ಮುಂಬಯಿ : ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಗೆ ಭಾರತ ತಂಡ ಸಜ್ಜಾಗಿದ್ದು, ರೋಹಿತ್ ಶರ್ಮ ನೇತೃತ್ವದಲ್ಲಿ ಆಟಗಾರರು ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಅದಾದ ಬಳಿಕ ಟೀಮ್ ಇಂಡಿಯಾ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ೩ ಏಕ ದಿನ ಹಾಗೂ ಅಷ್ಟೇ ಸಂಖ್ಯೆಯ ಟಿ೨೦ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ನಂತರ ಟಿ೨೦ ವಿಶ್ವ ಕಪ್ಗಾಗಿ ಆಸ್ಟ್ರೇಲಿಯಾ ವಿಮಾನ ಏರಬೇಕು. ಇಷ್ಟೆಲ್ಲ ಬ್ಯುಸಿ ಶೆಡ್ಯುಲ್ ನಡುವೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಡೊಂದಕ್ಕೆ ಡಾನ್ಸ್ ಮಾಡಿ ಖುಷಿಪಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ತಾವು ಸ್ಟಾರ್ ಬ್ಯಾಟರ್ ಜತೆ ಕಾಲು ಕುಣಿಸುವ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿದ್ದಾರೆ. ಅವರಿಬ್ಬರ ಡಾನ್ಸ್ ಪ್ರೀತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಡಾನ್ಸ್ ಪ್ರಿಯರು ಎಂಬುದು ಈ ಹಿಂದೆಯೂ ಸಾಬೀತಾಗಿತ್ತು. ಖುಷಿಯಾದಾಗ ಮೈದಾನದಲ್ಲಿ ಕುಣಿಯುವುದು ಹಾಗೂ ಡ್ರೆಸಿಂಗ್ ರೂಮ್ನಲ್ಲಿ ಡಾನ್ಸ್ ಮಾಡುವ ವಿಡಿಯೊಗಳು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅಂತೆಯೇ ಹಾರ್ದಿಕ್ ಪಾಂಡ್ಯ ಅವರೂ ಸಮಯ ಸಿಕ್ಕಾಗ ಡಾನ್ಸ್ ಮಾಡುತ್ತಾರೆ. ಅಂತೆಯೇ ಅವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಮೊದಲು ಕುಣಿದಿದ್ದಾರೆ.
ಇದನ್ನೂ ಓದಿ | Team India | ವಿರಾಟ್ ಕೊಹ್ಲಿಯನ್ನೂ ಆರಂಭಿಕ ಬ್ಯಾಟಿಂಗ್ ಆಯ್ಕೆಯಾಗಿ ಬಳಸುತ್ತೇವೆ ಎಂದ ರೋಹಿತ್