರ್ಸ್ ಮೇಲೆ ಸವಾರಿ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್;42 ರನ್ ಗೆಲುವು
ಗುಜರಾತ್ ಜಯಂಟ್ಸ್: ಸೋಫಿಯಾ ಡಂಕ್ಲಿ, ಸುಷ್ಮಾ ವರ್ಮಾ, ಎಸ್ ಮೇಘನಾ, ಹೇಮಲತಾ ದಯಾಲನ್, ಸ್ನೇಹ ರಾಣಾ (ನಾಯಕಿ), ಹರ್ಲೀನ್ ಡಿಯೋಲ್, ತನುಜಾ ಕನ್ವರ್, ಅನ್ನಾಬೆಲ್ ಸದರ್ಲ್ಯಾಂಡ್, ಮಾನ್ಸಿ ಜೋಶಿ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್.