Site icon Vistara News

Team India : ಆಸೀಸ್​ ಸರಣಿಯ ತಂಡಕ್ಕೆ ಅಶ್ವಿನ್​ ಸೇರ್ಪಡೆ; ಮಾಜಿ ಸ್ಪಿನ್ನರ್​ ಹರ್ಭಜನ್ ಸಿಂಗ್​ ಅಚ್ಚರಿ

R ashwin

ನವದೆಹಲಿ: ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೂ ಮುನ್ನ ಭಾರತದ ಆಲ್​ರೌಂಡರ್​ ಅಕ್ಷರ್ ಪಟೇಲ್ ಗಾಯಗೊಂಡರು. ಈ ವೇಳೆ ಭಾರತದ ನಾಯಕ ರೋಹಿತ್ ಶರ್ಮಾ ಅವರು ರವಿಚಂದ್ರನ್ ಅಶ್ವಿನ್ ಅವರನ್ನು ವೈಟ್ ಬಾಲ್ ತಂಡಕ್ಕೆ (Team India) ಮರಳುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದರು. ರೋಹಿತ್ ಮತ್ತು ಬಗಳ ಏಷ್ಯಾ ಚಾಂಪಿಯನ್ ಆಗಿ ಕಿರೀಟ ಧರಿಸಿದ ಒಂದು ದಿನದ ನಂತರ ಆಸ್ಟ್ರೇಲಿಯಾ ಸರಣಿಗೆ ತಂಡ ಪ್ರಕಟಗೊಂಡಿತು. ಅದರಲ್ಲಿ ಆರ್​ ಅಶ್ವಿನ್​ ಅವಕಾಶ ಪಡೆದುಕೊಂಡರು. ಇದು ಬಹುಚರ್ಚಿತ ವಿಷಯವಾಗಿ ಮಾರ್ಪಟ್ಟಿದೆ. ಈ ಕುರಿತು ಭಾರತ ತಂಡದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್ ಮಾತನಾಡಿದ್ದು ಆಯ್ಕೆ ಸಮಿತಿ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಆಸ್ಟ್ರೇಲಿಯಾ ಸರಣಿಯು ಐಸಿಸಿ ವಿಶ್ವಕಪ್​ಗೆ ಮುಂಚಿತವಾಗಿ ಭಾರತದ ಕೊನೆಯ ಏಕದಿನ ಸರಣಿಯಾಗಿದೆ. ಐದು ಬಾರಿಯ ವಿಶ್ವ ಚಾಂಪಿಯನ್​ಗಳ ವಿರುದ್ಧ ಭಾರತ ತಂಡ ಏಕದಿನ ಮತ್ತು ಐದು ಟಿ 20 ಪಂದ್ಯಗಳನ್ನು ಆಡಲಿದೆ. ಭಾರತ ತಂಡವನ್ನು ಪ್ರಕಟಿಸಿದ ಬಗ್ಗೆ ಪ್ರತಿಕ್ರಿಯಿಸಿದ ಲೆಜೆಂಡರಿ ಸ್ಪಿನ್ನರ್ ಹರ್ಭಜನ್ ಸಿಂಗ್, ಸ್ಪಿನ್ನರ್​ ಆರ್​ ಅಶ್ವಿನ್ ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.

ಮೊದಲಿಗೆ ಮೂಲ ಏಷ್ಯಾ ಕಪ್ ತಂಡದಲ್ಲಿ ಇಲ್ಲದ ವಾಷಿಂಗ್ಟನ್ ಸುಂದರ್ ಅವರನ್ನು ಅಲ್ಲಿಗೆ ಕರೆಸಲಾಯಿತು. ಇದೀಗ ಆಸ್ಟ್ರೇಲಿಯಾ ಸರಣಿಗೆ ಆರ್ ಅಶ್ವಿನ್ ಅವರನ್ನು ಸೇರಿಸಲಾಗಿದೆ.. ಆದ್ದರಿಂದ ಟೀಮ್ ಇಂಡಿಯಾ ಎಲ್ಲೋ ಒಂದು ಕಡೆ ಆಫ್-ಸ್ಪಿನ್ನರ್​ಗಳನ್ನು ಹುಡುಕುತ್ತಿದೆ. ಅವರು ತಂಡದಲ್ಲಿ ಆಫ್-ಸ್ಪಿನ್ನರ್ ಅನ್ನು ಆಯ್ಕೆ ಮಾಡಿಲ್ಲ . ಎಡಗೈ ಬ್ಯಾಟರ್​ಗಳಿಗಾಗಿ ಯೋಜನೆ ರೂಪಿಸುತ್ತಿದ್ದಾರೆ. ಆಯ್ಕೆದಾರರು ತಮ್ಮ ಹಿಂದಿನ ತಪ್ಪನ್ನು ಸರಿಪಡಿಸಲು ಮತ್ತೊಂದು ತಪ್ಪು ಮಾಡಲು ಹೊರಟಿದ್ದಾರೆ ಎಂದು ಹರ್ಭಜನ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Virat kohli : ಸೆಂಚುರಿ ಅಲ್ಲ, ಮತ್ತೊಂದು ಹೊಸ ಮೈಲುಗಲ್ಲು ಸೃಷ್ಟಿಸಿದ ವಿರಾಟ್​ ಕೊಹ್ಲಿ

