Site icon Vistara News

WPL 2023 : ಟಾಸ್​ ಗೆದ್ದ ಗುಜರಾತ್​ ಜಯಂಟ್ಸ್​​ ತಂಡದಿಂದ ಫೀಲ್ಡಿಂಗ್ ಆಯ್ಕೆ

Gujarat Titans won the toss and chose to field

#image_title

ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲಿ ಗುಜರಾತ್​ ಜಯಂಟ್ಸ್​ ತಂಡ ಟಾಸ್​ ಜಯಿಸಿದ್ದು, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಹರ್ಮನ್​ಪ್ರೀತ್​ ಕೌರ್​ ನೇತೃತ್ವದ ಮುಂಬಯಿ ಇಂಡಿಯನ್ಸ್​ ಬಳಗ ಮೊದಲು ಬ್ಯಾಟ್​ ಮಾಡಲಿದೆ. ಇಲ್ಲಿನ ಡಿವೈ ಪಾಟೀಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ಆಯೋಜನೆಗೊಂಡಿದ್ದು ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆಯಿದೆ.

ಟಾಸ್​ ಗೆದ್ದ ಗುಜರಾತ್​ ತಂಡದ ನಾಯಕಿ ಬೆತ್​ ಮೂನಿ, ಪಿಚ್​​ನಲ್ಲಿ ಹುಲ್ಲು ಹೆಚ್ಚಾಗಿದೆ. ಹೀಗಾಗಿ ನಾವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ಅದೇ ರೀತಿ ಈ ಸ್ಟೇಡಿಯಮ್​ನಲ್ಲಿ ಚೇಸಿಂಗ್​ ಸುಲಭ. ಡಬ್ಲ್ಯುಪಿಎಲ್​ ಕ್ರಿಕೆಟ್​ ಅಭಿಮಾನಿಗಳಿಗೆ ರಸದೌತಣ ಬಡಿಸಲಿದೆ. ನಮ್ಮ ತಂಡ ಮೂರು ವೇಗಿಗಳು ಹಾಗೂ ನಾಲ್ಕು ಸ್ಪಿನ್ನರ್​ಗಳನ್ನು ಹೊಂದಿರಲಿದೆ ಎಂದು ಹೇಳಿದರು.

ಇದನ್ನೂ ಓದಿ : WPL 2023: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್​ ಲೀಗ್​ಗೆ ವರ್ಣರಂಜಿತ ಚಾಲನೆ

ಮುಂಬಯಿ ಇಂಡಿಯನ್ಸ್​ ನಾಯಕಿ ಹರ್ಮನ್​ಪ್ರೀತ್ ಕೌರ್ ಮಾತನಾಡಿ, ಇದೊಂದು ವಿಶೇಷ ದಿನ. ಈ ಸಂದರ್ಭದಲ್ಲಿ ಮೈ ರೋಮಾಂಚನವಾಗುತ್ತಿದೆ. ಈ ಸ್ಟೇಡಿಯಮ್​ನಲ್ಲಿ ಬ್ಯಾಟಿಂಗ್ ಸುಲಭ. ನಮ್ಮ ಬೌಲರ್​ಗಳು ದೊಡ್ಡ ಸಾಧನೆ ಮಾಡಲಿದ್ದಾರೆ ಎಂದು ಹೇಳಿದರು.

Exit mobile version