Site icon Vistara News

Hardik Pandya | ನೀರು ತಂದುಕೊಡದ ಸಹ ಆಟಗಾರರನ್ನು ನಿಂದಿಸಿದ ಹಾರ್ದಿಕ್​ ಪಾಂಡ್ಯ, ನೆಟ್ಟಿಗರ ಟೀಕೆ

Hardik Pandya

ಕೋಲ್ಕೊತಾ : ಹಾರ್ದಿಕ್ ಪಾಂಡ್ಯ (Hardik Pandya) ಭಾರತ ತಂಡದ ಅವಶ್ಯಕ ಆಲ್​ರೌಂಡರ್​. ತಂಡದ ನಾಯಕರಾಗಿಯೂ ಅವರ ಯಶಸ್ಸು ಕಾಣುತ್ತಿದ್ದಾರೆ. ಲಂಕಾ ವಿರುದ್ಧದ ಏಕ ದಿನ ಸರಣಿಯಲ್ಲಿ ಉಪನಾಯಕ. ಹೀಗಾಗಿ ಇನ್ನು ಮುಂದೆ ಪಾಂಡ್ಯ ಯುಗ ಎಂದೂ ಹೇಳಲಾಗುತ್ತಿದೆ. ಆದರೆ ಮೈದಾನದಲ್ಲಿ ಅವರ ವರ್ತನೆಗಳು ಅಭಿಮಾನಿಗಳ ಬೇಸರಕ್ಕೂ ಕಾರಣವಾಗುತ್ತಿದೆ. ಅಂಥದ್ದೇ ಒಂದು ಪ್ರಸಂಗ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕ ದಿನ ಸರಣಿಯ ಎರಡನೇ ಪಂದ್ಯದ ವೇಳೆ ನಡೆಯಿತು. ತಮಗೆ ನೀರು ತಂದುಕೊಡದ ಸಹ ಆಟಗಾರನಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅವರ ಬಗ್ಗೆ ಕ್ರಿಕೆಟ್​ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ಇನಿಂಗ್ಸ್​ನ 11ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ಅದಕ್ಕಿಂತ ಮೊದಲಿನ ಓವರ್​ನಲ್ಲಿ ಡಗ್​ಔಟ್​ನಲ್ಲಿ ಕುಳಿತಿದ್ದ ಆಟಗಾರನ ಬಳಿ ನೀರು ತರುವಂತೆ ಕೋರಿಕೊಂಡಿದ್ದರು. ಆದರೆ, ಓವರ್​ ಮುಕ್ತಾಯಗೊಂಡ ಬಳಿಕವೂ ತಂದುಕೊಟ್ಟಿರಲಿಲ್ಲ. ಇದರಿಂದ ಕೆರಳಿದ ಪಾಂಡ್ಯ, ನಾನು ಇಲ್ಲಿ ಬಾಯಾರಿಕೆಯಿಂದ ಸಾಯುತ್ತಿದ್ದನೇ. ನೀನು ಇನ್ನೂ ನೀರು ತಂದುಕೊಟ್ಟಿಲ್ಲ ಎಂಬುದಾಗಿ ನಿಂದಿಸಿದ್ದಾರೆ. ಹೇಳುವಾಗ ಅವಾಚ್ಯ ಪದಗಳನ್ನೂ ಸೇರಿಸಿದ್ದಾರೆ.

ಪಾಂಡ್ಯ ನಿಂದನೆ ಮಾಡುತ್ತಿರುವ ಆಡಿಯೊ ಮೈಕ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದು ನೇರ ಪ್ರಸಾರದ ಟಿವಿಯಲ್ಲೂ ಕಾಣಿಸಿಕೊಂಡಿದೆ. ತಕ್ಷಣ ನೆಟ್ಟಿಗರು ಈ ವಿಡಿಯೊವನ್ನು ಶೇರ್​ ಮಾಡಿ ಪಾಂಡ್ಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯ ಮಾಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಲಂಕಾ ವಿರುದ್ಧದ ಏಕ ದಿನ ಸರಣಿಯ ಎರಡನೇ ಪಂದ್ಯಕ್ಕೂ ಮೊದಲು ಐದು ಹಣಾಹಣಿಗಳಲ್ಲಿ ಪಾಲ್ಗೊಂಡಿದ್ದಾರೆ. 30 ರನ್​ ಬಾರಿಸಿದ್ದು ಬಿಟ್ಟರೆ ಒಂದೆರಡು ವಿಕೆಟ್​ ಮಾತ್ರ ಕಬಳಿಸಿದ್ದಾರೆ. ಮೈದಾನದಲ್ಲಿ ಅವರ ಅಹಂಕಾರ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಆದಿತ್ಯ ಎಂಬುವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | INDvsSL | ಪಂದ್ಯ ಮುಗಿಯುವ ಮೊದಲೇ ಹ್ಯಾಂಡ್​ ಶೇಕ್​; ನಾಯಕ ಹಾರ್ದಿಕ್​ ಪಾಂಡ್ಯ ಮಾಡಿದ್ದು ತಪ್ಪೊ, ಸರಿಯೊ?

Exit mobile version