ಮುಂಬಯಿ: ಮಹಿಳಾ ಪ್ರೀಮಿಯರ್ ಲೀಗ್ನ(WPL 2023) ಅಜೇಯ ತಂಡವಾದ ಮುಂಬೈ ಇಂಡಿಯನ್ಸ್(Mumbai Indians Women) ವಿರುದ್ಧದ ಮಂಗಳವಾರದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್(Gujarat Giants) ಟಾಸ್ ಗೆದ್ದು ಮೊದಲು ಬೌಲಿಂಗ್ ನಡೆಸುವ ನಿರ್ಧಾರ ಕೈಗೊಂಡಿದೆ. ಟಾಸ್ ಸೋತ ಮುಂಬೈ ಬ್ಯಾಟಿಂಗ್ ಆಹ್ವಾನ ಪಡೆದಿದೆ.
ಮುಂಬಯಿಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯದಲ್ಲಿ ಮುಂಬೈ ಗೆದ್ದರೆ 10 ಅಂಕದೊಂದಿಗೆ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. ಒಂದೊಮ್ಮೆ ಗುಜರಾತ್ ಗೆದ್ದರೆ ತಾನೂ ಕೂಡ ಫೈನಲ್ ರೇಸ್ನಲ್ಲಿದೇನೆ ಎಂದು ಉಳಿದ ತಂಡಕ್ಕೆ ಸ್ಪಷ್ಟ ಸಂದೇಶ ನೀಡಲಿದೆ.
ಇದನ್ನೂ ಓದಿ WPL 2023: ಅಜೇಯ ಮುಂಬೈಗೆ ಗುಜರಾತ್ ಜೈಂಟ್ಸ್ ಸವಾಲು
ಆಡಿದ ನಾಲ್ಕೂ ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸಿರುವ ಮುಂಬೈ ಆಟವನ್ನು ಗಮನಿಸುವಾಗ ಚೊಚ್ಚಲ ಆವೃತ್ತಿಯಲ್ಲೇ ಕಪ್ ಗೆಲ್ಲುವ ಸೂಚನೆಯೊಂದು ಲಭಿಸಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ. ಎಷ್ಟೇ ದೊಡ್ಡ ಮೊತ್ತವನ್ನಾದರೂ ಸಲೀಸಾಗಿ ಬೆನ್ನಟ್ಟುವ ತಾಕತ್ತು ಹರ್ಮನ್ಪ್ರೀತ್ ಕೌರ್ ಪಡೆಗೆ ಇದೆ. ಆದರೆ ಈ ಪಂದ್ಯದಲ್ಲಿ ಗುಜರಾತ್ ಸವಾಲು ಮೆಟ್ಟಿ ನಿಂತೀತೇ ಎಂದು ಕಾದು ನೋಡಬೇಕಿದೆ.