Site icon Vistara News

Team India : ಬಾರ್ಬಡೋಸ್​ನ ಸಮುದ್ರ ತೀರದಲ್ಲಿ ಮಜಾ ಉಡಾಯಿಸಿದ ಟೀಮ್​ ಇಂಡಿಯಾ ಆಟಗಾರರು

Team India

ಪೋರ್ಟ್​ ಆಫ್​ ಸ್ಪೇನ್​ (ವೆಸ್ಟ್​ ಇಂಡೀಸ್​): ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ ಟೆಸ್ಟ್​ ಸರಣಿಯನ್ನು ಮುಗಿಸಿದೆ. ಸರಣಿಯನ್ನು ಭಾರತ 1-0 ಅಂತರದಿಂದ ತನ್ನದಾಗಿಸಿಕೊಂಡಿತು. ಎರಡನೇ ಪಂದ್ಯದ ನಾಲ್ಕನೇ ದಿನ ಮತ್ತು ಐದನೇ ದಿನ ಪೂರ್ತಿ ಮಳೆಯಾಗದೇ ಹೋಗಿದ್ದರೆ ಪಂದ್ಯ ಭಾರತ ತಂಡದ ಕೈವಶ ಆಗುತ್ತಿತ್ತು. ಅಲ್ಲಿಗೆ ಕ್ಲೀನ್​ ಸ್ವೀಪ್​ ಸಾಧನೆಯ ಶ್ರೇಯಸ್ಸು ಲಭಿಸುತ್ತಿತ್ತು. ಆದರೆ, ಮಳೆರಾಯ ಅದಕ್ಕೆ ಅವಕಾಶ ನೀಡಿಲ್ಲ. ಇನ್ನೀಗ ಮೂರು ಪಂದ್ಯಗಳ ಏಕ ದಿನ ಸರಣಿ ನಡೆಯಲಿದೆ. ವೆಸ್ಟ್​ ಇಂಡೀಸ್ ಕ್ರಿಕೆಟ್​ ಸಮಿತಿಯು ತಂಡವನ್ನು ಪ್ರಕಟಿಸಿದೆ. ಇದೇ ವೇಳೆ ಏಕ ದಿನ ತಂಡಕ್ಕೆ ಆಯ್ಕೆಯಾಗಿರುವ ಭಾರತ ತಂಡದ ಆಟಗಾರರು ಕೆರಿಬಿಯನ್ ದ್ವೀಪಕ್ಕೆ ತಲುಪಿದ್ದಾರೆ.

ಜುಲೈ 27ರಂದು ಮೊದಲ ಪಂದ್ಯ ನಡೆಯಲಿದ್ದು ಭಾರತ ತಂಡ ಜೋರು ಅಭ್ಯಾಸ ನಡೆಸುತ್ತಿದೆ. ಏತನ್ಮಧ್ಯೆ, ವಿಂಡೀಸ್​ಗೆ ತೆರಳಿರುವ ಭಾರತದ ಆಟಗಾರರು ಅಲ್ಲಿನ ಸಮುದ್ರದ ದಂಡೆಯಲ್ಲಿ ಮಜಾ ಉಡಾಯಿಸಿದ್ದಾರೆ. ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಕುಲದೀಪ್ ಯಾದವ್ ಮಂಗಳವಾರ ಬಾರ್ಬಡೋಸ್​ನಲ್ಲಿ ಮೋಜಿನ ವಿಹಾರ ಮಾಡಿದ್ದಾರೆ. ಜುಲೈ 27 ರಂದು (ಗುರುವಾರ) ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.

ಬಾರ್ಬಡೋಸ್​​ನ ಬ್ರಿಜ್​ಟೌನ್​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ಜುಲೈ 27 ರ ಗುರುವಾರ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಎರಡನೇ ಏಕದಿನ ಪಂದ್ಯವೂ ಇದೇ ಮೈದಾನದಲ್ಲಿ ಶನಿವಾರ ನಡೆಯಲಿದೆ. ಕ್ವೀನ್ಸ್ ಪಾರ್ಕ್ ಓವಲ್​​ನಲ್ಲಿ ಆಗಸ್ಟ್ 1ರಂದು ಪೋರ್ಟ್ ಆಫ್ ಸ್ಪೇನ್​​ನಲ್ಲಿ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಆರಂಭವಾಗಲಿವೆ.

ಇದನ್ನೂ ಓದಿ : Ind vs wi : ಟೆಸ್ಟ್​ ಸರಣಿಯಲ್ಲಿ ಮ್ಯಾನ್​ ಆಫ್​ ದಿ ಸೀರಿಸ್ ಪ್ರಶಸ್ತಿಯೇ ಕೊಟ್ಟಿಲ್ಲ!

ಟೆಸ್ಟ್ ಸರಣಿಯನ್ನು ಗೆದ್ದ ನಂತರ, ಮೆನ್ ಇನ್ ಬ್ಲೂ ಏಕದಿನ ಸರಣಿಯಲ್ಲೂ ತಮ್ಮ ಗೆಲುವಿನ ಓಟವನ್ನು ಮುಂದುವರಿಸಲು ಬಯಸುತ್ತಿದೆ. ಪಾಂಡ್ಯ, ಸೂರ್ಯಕುಮಾರ್, ಸಂಜು ಸ್ಯಾಮ್ಸನ್, ಉಮ್ರಾನ್ ಮಲಿಕ್, ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಅವರು ಏಕದಿನ ಸರಣಿಗೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.

ವಿಂಡೀಸ್​ಗೆ ಗೆಲುವಿನ ಹುಮ್ಮಸ್ಸು

ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್​​ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ವೆಸ್ಟ್​ ಇಂಡೀಸ್​ ತಂಡವು ಇದೀಗ ಮತ್ತೆ ಏಕದಿನ ಸರಣಿಯಲ್ಲಿ ಆಡುತ್ತಿದೆ. ಮೊದಲು ಬ್ಯಾಟರ್​​ ಶಿಮ್ರಾನ್ ಹೆಟ್ಮಾಯರ್ ಎರಡು ವರ್ಷಗಳ ಅಂತರದ ನಂತರ ವಾಪಸಾಗಿದ್ದಾರೆ. ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ವೈಯಕ್ತಿಕ ಕಾರಣಗಳಿಂದಾಗಿ ಸರಣಿಯ ಭಾಗವಾಗಿಲ್ಲ. ವೆಸ್ಟ್ ಇಂಡೀಸ್ ತನ್ನ ಕೊನೆಯ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ ಮತ್ತು ಬಲಿಷ್ಠವಾಗಿ ಕಾಣುವ ಭಾರತೀಯ ತಂಡದ ವಿರುದ್ಧ ಕಠಿಣ ಸವಾಲು ಅವರ ಮುಂದೆ ಇದೆ ಎಂಬುದನ್ನು ಗಮನಿಸಬೇಕು.

Exit mobile version