ಹಿರಿಯ ಆಲ್​ರೌಂರ್​ ಅಶ್ವಿನ್ ಕೊನೆಯ ಬಾರಿಗೆ 2022 ರ ಜನವರಿಯಲ್ಲಿ ಭಾರತಕ್ಕಾಗಿ ಏಕದಿನ ಪಂದ್ಯವನ್ನು ಆಡಿದ್ದರು. ವಿಶ್ವಕಪ್​​ಗಾಗಿ ಭಾರತದ 15 ಸದಸ್ಯರ ತಂಡದಲ್ಲಿ ಯಾವುದೇ ಆಫ್-ಸ್ಪಿನ್ನರ್​ಗಳನ್ನು ಹೆಸರಿಸಲಾಗಿಲ್ಲ ಎಂಬುದನ್ನು ಗಮನಿಸಬೇಕು. ಏಷ್ಯಾಕಪ್​​ನಲ್ಲಿ ಭಾರತವು ಆಫ್-ಸ್ಪಿನ್ನರ್ ಇಲ್ಲದೆ ಹೋಯಿತು. ಆಸ್ಟ್ರೇಲಿಯಾ ಸರಣಿಯ ಮೊದಲ ಎರಡು ಪಂದ್ಯಗಳಿಗೆ ನಾಯಕ ರೋಹಿತ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಸ್ಪಿನ್ನರ್ ಕುಲದೀಪ್ ಅವರಿಗೆ ವಿಶ್ರಾಂತಿ ನೀಡಲು ಟೀಮ್​ ಮ್ಯಾನೇಜ್ಮೆಂಟ್​ ನಿರ್ಧರಿಸಿದೆ.

ನೀವು ಎಂದಿಗೂ ತಂಡದಲ್ಲಿ ಮೂವರು ಸ್ಪಿನ್ನರ್​ಗಳನ್ನು ಆಯ್ಕೆ ಮಾಡುವುದಿಲ್ಲ. ನೀವು ಗರಿಷ್ಠ ಎರಡನ್ನು ಆಯ್ಕೆ ಮಾಡುತ್ತೀರಿ. ನಿಮ್ಮ ಮುಂದೆ ಎಷ್ಟು ಎಡಗೈ ಬ್ಯಾಟರ್​ಗಳಿದ್ದು, ರವೀಂದ್ರ ಜಡೇಜಾ ಖಂಡಿತವಾಗಿಯೂ ಆ ಸ್ಥಾನದಲ್ಲಿ ಆಡಲಿದ್ದಾರೆ. ಇನ್ನೊಬ್ಬ ಸ್ಪಿನ್ನರ್ ಕುಲದೀಪ್ ಯಾದವ್ ಆಗಿರುತ್ತಾರೆ. ಈಗ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ.

ವಾಷಿಂಗ್ಟನ್ ಮತ್ತು ಅಶ್ವಿನ್ ಅವರಲ್ಲದೆ, ತಿಲಕ್ ವರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಏಕದಿನ ಸರಣಿಗೆ ಭಾರತ ತಂಡಕ್ಕೆ ಸೇರಿಸಲಾಗಿದೆ. ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದ ಅಕ್ಷರ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಅಕ್ಷರ್ ಭಾಗವಹಿಸುವಿಕೆಯು ಫಿಟ್ನೆಸ್​ಗೆ ಒಳಪಟ್ಟಿರುತ್ತದೆ. ಅಶ್ವಿನ್ ಪುನರಾಗಮನದ ಬಗ್ಗೆ ಮಾತನಾಡಿದ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಅನುಭವಿ ಆಲ್ರೌಂಡರ್ ಮೆನ್ ಇನ್ ಬ್ಲೂ ವಿಶ್ವಕಪ್ ತಂಡದಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎಂದು ಪ್ರಶ್ನಿಸಿದ್ದಾರೆ.

Exit mobile version