Site icon Vistara News

Happy Birthday @ ಅಶ್ವಿನಿ ಪೊನ್ನಪ್ಪ

ಅಶ್ವಿನಿ ಪೊನ್ನಪ್ಪ

ಅಶ್ವಿನಿ ಪೊನ್ನಪ್ಪ ಮಾಚಿಮಂಡ ಇವರ ಪೂರ್ಣ ಹೆಸರು. 1989ರ ಸೆಪ್ಟೆಂಬರ್‌ 18ರಂದು ಬೆಂಗಳೂರಿನಲ್ಲಿ ಜನಿಸಿದರು.

ಕೊಡಗು ಮೂಲದ ಅಶ್ವಿನಿ ಪೊನ್ನಪ್ಪ ಅವರು ಬ್ಯಾಡ್ಮಿಂಟನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಸಾಧನೆ ಮಾಡಿದವರು.

ಅಶ್ವಿನಿ ಪೊನ್ನಪ್ಪ 2004ರಲ್ಲಿ ಸಬ್ ಜೂನಿಯರ್ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡರು.

2011ರ ಲಂಡನ್‌ ವಿಶ್ವ ಚಾಂಪಿಯನ್‌ಷಿಪ್‌ ಮಹಿಳೆಯರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

2010ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಜ್ವಾಲಾ ಗುಟ್ಟಾ ಅವರೊಂದಿಗೆ ಜೋಡಿಯಾಗಿ ಮಹಿಳೆಯರ ಡಬಲ್ಸ್‌ನಲ್ಲಿ ಬಂಗಾರ ಗೆದಿದ್ದಾರೆ ಅಶ್ವಿನಿ.

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಒಟ್ಟಾರೆ 2 ಬಂಗಾರ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ ಕನ್ನಡತಿ.

ಏಷ್ಯನ್‌ ಗೇಮ್ಸ್‌ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ತಲಾ ಒಂದು ಕಂಚಿನ ಪದಕ ಗೆದ್ದಿರುವ ಅಶ್ವಿನಿ ಪೊನ್ನಪ್ಪ.

ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಒಟ್ಟಾರೆ 4 ಬಂಗಾರದ ಪದಕ ಹಾಗೂ ಎರಡು ಬೆಳ್ಳಿಯ ಪದಕ ಬಾಚಿಕೊಂಡಿದ್ದಾರೆ ಭಾರತ ಬ್ಯಾಡ್ಮಿಂಟನ್‌ ತಾರೆ.

2017ರ ಡಿಸೆಂಬರ್‌ 24ರಂದು ಉದ್ಯಮಿ ಕರಣ್ ಮೇದಪ್ಪ ಅವರನ್ನು ವಿವಾಹವಾದರು.

ಇದನ್ನೂ ಓದಿ| Happy Birthday @ಮನೀಶ್‌ ಪಾಂಡೆ

Exit mobile version