ಬೆಂಗಳೂರು: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಎಡ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ(Hardik Pandya) ಅವರ ಗಾಯದ ಬಗ್ಗೆ ಬಿಸಿಸಿಐ(BCCI) ಬಿಗ್ ಅಪ್ಡೇಟ್ ನೀಡಿದೆ. ಹಾರ್ದಿಕ್ ಪಾಂಡ್ಯ ಅವರು ಸದ್ಯ ಒಂದು ಪಂದ್ಯಕ್ಕೆ ವಿಶ್ರಾಂತಿ ಪಡೆಯಲಿದ್ದು ನ್ಯೂಜಿಲ್ಯಾಂಡ್ ವಿರುದ್ಧದ ಧರ್ಮಶಾಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಅವರು ನೇರವಾಗಿ ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಬಂದು ತಮ್ಮ ಗಾಯದ ಬಗ್ಗೆ ಪರೀಕ್ಷೆ ನಡೆಸಿದ್ದರು. ಬಳಿಕ ಎನ್ಸಿಗೆ ತೆರೆಳಿದ್ದರು. ಇದೀಗ ಅವರ ಗಾಯದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ವೈದ್ಯಕೀಯ ತಂಡ, “ಪಾದದ ಗಾಯಕ್ಕೀಡಾದ ಹಾರ್ದಿಕ್ ಪಾಂಡ್ಯ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ. ಅವರಿಗೆ ವೈದ್ಯರು ಸಣ್ಣ ವಿಶ್ರಾಂತಿ ನೀಡಲು ಹೇಳಿದ್ದಾರೆ. ಹೀಗಾಗಿ ಅವರು ಕಿವೀಸ್ ವಿರುದ್ಧದ ಪಂದ್ಯಕ್ಕೆ ಧರ್ಮಶಾಲಕ್ಕೆ ತೆರಳುವುದಿಲ್ಲ. ಎನ್ಸಿಎಯಲ್ಲೇ ವ್ಯಾಯಮ ನಡೆಸಿ ನೇರವಾಗಿ ಲಕ್ನೋಗೆ ಬಂದು ತಂಡ ಸೇರಲಿದ್ದಾರೆ” ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಮೊದಲ ಓವರ್ನಲ್ಲೇ ಗಾಯಗೊಂಡ ಪಾಂಡ್ಯ
ಪಂದ್ಯದ 9ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಅವರು ಲಿಟನ್ ದಾಸ್ ಬಾರಿಸಿದ ಬೌಂಡರಿ ತಡೆಯುವ ಯತ್ನದಲ್ಲಿ ಸ್ಲಿಪ್ ಆಗಿ ಕೆಳಗೆ ಬಿದ್ದರು. ಕೂಡಲೇ ಫಿಸಿಯೊ ಮೈದಾನಕ್ಕೆ ಧಾವಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ ನೋವಿನಿಂದಾಗಿ ಮೈದಾನ ತೊರೆದರು. ಪಾಂಡ್ಯ ಅವರ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಅವರು ಪೂರ್ಣಗೊಳಿಸಿದರು. ಗಾಯಗೊಂಡು ಮೈದಾನದಿಂದ ಹೊರ ನಡೆದ ಪಾಂಡ್ಯ ಸಂಪೂರ್ಣವಾಗಿ ಪಂದ್ಯದಿಂದ ಹೊರಗುಳಿದರು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಅವರು ಬದಲಿ ಆಟಗಾರನಾಗಿ ಫೀಲ್ಡಿಂಗ್ ನಡೆಸಿದ್ದರು.
ಇದನ್ನೂ ಓದಿ ICC World Cup 2023 : ನ್ಯೂಜಿಲ್ಯಾಂಡ್ಗೆ ಸೆಡ್ಡು ಹೊಡೆಯಲು ಧರ್ಮಶಾಲಾಗೆ ಹಾರಿದ ರೋಹಿತ್ ಬಳಗ
ನಿಟ್ಟುಸಿರು ಬಿಟ್ಟ ಬಿಸಿಸಿಐ
ಹಾರ್ದಿಕ್ ಪಾಂಡ್ಯ ಅವರಿಗೆ ಗಾಯವಾದಾಗ ಬಿಸಿಸಿಐ ಮತ್ತು ತಂಡ ಆತಂಕಕ್ಕೆ ಒಳಗಾಗಿತ್ತು. ಅವರಿಗೆ ಗಂಭೀರ ಸ್ವರೂಪದ ಗಾಯವಾಗಿ ಟೂರ್ನಿಯಿಂದ ಹೊರಬಿದ್ದರೆ ಬದಲಿ ಅವರ ಸ್ಥಾನಕ್ಕೆ ಸೂಕ್ತ ಆಟಗಾರನಿಲ್ಲ ಎಂಬ ಭಯದಲ್ಲಿತ್ತು. ಆದರೆ ಸದ್ಯ ಈ ಆತಂಕ ದೂರವಾಗಿದೆ. ಪಾಂಡ್ಯ ಒಂದು ಒಂದು ಪಂದ್ಯಕ್ಕೆ ವಿಶ್ರಾಂತಿ ಪಡೆದು ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಮತ್ತೆ ವಾಪಸ್ ಆಗಲಿದ್ದಾರೆ.
🚨 NEWS 🚨
— BCCI (@BCCI) October 20, 2023
Medical Update: Hardik Pandya 🔽 #CWC23 | #TeamIndiahttps://t.co/yiCbi3ng8u
ಬೌಲಿಂಗ್ ಕಷ್ಟ
ಪಾಂಡ್ಯ ಅವರು ತಂಡಕ್ಕೆ ಸೇರಿದರೂ ಕೆಲ ಪಂದ್ಯಗಳಲ್ಲಿ ಬೌಲಿಂಗ್ ನಡೆಸುವುದು ಅನುಮಾನ ಎನ್ನಲಾಗಿದೆ. ಅಲ್ಲದೆ ಪೂರ್ಣ ಪ್ರಮಾಣದ ಫೀಲ್ಡಿಂಗ್ ಕೂಡ ಕಷ್ಟ ಎನ್ನಲಾಗಿದೆ. ಅವರು ಬ್ಯಾಟಿಂಗ್ ರೋಲ್ ಮಾತ್ರ ನಿಭಾಯಿಸಲಿದ್ದಾರೆ. ಸಂಪೂರ್ಣ ಫಿಟ್ ಆದ ಬಳಿಕ ಬೌಲಿಂಗ್ ನಡೆಸುವ ಸಾಧ್ಯತೆ ಇದೆ. ಪಾಂಡ್ಯ ಅವರು ಬೌಲಿಂಗ್ ನಡೆಸದೇ ಹೋದರೆ ಶಾರ್ದೂಲ್ ಠಾಕೂರ್ ಅವರನ್ನು ಕೈ ಬಿಟ್ಟು ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಬಹುದು. ಏಕೆಂದರೆ ಶಮಿ 10 ಓವರ್ ಮಾಡಬಲ್ಲರು. ಬುಮ್ರಾ ಮತ್ತು ಸಿರಾಜ್ ಕೂಡ 10 ಓವರ್ ಮಾಡುವ ಕಾರಣ 30 ಓವರ್ಗಳು ವೇಗಿಗಳ ಕೋಟದಿಂದ ಪೂರ್ತಿಗೊಳ್ಳಲಿದೆ. ಉಳಿದ 20 ಓವರ್ಗಳನ್ನು ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ನಿಭಾಯಿಸಬಲ್ಲರು.