ಮುಂಬಯಿ: ಭಾರತ ಕ್ರಿಕೆಟ್ ತಂಡದ (Team India) ಆಯ್ಕೆಗಾರರಿಗೆ ತಂಡದ ಹೆಡ್ ಕೋಚ್ನಷ್ಟೇ ವೇತನ ಕೊಟ್ಟರೆ ಈಗ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂಬುದಾಗಿ ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಚೇತನ್ ಶರ್ಮಾ ನೇತೃತ್ವದ ಸಮಿತಿಯು ಅಧ್ವಾನಗಳನ್ನು ಉಂಟು ಮಾಡಿದ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ ಅವರು, ನಮ್ಮಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಾಜಿ ಕ್ರಿಕೆಟಿಗರು ಇದ್ದಾರೆ. ಆದರೆ ಅವರಿಗೆ ಟೀಮ್ ಇಂಡಿಯಾದ ಹೆಡ್ ಕೋಚ್ಗೆ ನೀಡಿದಷ್ಡು ವೇತನ ನೀಡುತ್ತಿಲ್ಲ. ಹೀಗಾಗಿ ಅವರು ಆಯ್ಕೆಗಾರರಾಗಿ ಉಳಿಯಲು ಬಯಸುತ್ತಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : Team India | ಮೊಹಾಲಿ ಸ್ಟೇಡಿಯಮ್‌ನ ಎರಡು ಗ್ಯಾಲರಿಗಳಿಗೆ ಯುವರಾಜ್, ಹರ್ಭಜನ್ ಹೆಸರು ನಾಮಕರಣ
ಭಾರತ ತಂಡದ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಉತ್ತಮ ಆಯ್ಕೆಗಾರರಾಗಬಲ್ಲರು. ಆದರೆ, ಅವರಿಗೆ ಹೆಡ್ ಕೋಚ್ಗೆ ನೀಡಿದಷ್ಟು ವೇತನ ಕೊಟ್ಟರೆ ಅವರು ಆ ಹುದ್ದೆಯನ್ನು ನಿರ್ವಹಿಸಬಲ್ಲರು ಎಂಬುದಾಗಿ ಹರ್ಭಜನ್ ಸಿಂಗ್ ಹೇಳಿದ್ದಾರೆ. ರಾಹುಲ್ ದ್ರಾವಿಡ್ ಅವರು ತಂಡದ ಕೋಚ್ ಆಗಿರುವಾಗ ಅಷ್ಟೇ ವರ್ಚಸ್ಸು ಹೊಂದಿರುವ ಮಾಜಿ ಆಟಗಾರರನ್ನು ತಂಡದ ಆಯ್ಕೆಗೆ ನೇಮಕ ಮಾಡಬೇಕು ಎಂದು ಸಿಂಗ್ ಹೇಳಿದ್ದಾರೆ.